ಶರತ್ ಚಂದ್ರ
ಕನ್ನಡ ಚಿತ್ರರಂಗದ ಎವರ್ ಗ್ರೀನ್ ಹೀರೋ ಪ್ರಣಯರಾಜ ಶ್ರೀನಾಥ್ ಅವರು ಒಂದಷ್ಟು ವರ್ಷಗಳ ಗ್ಯಾಪ್ ನ ನಂತರ ' ಅಪರಿಚಿತೆ 'ಎಂಬ ಕನ್ನಡ ಚಿತ್ರದ ಮೂಲಕ ಮತ್ತೆ ಅಭಿನಯಿಸುತ್ತಿದ್ದಾರೆ.
ವಿಶೇಷವೆಂದರೆ ' ಪಲ್ಲವಿ ಅನುಪಲ್ಲವಿ' ಚಿತ್ರ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ಬಾಲ ನಟನಾಗಿ ಅಭಿನಯಿಸಿದ ಮಗ ರೋಹಿತ್ ಕೂಡ ಅಪ್ಪನ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.
ಬಾಲ ನಟನಾಗಿದ್ದಾಗ ರೋಹಿತ್ ತಂದೆಯ ಜೊತೆ ಗರುಡ ರೇಖೆ, ಶಿಕಾರಿ, ಗಂಡ ಹೆಂಡತಿ, ಎರಡು ರೇಖೆಗಳು ಚಿತ್ರಗಳಲ್ಲಿ ಅಭಿನಯಿಸಿದ್ದರು
ರೋಹಿತ್ ಅಂದರೆ ನಿಮಗೆ ಗೊತ್ತಾಗ್ಲಿಕ್ಕಿಲ್ಲ. ಮಾಸ್ಟರ್ ರೋಹಿತ್ ಅಂದರೆ ಖಂಡಿತ ಈ ನಟನ ಬಾಲ್ಯದ ಮುಖ ನೆನಪಾಗಬಹುದು.
ಅದರಲ್ಲೂ ಪಲ್ಲವಿ ಅನು ಪಲ್ಲವಿ ಚಿತ್ರದ 'ನಗು ಎಂದಿದೆ ಮಂಜಿನ ಬಿಂದು ' ಹಾಡಲ್ಲಿ ಲಕ್ಷ್ಮಿ ಜೊತೆ ಅಭಿನಯಿಸಿರುವ ಮಾ. ರೋಹಿತ್ ನನ್ನು ಹೇಗೆ ಮರೆಯಲು ಸಾಧ್ಯ
ಬಾಲ ನಟನಾಗಿದ್ದಾಗ ಮಣಿರತ್ನಂ, ಶಂಕರ್ ನಾಗ್ ನಿರ್ದೇಶನದಲ್ಲಿ ಅಭಿನಯಿಸಿದ್ದು ಆತ ಚಿಕ್ಕವನಿದ್ದಾಗ ಅಭಿನಯದಲ್ಲಿ ತುಂಬಾ ಆಸಕ್ತಿ ಇತ್ತು, ಮಾಲ್ಗುಡಿ ಡೇಸ್ ನಲ್ಲಿ ಆತ ಅಭಿನಯಿಸಿದ ಪಾತ್ರವನ್ನು ಜನ ಈಗಲೂ ನೆನಪು ಮಾಡಿಕೊಳ್ಳುತ್ತಿದ್ದಾರೆ.
ಅನೇಕ ಬಾಲ ನಟರಂತೆ ರೋಹಿತ್ ಕೂಡ ದೊಡ್ಡವನಾಗಿ ಬೆಳೆದ ನಂತರ ಸಿನಿಮಾದಲ್ಲಿ ನಟಿಸಿರಲಿಲ್ಲ.
ರಂಗಭೂಮಿ ಯಲ್ಲಿ ಒಂದಷ್ಟು ನಾಟಕ ಗಳಲ್ಲಿ ಅಭಿನಯಿಸಿದ್ದು ಬಿಟ್ಟರೆ,ಬಣ್ಣದ ಲೋಕದಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಐಟಿ ಕ್ಷೇತ್ರಕ್ಕೆ ಕಾಲಿಟ್ಟು ಉದ್ಯಮಿಯಾಗಿ ಬ್ಯುಸಿ ಇದ್ದ ರೋಹಿತ್ ಕಿರುತೆರೆ ಯ ಮೂಲಕ ಮತ್ತೆ ವಾಪಸಾಗಿದ್ರು.
ತ್ರಿಪುರ ಸುಂದರಿ, ಬ್ರಹ್ಮ ಗಂಟು, ಗಂಗೆ ಗೌರಿ ಮುಂತಾದ ಸೀರಿಯಲ್ ಗಳಲ್ಲಿ ಅಭಿನಯಿಸಿ ರುವ ರೋಹಿತ್ ತಾಯವ್ವ ಚಿತ್ರದ ಗೀತಾ ಪ್ರಿಯಾ ಪ್ರಮುಖ ಪಾತ್ರ ವಹಿಸುತ್ತಿರುವ 'ಅಪರಿಚಿತೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ದಲ್ಲಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.