- ರಾಘವೇಂದ್ರ ಅಡಿಗ ಎಚ್ಚೆನ್. 

ಮಂಡ್ಯ ನಾಗರಾಜ್ ನಿರ್ದೇಶನದ ಅವಳೆ ಕಾಂಚನಾ ಚಿತ್ರದ ಟ್ರೈಲರ್ ಬಿದುಗಡೆ ಸಮಾರಂಭ ಇತ್ತೀಚೆಗೆ ರೇಣುಕಾಂಭ ಸ್ಟುಡಿಯೋದಲ್ಲಿ ನೆರವೇರಿದೆ. ಹಿರಿಯ ಪತ್ರಕರ್ತರಾದ ಕೆಜೆ ಕುಮಾರ್ ಅವರು ಟ್ರೈಅಲ್ರ್ ಲಾಂಚ್ ಮಾಡಿದ್ದಾರೆ. ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್.ಆರ್.ಕೆ. ವಿಶ್ವನಾಥ್ ಮತ್ತು ಇಡಿಯ ಚಿತ್ರತಂಡ ಕಾರ್ಯಕ್ರಮದಲ್ಲಿ ಹಾಜರಿದ್ದರು.

ನಿರ್ದೇಶಕ ನಾಗರಾಜ್ ಅವರು ಮಾತನಾಡಿ " ಈ ಚಿತ್ರವನ್ನು ನಾನೇ ನಿರ್ದೇಶನ ಮಾಡಿ ಪ್ರೊಡ್ಯೂಸ್ ಮಾಡಿದ್ದೇನೆ ಇದು ನನ್ನ 18ನೇ ಸಿನಿಮಾ  ಇದರಲ್ಲಿ ಬಹುತೇಕರು ಹೊಸ ಕಲಾವಿದರು ಇದ್ದಾರೆ. ಹಿರಿಯ ಕಲಾವಿದೆ ಅಪೂರ್ವ ಸಹ ಇದರಲ್ಲಿ ಅಭಿನಯಿಸಿದ್ದಾರೆ." ಎಂದರು.

ಮುಂದುವರಿದು "ಅವಳೇ ಕಾಂಚನ ಒಂದು ಸಾಂಸಾರಿಕ ಚಿತ್ರ ಇದರಲ್ಲಿ ಲವ್ ಫ್ಯಾಮಿಲಿ ಕಥೆ ಇದೆ, ಒಂದು ಫ್ಯಾಮಿಲಿ ವಿಚಾರಕ್ಕೆ ಸಂಬಂಧಪಟ್ಟಂತೆ ಒಂದು ವಾದ ವಿವಾದಗಳು ನಡೆಯುತ್ತದೆ ಊರಲ್ಲಿ ಎರಡು ಕುಟುಂಬವಿರುತ್ತದೆ  ಅದರಲ್ಲಿ ಒಬ್ಬ ಯಜಮಾನ ಊರು ಗೌಡನ ಮಗ ಇನ್ನೊಂದು ಊರು ಗೌಡನ ಮಗಳನ್ನ ಲವ್ ಮಾಡ್ತಾ ಇರ್ತಾನೆ ಅದು ಅವರಿಗೆ ಇಷ್ಟ ಆಗಲ್ಲ ಹಾಗಾಗಿ ವಿರೋಧ ಮಾಡ್ತಾರೆ ಈ ಎರಡು ಕುಟುಂಬಗಳ ವಿರೋಧಗಳ ನಡುವೆ ನಡೆಯುವಂತಹ ಒಂದು ಕಥೆನೇ ಅವಳೇ ಕಾಂಚಾನ, ಮುಂದೆ ಏನಾಗುತ್ತೆ ಅನ್ನೋದು ಸಿನಿಮಾದಲ್ಲಿ ನೋಡಿ ತಿಳಿದುಕೊಳ್ಳಿ.  ಶೂಟಿಂಗ್ ಮುಗಿದಿದೆ. ಸಿನಿಮಾದಲ್ಲಿ ಭೀಮಣ್ಣ ನಾಯಕ್ ಪ್ರಮುಖ ವಿಲನ್ ಪಾತ್ರ ಮಾಡಿದ್ದಾರೆ ಜನಾರ್ಧನ್ ನಾಯಕನಾಗಿ ಮಾಡಿದ್ದಾರೆ  ಪ್ರಿಯಾ ನಾಗಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.  ನಿತ್ಯ ಅವರು ಪೋಷಕ ಪಾತ್ರ ಮಾಡಿದ್ದಾರೆ ಹರಿಣಿ ಅವರು ಎರಡನೇ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದರ ಮಧ್ಯ ನಮ್ಮ ಮಂಡ್ಯದವರೇ ಶಂಕರೇಗೌಡ ಅವರು ತಿಥಿ ಸಿನಿಮಾದಲ್ಲಿ ಅಭಿನಯಿಸಿರುವ ಹಿರಿಯ ಕಲಾವಿದರು, ಅವರು ಇದ್ದಾರೆ ರಂಗಸ್ವಾಮಿ್ ಬನ್ನೂರು ಇದ್ದಾರೆ ಎಂದು ಚಿತ್ರತಂಡದವರ ಪರಿಚಯ ಮಾಡಿಸಿದರು.
ನಾಯಕ ನಟ ಜನಾರ್ಧನ್ ಮಾತನಾಡಿ ನಿರ್ದೇಶಕ ಹಗೂ ಇಡೀ ಚಿತ್ರತಂಡಕ್ಕೆ ಧನ್ಯವಾದ ಸಮರ್ಪಿಸಿದರು. ಬಳಿಕ ನಾಯಕ ನಟಿ ಪ್ರಿಯಾ ನಾಗಣ್ಣ ಮಾತಮಾಡಿ "ನನಗೆ ಮೊದಲು ನಾಯಕ ನಟಿಯಾಗಿ ಅಭಿನಯಿಸಲು ಅವಕಾಶ ಕೊಟ್ಟ ನಿರ್ದೇಶಕ ನಾಗರಾಜ್ ಅವರಿಗೆ ವಂದಿಸುತ್ತೇನೆ ಎಂದರು. ಅಲ್ಲದೆ ಇದಕ್ಕೆ ಮುನ್ನ ತಾನು ಅನೇಕ ಚಿತ್ರಗಳಲ್ಲಿ ಪೋಷಕ ಕಲಾವಿದೆಯಾಗಿ ಕಾಣಿಸಿಕೊಂಡಿದ್ದೇನೆ. ಆದರೆ ನನ್ನ ಮೇಲೆ ನಂಚಿಕೆ ಇಟ್ಟು ಈ ಪಾತ್ರ ಕೊಟ್ಟಿದ್ದಾರೆ ಎಂದರು. ಈ ಸಿನಿಮಾ ಒಂದು ಫ್ಯಾಮಿಲಿ ಎಂಟರ್ಟೈನರ್ ಆಗಿದೆ. ಪರಿವಾರ ಕುಳಿತು ವೀಕ್ಷಿಸಬಹುದು. ಹಾರರ್ ಅಲ್ಲದೆ ಫ್ಯಾಮಿಲಿ ಎಂಟರ್ಟೈನಿಂಗ್ ಗೆ ಬೇಕಾಗಿರುವುದೆಲ್ಲಾ ಈ ಚಿತ್ರದಲ್ಲಿದೆ. ಹಾಗಾಗಿ ಯಾರೂ ಮಿಸ್ ಮಾಡದೆ ಪರಿವಾರ ಸಮೇತವಾಗಿ ಥಿಯೇಟರ್ ನಲ್ಲಿ ಕುಳಿತು ಸಿನಿಮಾ ನೋಡಿ ಎಂದು ಮನವಿ ಮಾಡಿದರು.
ಚಿತ್ರದ ಇನ್ನೊಬ್ಬ ನಾಯಕಿ ಹರಿಣಿ ನಟರಾಜ್ ಮಾತನಾಡಿ ಎಲ್ಲರೂ ಥಿಯೇಟರ್ಗೆ ಬಂದು ಸಿನಿಮಾ ನೋಡಿ, ನಾನು ಕಳೆದ ತಿಂಗಳು ನೋಡಿರುವ ಅನುಭವ ಹೇಳುತ್ತೇನೆ. ಕನ್ನಡ ಸಿನಿಮಾ ಥ್ಯೇಟರ್ ಗೆ ಬಂಡಾಗ ಜನ ಇರಲಿಲ್ಲ. ಪಕ್ಕದಲ್ಲೇ ತೆಲುಗು ಸಿನಿಮಾ ಹೌಸ್ ಫುಲ್ ಆಗಿ ಓಡುತ್ತಿತ್ತು. ಇದು ನನಗೆ ಬೇಸರದ ಸಂಗತಿ. ಹಾಗಾಗಿ ಪ್ರತಿಯೊಬ್ಬರೂ ಕನ್ನಡ ಸಿನಿಮಾ ನೋಡಿ ಬೆಂಬಲಿಸಿ ಎಂದು ಕೇಳುತ್ತೇನೆ. ನಮ್ಮದು ಹೊಸ ತಂಡ, ನೀವು ಬೆಂಬಲಿಸಿದರೆ ನಾವು ಬೆಳೆಯಬಹುದು ಎಂದರು.
ಇನ್ನು ಹಿರಿಯ ಪತ್ರಕರ್ತ ಕೆಜೆ ಕುಮಾರ್ ಮಾತನಾಡಿ  " ನನಗೆ ಸಿನಿಮಾರಂಗದ ಜೊತೆ  50 ವರ್ಷ ನಂಟಿದೆ.  ಈ ಸಿನಿಮಾ ಒಂದು ಹಾರರ್ ಮತ್ತೆ ಎಂಟರ್ಟೈನ್ಮೆಂಟ್ ತರ ಕಾಣುತ್ತದೆ. ಮಂಡ್ಯ ನಾಗರಾಜರ 18ನೇ ಸಿನಿಮಾ ಅವರು ಮಂಡ್ಯದವರು ಮಂಡ್ಯದವರು ಅಂದ್ರೆ ಭಾಷೆಯ ಶೈಲಿಯೇ ಸಿನಿಮಾದಲ್ಲಿ ಚೆನ್ನಾಗಿ ಬಂದಿದೆ ಅಂತ ಕಾಣುತ್ತಿದೆ. ಈ ಸಿನಿಮಾಗೆ ಎಲ್ಲಾ ರೀತಿ ಯಶಸ್ಸು ಸಿಗಲಿ ಅಂತ ಹಾರೈಸುತ್ತೇನೆ" ಎಂದರು.
ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ. ವಿಶ್ವನಾಥ್ ಮಾತನಾಡಿ "ನನಗೆ ಮಂಡ್ಯ ನಾಗರಾಜ್ ಅವರು ನೆನಪಾಗೋದು ಒಂದು 35 ಇಯರ್ಸ್ ಹಿಂದೆ ಕಥೆ ಅದು ಅವರು ನಮ್ಮೂರ ರಾಮಾಯಣ ಸಿನಿಮಾ ಮಾಡುವ ಸಂದರ್ಭ ಸಂತೋಷ್ ಹೋಟೆಲ್ ಕೆಳಗೆ ಅವರು ಒಂದು ಯೂನಿಟ್ ಇಟ್ಕೊಂಡು ಸಿನಿಮಾಕ್ಕೆ ಅವಾಗ ಆ ಸಂದರ್ಭದಲ್ಲಿ ಮಂಡ್ಯದಿಂದ ಬಂದು ಸಿನಿಮಾನೇ ಜೀವನ ಅಂತ ಆವತ್ತಿನಿಂದ ಇವತ್ತಿನವರೆಗೆ ಮಂಡ್ಯ ನಾಗರಾಜ್ ಅವರಲ್ಲಿ ಚೂರೂ ಬದಲಾವಣೆ ಇಲ್ಲ.   ಅವರ ಬಾಡಿಯಲ್ಲೂ ಇಲ್ಲ ಆಮೇಲೆ ಜೇಬಲ್ಲೂ ಇಲ್ಲ ಎಲ್ಲೂ ಇಲ್ಲ ಆದರೆ ಅವತ್ತಿಂದ ಇವತ್ತಿನವರೆಗೂ ಅವರು ನೋಡುವಾಗ ನನಗೊಂದು ಖುಷಿಯಾಗುವುದು ಏನಂದ್ರೆ ಸಿನಿಮಾ ಓಡುತ್ತೋ ಬಿಡುತ್ತೋ ಜನರು ಗೆಲ್ಸ್ತಾರೋ ಇಲ್ವೋ ಅದು ಗೊತ್ತಿಲ್ಲ ಅವರಿಗೆ ಬಟ್ ನಾನು ನಿರಂತರವಾಗಿ ಸಿನಿಮಾವನ್ನು ಮಾಡಬೇಕು ಅಂತ ಹಠ ತೊಟ್ಟು ಸಿನಿಮಾ ಮಾಡ್ತಾರಲ್ಲ ಅದಕ್ಕೆ ನಾವು ಅವರನ್ನ ಅಭಿನಂದಿಸಲೇಬೇಕು ಆಮೇಲೆ ಸಿನಿಮಾ ಸಿನಿಮಾ ಯಾವುದೇ ಸ್ವಾರ್ಥ ಇಲ್ಲದೆ ಅಂದ್ರೆ ಕೆಲವರು ಸಿನಿಮಾ ಒಂದೊಂದು ಉದ್ದೇಶಕ್ಕೋಸ್ಕರ ಮಾಡ್ತಾರೆ ಅವರ 40 ವರ್ಷ ಜರ್ನಿ ಅಂತ ಅನ್ಕೋತೀನಿ  ನಾನುಸಿನಿಮಾದು  ಜಾಸ್ತಿನೇ ಆಗಿದೆ 18 ಸಿನಿಮಾ ಮಾಡಿದ್ದಾರೆ ಬಟ್ ಒಂದಲ್ಲ ಒಂದು ಸಿನಿಮಾವನ್ನು ಅವರು ಮಾಡಿಕೊಂಡು ಹೋಗುವಾಗ ಸಿನಿಮಾದಲ್ಲಿ ಏನಾದರೂ ಪ್ರತಿಫಲ ಸಿಗಲೇಬೇಕು ಪ್ರತಿಫಲ ಸಿಗುವಾಗ ಆಗಬೇಕಾದರೆ ಪ್ರೇಕ್ಷಕರು ಸಿನಿಮಾವನ್ನು ನೋಡಬೇಕು ಸಿನಿಮಾವನ್ನು ಗೆಲ್ಸ್ಬೇಕು ಅವಾಗ ಮಂಡ್ಯ ನಾಗರಾಜ್ ಅವರು ಅವರಿಗೆ ಎಷ್ಟೇ ಯಶಸ್ಸು ಸಿಕ್ಕಿದ್ರು ಕೂಡ ವ್ಯಕ್ತಿತ್ವ ಬದಲಾಗಲ್ಲ ಅವರದು ಹೀಗೇನೆ ಇರ್ತಾರೆ ಆದರೆ ಒಳ್ಳೆ ಒಳ್ಳೆ ಸಿನಿಮಾಗಳು ಇನ್ನಷ್ಟು ಬರುತ್ತೆ ಅನ್ನೋ ಒಂದು ಅಭಿಪ್ರಾಯ ನಂದು ಹಾಗೆ ನನಗೆ ಇವತ್ತು ಸಿನಿಮಾ ಟೈಟಲ್ ನೋಡಿದಾಗ ನನಗೆ ಅನಿಸಿದ್ದು ಶಂಕರ್ ನಾಗ್ ಸರ್ ಅಭಿನಯ ಮಾಡಿದಂತಹ ಅಂತ ಸಿಬಿ ಶಂಕರ್ ನಾವು ಪ್ರಾರಂಭದಲ್ಲಿ ಹೆಜ್ಜೆ ಇಟ್ಟ ಸಿನಿಮಾ ಅದು ಕಾಂಚನ ಸಾಂಗ್ ನನಗೆ ನೆನಪಾಗ್ತಾ ಇದೆ ಒಂದು ಅವಳೇ ಕಾಂಚನ ಸಿನಿಮಾ ಟೈಟಲ್ ಅಂತೂ ತುಂಬಾ ಚೆನ್ನಾಗಿದೆ ಅದರ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಹೇಳಿದ್ದಾರೆ ಫ್ಯಾಮಿಲಿ ಸೆಂಟಿಮೆಂಟ್ ಜೊತೆ ಹಾರರ್ ಟಚ್ ಅನ್ನು  ಇಟ್ಕೊಂಡಿದ್ದಾರೆ ಅದರ ಜೊತೆಗೆ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದಾರೆ ಅವರ ಜೊತೆ ಇರುವಂತಹ ಒಂದು ಮೂರು ನಾಲ್ಕು ಜನ ಓಲ್ಡ್ ಆರ್ಟಿಸ್ಟ್ ಗಳನ್ನು ಬಿಟ್ರೆ ಬಾಕಿ ಹೊಸ ಕಲಾವಿದರನ್ನು ಹಾಕೊಂಡು ಸಿನಿಮಾ ಮಾಡಿದ್ದಾರೆ ಅದರಿಂದ ಮಂಡ್ಯ ನಾಗರಾಜ್ ಅವರು ನಮ್ಮ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸಮಿತಿ ಸದಸ್ಯರು ಕೂಡ ಹೌದು ಆದ್ದರಿಂದ ಅವರು ಮಾಡುವಂತಹ ಈ ಸಿನಿಮಾಕ್ಕೆ ಎಲ್ಲಾ ಮಾಧ್ಯಮ ಮಿತ್ರರಿಂದ ಹಾಗೂ ಎಲ್ಲಾ ಪ್ರೇಕ್ಷಕರಿಂದ ಅವರಿಗೆ ಸಪೋರ್ಟ್ ಸಿಗಬೇಕು ಅವರ ಸಿನಿಮಾಕ್ಕೆ ಯಶಸ್ವಿ ಸಿಗಲಿ ಯಶಸ್ಸು ಆಗಲಿ ಅಂತ ಹೇಳುತ್ತಾ ಹಾಗೆ ಅವರ ಚಿತ್ರತಂಡಕ್ಕೂ ಶುಭವಾಗಲಿ " ಎಂದು ಶುಭ ಹಾರೈಸಿದರು.
ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಮಾತನಾಡಿ "ಹಿಂದೊಮ್ಮೆ ದ್ವಾರಕೀಶ್ ಹೇಳುತ್ತಿದ್ದರು ರೈಲಿನಲ್ಲಿ ಹಣ ಬರುತ್ತೆ ನೋಡುತ್ತಿರು ಅಂತ.. ಹಾಗೆಯೇ ಅವಳೇ ಕಾಂಚನ ಚಿತ್ರ ಸಿನಿಮಾ ಮಂದಿರಲ್ಲಿ ಚೆನ್ನಾಗಿ ಓಡಿ ನಿರ್ಮಾಪಕರಿಗೆ ರೈಲಿನಲ್ಲಿ ಹಣ ಬರುವಂತಾಗಲಿ ಎಂದು ಹಾರೈಸಿದ್ದಾರೆ.
ಇದರೊಡನೆ ಚಿತ್ರತಂಡದ ಸದಸ್ಯರು ತಮ್ಮ ಚಿತ್ರವನ್ನು ಪ್ರೇಕ್ಷಕರೆಲ್ಲಾ ಸಿನಿಮಾ ಮಂದಿರದಲ್ಲಿ ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ