ಸರಸ್ವತಿ*
ಕಾಲ ಬದಲಾದಂತೆ ಮನುಷ್ಯನ ಮನಸ್ಥಿತಿಯಲ್ಲೂ ಬದಲಾವಣೆಗಳುಂಟಾಗಿ ಸಮಾಜದಲ್ಲಿ ಮೌಲ್ಯಗಳೂ ಕ್ಷೀಣಿಸುತ್ತಿದೆ. ಇಂತಹ ಕಾಲಘಟ್ಟದಲ್ಲಿ ಮರೆಯಾಗುತ್ತಿರುವ ಬದ್ಧತೆಯನ್ನು ನೆನಪಿಸಲು ನಟ, ನಿರ್ದೇಶಕ ಯತಿರಾಜ್ ಕಿರುಚಿತ್ರವೊಂದನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ.
‘ಇದ್ರೆ ನೆಟ್ಟಗಿರ್ಬೇಕು’ ಎಂಬ ಶೀರ್ಷಿಕೆಯಡಿಯಲ್ಲಿ yethics ಯೂ ಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿರುವ ಕಿರುಚಿತ್ರ ಜನ ಮೆಚ್ಚುಗೆ ಡೆಯುವಲ್ಲಿ ಯಶಸ್ವಿಯಾಗಿದೆ.

ತಣ್ಣಗೆ ಶುರುವಾಗುವ ಕಥೆ ಅನಿರೀಕ್ಷಿತವಾದ ತಿರುವುಗಳು ಪಡೆದು, ಅಂತಿಮ ಹಂತ ತಲುಪುವ ವೇಳೆಗೆ ದೊಡ್ಡದ್ದೊಂದು ಸಂದೇಶ ಸಾರಿ ಹೇಳುವಲ್ಲಿ ಸಫಲವಾಗಿದೆ.
ಯತಿರಾಜ್ ನಿರ್ಮಿಸಿ, ನಿರ್ದೇಶನ ಮಾಡಿರುವ ಜೊತೆಗೆ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ರಂಜಿತ, ತನಿಷ, ಮಹೇಶ್, ಅನು, ದಿವ್ಯ, ಗುರು ಮತ್ತು ಅಭಿಷೇಕ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಜೀವಾ ಅವರ ಕ್ಯಾಮೆರಾ ಕೆಲಸ, ವಿಜಯ್ ಹರಿತ್ಸ ಅವರ ಸಂಗೀತ ಮತ್ತು ಜೀವನ್ ಪ್ರಕಾಶ್ ರವರ ಸಂಕಲನ ಉತ್ತಮವಾಗಿದೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





