Sj*

ಮಲಯಾಳಂ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ 'ಶ್ರೀ ಗೋಕುಲಂ ಮೂವೀಸ್' ಬ್ಯಾನರ್ ನಡಿ ಗೋಕುಲಂ ಗೋಪಾಲನ್ ಅವರು ನಿರ್ಮಿಸಿರುವ ಬಹುನಿರೀಕ್ಷಿತ ಕಥನಾರ್ ಟ್ರೇಲರ್ ಬಿಡುಗಡೆಯಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಹೀಗಾಗಿ ಕನ್ನಡದಲ್ಲಿಯೂ ಟ್ರೇಲರ್ ಅನಾವರಣಗೊಂಡಿದೆ.

ಮಲಯಾಳಂ ನಟ ಜಯಸೂರ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಅನುಷ್ಕಾ ಶೆಟ್ಟಿ, ಪ್ರಭುದೇವ ಸನೂಪ್ ಸಾನ್, ಸ್ಯಾಂಡಿ, ದೇವಿಕಾ, ನಿತೀಶ್ ಭಾರದ್ವಾಜ್, ವಿನೀತ್, ಹರೀಶ್ ಉತ್ತಮನ್, ಶ್ರೀಕಾಂತ್ ಮುರಳಿ ಮತ್ತು ಕುಲ್‌ಪ್ರೀತ್ ಯಾದವ್ ತಾರಾಬಳಗದಲ್ಲಿದ್ದಾರೆ.

kathanar

ಹಾಲಿವುಡ್ ನೆನಪಿಸುವ ವಿ.ಎಫ್.ಎಕ್ಸ್ ಮತ್ತು ಹಿನ್ನೆಲೆ ಸಂಗೀತ, ವಿಷ್ಯುವಲ್ ಎಫೆಕ್ಟ್ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿವೆ. ಜಯಸೂರ್ಯ ತಮ್ಮ ವೃತ್ತಿಜೀವನದ ಸುಮಾರು ನಾಲ್ಕು ವರ್ಷಗಳನ್ನು ಈ ಚಿತ್ರಕ್ಕೆ ಮೀಸಲಿಟ್ಟಿದ್ದಾರೆ. ಕಥನಾರ್ ಚಿತ್ರ 15 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಸಿನಿಮಾಗೆ ರೋಜಿನ್ ಥಾಮಸ್ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಚಿತ್ರಕ್ಕೆ ಆರ್. ರಾಮಾನಂದ್ ಮತ್ತು ರೋಜಿನ್ ಥಾಮಸ್ ಚಿತ್ರಕಥೆ ಬರೆದಿದ್ದು, ನೀಲ್ ಡಿ ಕುನ್ಹಾ ಕ್ಯಾಮರಾ ವರ್ಕ್ ಇದೆ. ರಾಹುಲ್ ಸುಬ್ರಮಣ್ಯನ್ ಸಂಗೀತ ಸಂಯೋಜಿಸಿದ್ದು, ಸಾಹಿತ್ಯವನ್ನೂ ಬರೆದಿರೋದು ವಿಶೇಷ. ರೋಜಿನ್ ಥಾಮಸ್ ಎಡಿಟಿಂಗ್ ಜೊತೆ ವಿಎಫ್‌ಎಕ್ಸ್ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ