- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡದ ಸ್ಟಾರ್ ಸಿಂಗರ್ ಚಂದನ್ ಶೆಟ್ಟಿ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಸದ್ಯದಲ್ಲೇ ಯುನಿವರ್ಸಲ್ ಬಾಸ್ ಹಾಗೂ ಱಪರ್ ಚಂದನ್ ಶೆಟ್ಟಿ ಕೊಲ್ಯಾಬೋರೇಷನ್ನಲ್ಲಿ ಸಾಂಗ್ ಮೂಡಿ ಬರುತ್ತಿದೆ.
ಹೌದು, ಚಂದನ್ ಶೆಟ್ಟಿ ಮ್ಯೂಸಿಕ್ ಯುವ ಜನತೆಯನ್ನ ಆಕರ್ಷಿಸುತ್ತದೆ. ಅದರಲ್ಲೂ ಪಾರ್ಟಿ ಸಾಂಗ್ಗಳು ಮೂಡಿ ಬಂದರೆ ಸಾಕು ಹುಚ್ಚೆದ್ದು ಕುಣಿಯುತ್ತಾರೆ. ಎಲ್ಲಿ ನೋಡಿದ್ರೂ, ಎಲ್ಲರ ಬಾಯಲ್ಲೂ ಚಂದನ್ ಶೆಟ್ಟಿ ಗುನುಗುತ್ತಾ ಇರುತ್ತವೆ. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡೋಕ್ಕೆ ಚಂದನ್ ಶೆಟ್ಟಿ ಮುಂದಾಗಿದ್ದಾರೆ,
ಱಪರ್ ಚಂದನ್ ಶೆಟ್ಟಿ ಅವರು ಕ್ರಿಸ್ ಗೇಲ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ʻಯೂನಿವರ್ಸಲ್ ಬಾಸ್ʼ ಕ್ರಿಸ್ ಗೇಲ್ ಹಾಗೂ ಚಂದನ್ ಶೆಟ್ಟಿ ಕೊಲ್ಯಾಬೋರೇಷನ್ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಚಂದನ್ ಶೆಟ್ಟಿ ಅವರನ್ನು ಕ್ರಿಸ್ ಗೇಲ್ ʻರಾಕ್ ಸ್ಟಾರ್ʼ ಎಂದು ಪರಿಚಯಿಸಿದ್ದಾರೆ.
ಚಂದನ್ ಶೆಟ್ಟಿ ಹೊಸ ಹೊಸ ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ. ಅದಕ್ಕೆ ಅಭಿಮಾನಿಗಳು ಕೂಡ ಸಾಥ್ ನೀಡುತ್ತಾರೆ. ಇದೀಗ ಸಖತ್ ಬೀಟ್‌ಗಳ ಮೂಲಕ ಗಮನ ಸೆಳೆಯುವ ಚಂದನ್ ಶೆಟ್ಟಿ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ ಜೊತೆಗೆ ಸಾಂಗ್ ಶೂಟ್ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಹಾಡಿನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಜೊತೆಗೆ ಅನಿರೀಕ್ಷಿತ ಕೊಲ್ಯಾಬ್, ಏನ್ ಗುರು ನಿನ್ ಲೆವೆಲ್, ವೇಯ್ಟಿಂಗ್ ಅಂತ ಕಾಮೆಂಟ್ಸ್ ಹಾಕಿದ್ದಾರೆ. ʻಲೈಫ್ ಈಸ್ ಕಸಿನೋʼ ಸಾಂಗ್ ರಿಲೀಸ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.