- ರಾಘವೇಂದ್ರ ಅಡಿಗ ಎಚ್ಚೆನ್.

ಕಾಂತಾರ ಚಾಪ್ಟರ್‌-1 ಅಕ್ಟೋಬರ್‌ 2ರಂದು ವಿಶ್ವಾದ್ಯಂತ ತೆರೆಗೆ ಬರ್ತಿದೆ. ಈಗಾಗಲೇ ರಿಲೀಸ್‌ ಆಗಿರುವ ವಿಡಿಯೋ ಭಾರೀ ಸದ್ದು ಮಾಡಿದ್ದು, ಅಭಿಮಾನಿಗಳು ನಾಯಕಿಯನ್ನು ಪತ್ತೆ ಹಚ್ಚಿದ್ದಾರೆ. ಕಾಂತಾರ ಪ್ರೀಕ್ವೆಲ್‌ನಲ್ಲಿ ಯಾರೆಲ್ಲಾ ಇದ್ದಾರೆ? ರಿಷಬ್‌ ಶೆಟ್ಟಿಗೆ ನಾಯಕಿ ಯಾರು ಅನ್ನೋದು ಇಲ್ಲಿವರೆಗೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಇದೀಗ ಮೇಕಿಂಗ್‌ ವಿಡಿಯೋ ಮೂಲಕ ಕಾಂತಾರ ಪ್ರೀಕ್ವೆಲ್‌ ಕ್ವೀನ್‌ ಯಾರು ಅನ್ನೋದು ರಿವೀಲ್‌ ಆಗಿದೆ.

ಕಾಂತಾರ ಚಾಪ್ಟರ್‌ 1 ಸಿನಿಮಾಗೆ ರುಕ್ಮಿಣಿ ವಸಂತ ನಾಯಕಿ ಎಂಬ ಸುದ್ದಿ ಹರಿದಾಡ್ತಿದೆ. ಮೊನ್ನೆ ಶೂಟಿಂಗ್‌ ಮುಗಿಸಿರುವ ವಿಡಿಯೋ ನೋಡಿ ಫ್ಯಾನ್ಸ್‌ ಶೆಟ್ರಿಗೆ ಸಪ್ತ ಸಾಗರದಾಚೆ ಎಲ್ಲೋ ಸುಂದರಿ ಜೋಡಿ ಎನ್ನುತ್ತಿದ್ದಾರೆ. ಬೀರ್‌ ಬಿಲ್‌ ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟವರು ರುಕ್ಮಿಣಿ ವಸಂತ. ಸಪ್ತ ಸಾಗರದಾಚೆ ಎಲ್ಲೋ ಸರಣಿ ಸಿನಿಮಾ, ಬಘೀರ, ಭೈರತಿ ರಣಗಲ್‌ ಮೂಲಕ ಕನ್ನಡಿಗರನ್ನು ರಂಜಿಸಿ ಸದ್ಯ ತೆಲುಗು, ತಮಿಳಿನಲ್ಲಿ ಈ ನಟಿ ಬ್ಯುಸಿಯಾಗಿದ್ದಾರೆ. ಇದೀಗ ರುಕ್ಕು ರಿಷಬ್‌ಗೆ ಜೋಡಿ ಎನ್ನಲಾಗುತ್ತಿದೆ.

images

ಕಾಂತಾರ ಮೇಕಿಂಗ್ ವೀಡಿಯೋದಲ್ಲಿ 1 ನಿಮಿಷದ 10 ಸೆಕೆಂಡ್‌ನಲ್ಲಿ ಬರುವ ಲಾಂಗ್ ಡ್ರೋಣ್ ಶಾಟ್ ಅದು. ಕೊಳದ ಪಕ್ಕದಲ್ಲಿ ಒಂದಷ್ಟು ಮಹಿಳಾ ಕ್ಲಾಸಿಕಲ್ ಡ್ಯಾನ್ಸರ್ ಹೆಜ್ಜೆ ಹಾಕುತ್ತಿದ್ದಾರೆ. ಅವರ ಸಾಲಿನಲ್ಲಿ ಮುಂದೆ ನಿಂತಿರುವುದು ರುಕ್ಮಿಣಿ ವಸಂತ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ನಿಜಕ್ಕೂ ಅದರು ರುಕ್ಮಿಣಿನಾ ಅಥವಾ ಬೇರೆ ಅನ್ನೋದನ್ನು ಚಿತ್ರತಂಡ ಖಚಿತಪಡಿಸಬೇಕಿದೆ.

ಕಾಂತಾರ ಪ್ರೀಕ್ವೆಲ್‌ ಶೂಟಿಂಗ್‌ ಮುಗಿದ್ದು, ಮೇಕಿಂಗ್‌ ವಿಡಿಯೋ ಬಿಟ್ಟು ಚಿತ್ರತಂಡ ಕುತೂಹಲ ಹೆಚ್ಚಿಸಿದೆ. ಸದ್ಯ ಪ್ರೀ ಪ್ರೊಡಕ್ಷನ್ ವರ್ಕ್ ನಡೆಯುತ್ತಿದ್ದು, ಅಕ್ಟೋಬರ್ 2ಕ್ಕೆ ಸಿನಿಮಾ ತೆರೆಗೆ ಬರಲಿದೆ. ಹೊಂಬಾಳೆ ದೊಡ್ಡ ಮಟ್ಟದಲ್ಲಿ ಚಿತ್ರ ನಿರ್ಮಾಣ ಮಾಡಿದೆ. ರಿಷಬ್ ಶೆಟ್ಟಿ ಕಾಂತಾರ 1 ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿ ನಟಿಸಿದ್ದಾರೆ. ಇನ್ನೂ ತಾರಾಬಳಗದಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋದನ್ನು ಚಿತ್ರತಂಡ ಶೀಘ್ರದಲ್ಲೇ ರಿವೀಲ್‌ ಮಾಡಲಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ