ಬೆಂಗಳೂರಿನಲ್ಲಿ ಜೂನ್ ತಿಂಗಳಿನಲ್ಲಿ ಅವಳ ಹೆಜ್ಜೆ ಮಹಿಳಾ ಕಿರುಚಿತ್ರೋತ್ಸವ-2025 ಹಮ್ಮಿಕೊಳ್ಳಲಾಗಿದ್ದು,ಇದಕ್ಕೆ ಸಂಬಂಧಿಸಿದಂತೆ ಕಿರುಚಿತ್ರ ಸ್ಪರ್ಧೆ ಮತ್ತು ಚಿತ್ರಕಥೆ ಸ್ಪರ್ಧೆ ಯನ್ನು ಏರ್ಪಡಿಸಲಾಗಿದೆ.

ಕಿರುಚಿತ್ರ ಸ್ಪರ್ಧೆ: ಕಿರುಚಿತ್ರ ಪ್ರದರ್ಶನದ ಪರಿಗಣನೆಗಾಗಿ ತಮ್ಮ ಕಿರುಚಿತ್ರವನ್ನು ಸಲ್ಲಿಸಲು ರಾಜ್ಯದ ಮಹಿಳಾ ನಿರ್ಮಾಪಕ, ನಿರ್ದೇಶಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಾರ್ಚ್ 31 ರೊಳಗೆ ​ಕಿರುಚಿತ್ರ ಸಲ್ಲಿಸಿದಲ್ಲಿ ಪ್ರವೇಶ ಶುಲ್ಕದಿಂದ ರಿಯಾಯಿತಿ ನೀಡಲಾಗುವುದು ಎಂದು ಅವಳ ಹೆಜ್ಜೆ ಸಂಸ್ಥಾಪಕಿ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.

ಅರ್ಜಿಯನ್ನು www.avalahejje.net ಮೂಲಕ ಸಲ್ಲಿಸಬಹುದಾಗಿದೆ. ಅತ್ಯುತ್ತಮ ಕಿರುಚಿತ್ರಕ್ಕೆ ಅವಳ ಹೆಜ್ಜೆ ನಗದು ಬಹುಮಾನ 1,00,000 ರೂ ನೀಡಲಾಗುತ್ತದೆ. ಜೊತೆಗೆ, ಈ ಕೆಳಗಿನ ವಿಶೇಷ ವರ್ಗಗಳಲ್ಲಿ ತಲಾ ಒಂದು ಚಿತ್ರಕ್ಕೆ ಮೆಚ್ಚುಗೆಯ ಬಹುಮಾನ ನಗದು 10,000 ರೂ ಪಡೆಯುವ ಅವಕಾಶವಿದೆ.

 

ಅತ್ಯುತ್ತಮ ಜೀವನಚರಿತ್ರೆಯ ಚಿತ್ರ
ಅತ್ಯುತ್ತಮ ಅನಿಮೇಶನ್ ಚಿತ್ರ
ಅತ್ಯುತ್ತಮ ಮಕ್ಕಳ ಚಲನಚಿತ್ರ
ಅತ್ಯುತ್ತಮ ಪ್ರಥಮ ನಿರ್ದೇಶನದ ಚಿತ್ರ
ಅತ್ಯುತ್ತಮ ವಿದ್ಯಾರ್ಥಿನಿಯ ಚಿತ್ರ
ಅತ್ಯುತ್ತಮ ಕ್ರೀಡಾ ವಿಷಯದ ಚಿತ್ರ
ಅತ್ಯುತ್ತಮ ಸಂರಕ್ಷಣಾ ವಿಷಯದ ಚಿತ್ರ
ರಾಜಕೀಯ/ಪ್ರಜಾಪ್ರಭುತ್ವ ವಿಷಯದ ಅತ್ಯುತ್ತಮ ಚಲನಚಿತ್ರ​​.

ಅರ್ಜಿಯನ್ನು www.avalahejje.net ಮೂಲಕ ಸಲ್ಲಿಸಬೇಕಿದೆ.
ಕಿರುಚಿತ್ರ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 30, ಪ್ರವೇಶ ಶುಲ್ಕ 1000 ರೂ.
ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಾರ್ಚ್ 31 ರೊಳಗೆ ​ಕಿರುಚಿತ್ರ ಸಲ್ಲಿಸಿದಲ್ಲಿ ಪ್ರವೇಶ ಶುಲ್ಕ ಇರುವುದಿಲ್ಲ.

ಚಿತ್ರಕಥಾ ಸ್ಪರ್ಧೆ:
ಚಿತ್ರ ನಿರ್ಮಾಣ ಮಾಡಲಿಚ್ಚಿಸುವ ಉದಯೋನ್ಮುಖ ಮಹಿಳಾ ನಿರ್ದೇಶಕರಿಗಾಗಿ ಚಿತ್ರಕಥಾ ಸ್ಪರ್ಧೆಯನ್ನು ಸಹಾ ಏರ್ಪಡಿಸಲಾಗಿದೆ.

ಆಯ್ಕೆಯಾದ ಅತ್ಯುತ್ತಮ ಚಿತ್ರಕಥೆಗೆ ನಿರ್ಮಾಣದಲ್ಲಿ ನುರಿತರಿಂದ ಮಾರ್ಗದರ್ಶನದ ಜೊತೆಗೆ ಗರಿಷ್ಟ 1,00,000 (ಒಂದು ಲಕ್ಷ),ಚಿತ್ರ ನಿರ್ಮಾಣ ಅನುದಾನ ವನ್ನು ನಿರ್ಮಾಣದ ಅನೇಕ ಹಂತದಲ್ಲಿ ಕಂತಿನ ಮೂಲಕ ನೀಡಲಾಗುವುದು. ಆಯ್ಕೆಯನ್ನು ಜೂನ್ ತಿಂಗಳಿನಲ್ಲಿ ನಡೆಯಲಿರುವ ಕಿರುಚಿತ್ರೋತ್ಸವ ಸಮಾರಂಭದಲ್ಲಿ ಪ್ರಕಟಿಸಲಾಗುವುದು.

ಆಸಕ್ತ ಮಹಿಳೆಯರು ಚಿತ್ರಕಥೆಯನ್ನು ಪ್ರತ್ಯೇಕ ಅರ್ಜಿ ಸಲ್ಲಿಸುವ ಮೂಲಕ ಚಿತ್ರ ನಿರ್ಮಾಣ ಅನುದಾನಕ್ಕೆ ಸ್ಪರ್ಧಿಸಬಹುದಾಗಿದೆ.

ಚಿತ್ರ ನಿರ್ಮಾಣ ಅನುದಾನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 30, ಪ್ರವೇಶ ಶುಲ್ಕ 1000 ರೂ.ಅರ್ಜಿಯನ್ನು www.avalahejje.net ಮೂಲಕ ಸಲ್ಲಿಸಬೇಕಿದೆ.

ಮಹತ್ವಾಕಾಂಕ್ಷಿ ಚಿತ್ರ ನಿರ್ಮಾಪಕಿ/ನಿರ್ದೇಶಕಿಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ಅತ್ಯಾಕರ್ಷಕ ನಗದು ಬಹುಮಾನಗಳನ್ನು ಗೆಲ್ಲಲು ಮತ್ತು ಲಿಂಗ ಸಮಾನತೆಯ ನಿಟ್ಟಿನಲ್ಲಿ ಕೊಡುಗೆ ನೀಡಲು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಅವಳ ಹೆಜ್ಜೆಯ ಸ್ಥಾಪಕಿ ಶಾಂತಲಾ ದಾಮ್ಲೆ ಮನವಿ ಮಾಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮಹಿಳೆಯರಿಗೆ ಬಲವಾದ ಪಾತ್ರಗಳ ತೀವ್ರ ಕೊರತೆಯಿದೆ ಎಂಬುದು ಸ್ಪಷ್ಟ. ಮಹಿಳೆಯರೇ ಚಿತ್ರ ನಿರ್ಮಾಣ, ಚಿತ್ರ ನಿರ್ದೇಶನ ಹೆಚ್ಚಾಗಿ ಮಾಡಿದಲ್ಲಿ ಮಹಿಳಾ ಮುಖ್ಯಪಾತ್ರಗಳಿಗೆ, ಮಹಿಳೆಯರ ಅನುಭವ ಮತ್ತು ದೃಷ್ಟಿಕೋನಗಳಿಗೆ ವೇದಿಕೆ ಸೃಷ್ಟಿಸಲು ಸಾಧ್ಯವಾಗುತ್ತದೆ ಎಂಬುದು ಅವಳ ಹೆಜ್ಜೆಯ ನಿಲುವಾಗಿದೆ ಅವರು ತಿಳಿಸಿದ್ದಾರೆ.

ಅವಳ ಹೆಜ್ಜೆ ಮಹಿಳಾ ಕಿರುಚಿತ್ರೋತ್ಸವವನ್ನು 2025 ಜೂನ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಸಲಾಗುವುದು. ಸಿನಿಮಾದಲ್ಲಿ ಮಹಿಳೆಯರ ಧ್ವನಿಯನ್ನು ಹೆಚ್ಚಿಸಲು ಮತ್ತು ಸಮಾನತೆಯತ್ತ ದಿಟ್ಟ ಹೆಜ್ಜೆಗಳನ್ನು ಇಡಲು ಈ ಚಿತ್ರೋತ್ಸವದಲ್ಲಿ ಭಾಗವಹಿಸಬೇಕೆಂದು ಶಾಂತಲಾ ದಾಮ್ಲೆ ಕೋರಿದ್ದಾರೆ.

ಹೆಚ್ಚಿನ ವಿವರಗಳು ಮತ್ತು ಸಲ್ಲಿಕೆ ಮಾರ್ಗಸೂಚಿಗಳಿಗಾಗಿ, www.avalahejje.net ಗೆ ಭೇಟಿ ನೀಡಿ. ಪ್ರಶ್ನೆಗಳಿದ್ದಲ್ಲಿ, avalahejjefilms@gmail.com ಗೆ ಈಮೇಲ್ ಅಥವಾ 8867747236 ಗೆ ವಾಟ್ಸಾಪ್ ಮಾಡಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ