S.J

ಪಿ.ಮೂರ್ತಿ ನಿರ್ಮಾಣ ಹಾಗೂ ಒರಟ ಶ್ರೀ ನಿರ್ದೇಶನದ ಈ ಚಿತ್ರ ಏಪ್ರಿಲ್ 18 ರಂದು ತೆರೆಗೆ*

ರತ್ನಮ್ಮ‌ ಮೂವೀಸ್ ಲಾಂಛನದಲ್ಲಿ ಪಿ.ಮೂರ್ತಿ ನಿರ್ಮಿಸಿರುವ, ಒರಟ ಶ್ರೀ ನಿರ್ದೇಶನದ ಹಾಗೂ ರಿಯಾಲಿಟಿ ಶೋ ಮೂಲಕ ನಾಡಿನ ಜನರ ಗಮನ ಸೆಳೆದಿದ್ದ ಸುನಾಮಿ ಕಿಟ್ಟಿ ನಾಯಕನಾಗಿ ನಟಿಸಿರುವ “ಕೋರ” ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. “ಒರಟ” ಪ್ರಶಾಂತ್, “ಬಿಗ್ ಬಾಸ್” ಖ್ಯಾತಿಯ ತನಿಶಾ ಕುಪ್ಪಂಡ, ರಜತ್, ಸಲಗ ಸೂರಿ, ಸಂಜಯ್ ಗೌಡ, ಎ.ಕೆ.ಮೂರ್ತಿ, ರಮೇಶ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಏಪ್ರಿಲ್ 18 ರಂದು ತೆರೆ ಕಾಣುತ್ತಿರುವ ಈ ಚಿತ್ರಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಕೊರಗಜ್ಜನ ಆಶೀರ್ವಾದದಿಂದ ನಮ್ಮ ತಾಯಿಯವರ ಹೆಸರಿನಲ್ಲಿ ರತ್ನಮ್ಮ ಮೂವೀಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇನೆ. ನಿರ್ದೇಶಕ ಶ್ರೀ ಹಾಗೂ ಇಡೀ ತಂಡದ ಶ್ರಮದಿಂದ ಈ ಚಿತ್ರ ತುಂಬಾ ಚೆನ್ನಾಗಿ ಬಂದಿದೆ. ಫ್ಯಾಮಿಲಿ ಸೆಂಟಿಮೆಂಟ್, ಆಕ್ಷನ್, ಥ್ರಿಲ್ಲರ್ ಹೀಗೆ ಹಲವು ಜಾನರ್ ಗಳ ಚಿತ್ರಗಳು ಸಾಕಷ್ಟು ಬಂದಿದೆ. ಆದರೆ ನಮ್ಮ “ಕೋರ” ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಕಾಡಿನಲ್ಲೇ ನಡೆಯುವ ಕಥೆ. ಕೊರಗಜ್ಜನ ಭಕ್ತನಾದ ನನಗೆ ಈ ಚಿತ್ರದ ಚಿತ್ರೀಕರಣ ಸಮಯದಲ್ಲಿ ಸಾಕಷ್ಟು ಪವಾಡಗಳಾಗಿದೆ‌. ಒಟ್ಟಿನಲ್ಲಿ ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಮೋಸ ಮಾಡದ ಚಿತ್ರವಿದು. ನಾನು ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದೇನೆ. ವಿತರಕರಾದ ಜಯಣ್ಣ ಹಾಗೂ ಚಂದನ್ ಸುರೇಶ್ ಅವರ ಸಹಕಾರದೊಂದಿಗೆ ಏಪ್ರಿಲ್ 18 ರಂದು ಕನ್ನಡದಲ್ಲಿ ನಮ್ಮ ಚಿತ್ರ ಬಿಡುಗಡೆಯಾಗಲಿದೆ. ನಂತರದ ವಾರಗಳಲ್ಲಿ ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ರಿಲೀಸ್ ಆಗಲಿದೆ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಪಿ.ಮೂರ್ತಿ.

kora 1

ಈ ಚಿತ್ರವನ್ನು ನಿರ್ದೇಶಿಸಲು ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ, ತಂದೆ, ತಾಯಿಗೆ ಹಾಗೂ ಚಿತ್ರಕ್ಕೆ‌ ಸಹಕಾರ ನೀಡಿದ ಇಡೀ ತಂಡಕ್ಕೆ ಧನ್ಯವಾದ ತಿಳಿಸಿ ಮಾತನಾಡಿದ ನಿರ್ದೇಶಕ ಶ್ರೀ, “ಕೋರ” ನಲವತ್ತು ವರ್ಷಗಳ ಹಿಂದಿನ ಕಥೆ. ಕಾಡಿನಲ್ಲೇ ಹೆಚ್ಚು ನಡೆಯುವ ಕಥೆಯೂ ಹೌದು. ಅವರು ಈ ಚಿತ್ರದಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಉತ್ತಮ ಖಳನಟ ದೊರಕುವುದು ಖಂಡಿತ ಎಂದು ನಿರ್ದೇಶಕ ಶ್ರೀ ತಿಳಿಸಿದರು.

ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸುತ್ತಿದ್ದ ನನ್ನನ್ನು ಈ ಚಿತ್ರದ ಮೂಲಕ ನಾಯಕನನ್ನಾಗಿ ಮಾಡಿದ ನಿರ್ಮಾಪಕ ಪಿ.ಮೂರ್ತಿ ಅವರಿಗೆ ಹಾಗೂ ನನಗೆ ಅಭಿನಯ ಹೇಳಿಕೊಟ್ಟು ಚಿತ್ರದಲ್ಲಿ ನಟಿಸಲು ಸಿದ್ದತೆ ಮಾಡಿಸಿದ ನಿರ್ದೇಶಕ ಶ್ರೀ ಅವರಿಗೆ ಧನ್ಯವಾದ. ನಮ್ಮ ತಂಡದ ಶ್ರಮದಿಂದ “ಕೋರ” ಒಂದೊಳ್ಳೆ ಚಿತ್ರವಾಗಿ ನಿಮ್ಮ ಮುಂದೆ ಬರುತ್ತಿದೆ ನೋಡಿ ಹಾರೈಸಿ ಎಂದು ನಾಯಕ ಸುನಾಮಿ‌ ಕಿಟ್ಟಿ ಹೇಳಿದರು.

“ಕೋರ” ಚಿತ್ರದ ನನ್ನ ಪಾತ್ರ ಚೆನ್ನಾಗಿದೆ. ಗಂಗಾ ನನ್ನ ಪಾತ್ರದ ಹೆಸರು ಎಂದರು ನಾಯಕಿ ಚರಿಷ್ಮಾ.

kora 2

ಸಹ ನಿರ್ಮಾಪಕ ಚೆಲುವರಾಜು, ಕಲಾವಿದರಾದ ಮುನಿ, ಸೌಜನ್ಯ, ರಾಜು ನಾಯಕ್, ಗಿರೀಶ್ ಕಚ್ಚೆ, ಆರ್ಯ, ಸಂಗೀತ ನಿರ್ದೇಶಕ ಹೇಮಂತ್ ಕುಮಾರ್, ಛಾಯಾಗ್ರಾಹಕ ಸೆಲ್ವಂ, ಸಂಕಲನಕಾರ ಗಿರೀಶ್ ಹಾಗೂ ತೆಲುಗು ವಿತರಕ ಬಾಲಾಜಿ “ಕೋರ” ಚಿತ್ರದ ಕುರಿತು ಮಾತನಾಡಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ