ಚಿತ್ರ: ನಾರಾಯಣ ನಾರಾಯಣ
ನಿರ್ಮಾಣ: ಕೃಷ್ಣಪ್ಪ ಪಿ, ಮಂಜುನಾಥ್ ಕೆ.
ನಿರ್ದೇಶನ: ಶ್ರೀಕಾಂತ್ ಕೆಂಚಪ್ಪ,
ತಾರಾಂಗಣ: ಕೀರ್ತಿ ಕೃಷ್ಣ, ದರ್ಶನ್, ಬಿಂಬಿಕಾ, ಪವನ್ ಕುಮಾರ್, ಪುನಿತ್ ಬಿಎ, ರಘು ಭಟ್, ಗುರುಕಿರಣ್, ಹಂಪ, ಶಶಿಕಾಂತ್ ಗಟ್ಟಿ, ಗುರುರಾಜ್, ನಿಧಿ ದೀಕ್ಷಿತ್, ಮಧುಕರ್, ಅರುಣ್ ಕುಮಾರ್ ಕನಕಪುರ, ಪ್ರಸಾದ್ ಭಟ್, ವಿನಯ್ ಪವಾರ್ ಮುಂತಾದವರು
ರೇಟಿಂಗ್: 3.5/5
– ರಾಘವೇಂದ್ರ ಅಡಿಗ ಎಚ್ಚೆನ್.
ಶ್ರೀಕಾಂತ್ ಕೆಂಚಪ್ಪ ನಿರ್ದೇಶನ ಮಾಡಿ ಕೃಷ್ಣಪ್ಪ ಪಿ ಮತ್ತು ಮಂಜುನಾಥ್ ಕೆ ನಿರ್ಮಾಣ ಮಾಡಿರುವ “ನಾರಾಯಣ ನಾರಾಯಣ: ಸಿನಿಮಾ ಈ ವಾರ ಚಿತ್ರಮಂದಿರಕ್ಕೆ ಬಂದಿದೆ. ಚಿತ್ರದಲ್ಲಿ ಮಜಾ ಟಾಕೀಸ್ ಖ್ಯಾತಿ ಪವನ್ ಕುಮಾರ್ ಕೃಷ್ಣನಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ದರ್ಶನ್ ಸೂರ್ಯ, ಕೀರ್ತಿ ಕೃಷ್ಣ, ಪುನೀತ್ ಬಿಎ, ಗುರುರಾಜ್ ಬಸವರಾಜ್, ಹಂಪಕುಮಾರ್, ಭೂಮಿಕಾ ರಾವ್ ಮುಂತಾದವರು ತಾರಾಗಣದಲ್ಲಿದ್ದಾರೆ. ಸತ್ಯ ರಾಧಾ ಕೃಷ್ಣ ಮತ್ತು ಜತಿನ್ ದರ್ಶನ್ ಸಂಗೀತ, ಕಮಲ್ ಸಿಂಗ್ & ಲಕ್ಕೆ ಗೌಡ ಛಾಯಾಗ್ರಹಣ ಹಾಗೂ ಅರವಿಂದ್ ರಾಜ್ ಸಂಕಲನ ಸಿನಿಮಾಗಿದೆ. ಈ ಸಿನಿಮಾ ಬಿಡುಗಡೆಗೆ ಮುನ್ನವೇ ತುಳು ಭಾಷೆಗೆ ರೀಮೇಕ್ ಹಕ್ಕು ಮಾರಾಟವಾಗಿದೆ ಎನ್ನುವುದು ಚಿತ್ರ ಹೆಚ್ಚು ಮಹತ್ವದ್ದಾಗಿದೆ ಎನ್ನುವುದಕ್ಕೆ ಸಾಕ್ಷಿ. ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜ ಸಹ ಬೆಂಬಲಿಸಿದ್ದರು.
ಗಂಭೀರ ವಸ್ತು ವಿಷಯವುಳ್ಳ ಕಥಾವಸ್ತುವನ್ನು ಹಾಸ್ಯದೊಡನೆ ಬೆರೆಸಿ ಈ ಚಿತ್ರದಲ್ಲಿ ಹೇಳಲಾಗಿದೆ. ಮೇಲಾಗಿ ಶ್ರೀಕೃಷ್ಣ ಪರಮಾತ್ಮನ ಮೂಲಕ ಸರಿ ತಪ್ಪುಗಳನ್ನು ಬಿಡಿಸಲಾಗಿದೆ. ಸಾಮಾನ್ಯವಾಗಿ ನಿಧಿ ಅಥವಾ ಸಂಪತ್ತು ಎಂದಾಗ ಜನರ ಕಿವಿ ನೆಟ್ಟಗಾಉತ್ತದೆ. ಗ್ರಾಮೀಣ ಜನರಲ್ಲಿ ಇಂದಿಗೂ ನಿಧಿಯಂತಹಾ ಸಂಪತ್ತಿನ ಕನಸು ಇದ್ದು ಅದಕ್ಕಾಗಿ ಯಾವ ಮೂಢನಂಬಿಕೆಯ ಆಚರಣೆಗಳಿಗೂ ಇಳಿಯುತ್ತಾರೆ. ಇತ್ತೀಚೆಗೆ ತೆರೆಕಂಡ ಹಿಂದಿ ಚಿತ್ರವೊಂದರ ಪ್ರಭಾವಕ್ಕೊಳಗಾಗಿ ಮಧ್ಯಪ್ರದೇಶದ ಕೋಟೆಯೊಂದರ ಸುತ್ತ ರಾತ್ರೋರಾತ್ರಿ ನಿಧಿ ಶೋಧ ನಡೆದಿರುವುದು ನಿಮಗೂ ಗೊತ್ತಿದೆ. ಇದೇ ಬಗೆಯಲ್ಲಿ ನಿಧಿ ಶೋಧನೆಗಾಗಿ ಹೊರಟವರ ಕಥಾನಕ ಈ ಸಿನಿಮಾದಲ್ಲಿಯೂ ಇದೆ.
ಹಾಸ್ಯವೇ ಪ್ರಧಾನವಾಗಿ ಹೊಂದಿರುವ ಈ ಸಿನಿಮಾದಲ್ಲಿ ಡೈಲಾಗ್ ಗಳೇ ಚಿತ್ರದ ಹೈಲೈಟ್. ಜೊತೆಗೆ ಕೆಲವಷ್ಟು ಸಸ್ಪೆನ್ಸ್ ದೃಶ್ಯಗಳೂ ಇದೆ. ಇದರಿಂದ ಪ್ರೇಕ್ಷಕರು ಪ್ರಾರಂಭದಿಂದ ಕಡೆಯವರೆಗೆ ಕುತೂಹಲದಿಂದ ಸಿನಿಮಾ ವೀಕ್ಷಿಸಬಹುದಾಗಿದೆ.
ಹಳ್ಳಿಯಲ್ಲಿರುವ ನಾಲ್ವರು ಸ್ನೇಹಿತರು ಜೊತೆಗೊಂದು ಯುವತಿ, ಓರ್ವ ಗೌಡ, ಗೌಡರ ಮಗ ಇವುಗಳು ಕಥೆಯಲ್ಲಿನ ಪ್ರಮುಖ ಪಾತ್ರ. ಗ್ರಾಮದಲ್ಲಿ ಪುರಾತನ ನಿಧಿ ಇರುವುದಾಗಿ ತಿಳಿದಾಗ ಹಳ್ಳಿಯಲ್ಲಿನ ಜನರಲ್ಲಿ ಒಗ್ಗಟ್ಟು ಮಾಯವಾಗಿ ಪರಸ್ಪರ ಕಿತ್ತಾಟ ಪ್ರಾರಂಬವಾಗುತ್ತದೆ., ಆಗ ಶ್ರೀಕೃಷ್ಣನ ಆಗಮನವಾಗಿ ಇದಕ್ಕೊಂದು ಪರಿಹಾರ ಸೂಚಿಸುವ ಕಥೆ “ನಾರಾಯುಅಣ ನಾರಾಯಣ” ಕ್ರೂಷ್ಣನ ಪಾತ್ರದಲ್ಲಿ ಪವನ್ ಅವರ ಅಭಿನಯ ಉತ್ತಮವಾಗಿ ಬಂದಿದೆ. ಜೊತೆಗೆ ಬಾಸುಕಿ ವೈಭವ್ ಹಾಡಿರುವ “ಹೇ ಕೃಷ್ಣ” ಹಾಡು ಮತ್ತೆ ಮತ್ತೆ ಕೇಳುವಂತೆ ಮಧುರವಾಗಿ ಬಂದಿದೆ.
ಒಟ್ತಾರೆ ಸಾಮಾನ್ಯ ಲವ್, ಆಕ್ಷನ್, ಕಮರ್ಷಿಯಲ್ ಮಸಾಲೆಗಳು, ದೊಡ್ಡ ಸ್ಟಾರ್ ನಟರುಗಳಲಿಲ್ಲದೆ ಹಳ್ಳಿಯಲ್ಲಿ ನಡೆಯಬಲ್ಲ ಒಂದು ಸರಳ ಕಥಾನಕವನ್ನು ಅಷ್ಟೇ ಸರಳವಾಗಿ ತೀರೆಗೆ ತಂದಿರುವ ನಿರ್ದೇಶಕರ ಕೆಲಸ ಮೆಚ್ಚಬೇಕಿದೆ.