- ರಾಘವೇಂದ್ರ ಅಡಿಗ ಎಚ್ಚೆನ್.

ಕಾಲ ಬದಲಾದಂತೆ ಆಟ ಆಡುವ ವೈಖರಿ ಬದಲಾಗುತ್ತಿದೆಯೇ ವರೆತು ಆಟ ಆಡುವವನ ಮನಸ್ಥಿತಿ ಎಂದಿಗೂ ಬದಲಾಗಿಲ್ಲ ಎಂಬ ಸಂದೇಶವನ್ನಿಟ್ಟುಕೊಂಡೇ 'ಲೂಪ್' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ..!

ಲವ್ ಮತ್ತು ಸಸ್ಪೆನ್ಸ್ ಅಂಶಗಳನ್ನ ಹೊಂದಿರುವ 'ಲೂಪ್' ಸಿನಿಮಾ  ಒಂದು ಆಟದ ಸುತ್ತ ಸುತ್ತುತ್ತಾ ಕುತೂಹಲಕಾರಿ ಕ್ಲೈಮ್ಯಾಕ್ಸ್ ಇದೆ ಎನ್ನಲಾಗಿದೆ. ಸ್ಟಾಪ್ ಬೆಟ್ಟಿಂಗ್ಸ್, ನೋ ಡ್ರಗ್ಸ್ ಎನ್ನುವ ಸಂದೇಶವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ರೇಣುಕಾಂಬ ಸ್ಟುಡಿಯೋದಲ್ಲಿ 'ಲೂಪ್' ಚಿತ್ರದ ಟ್ರೈಲರ್ ಲಾಂಚ್ ನೆರವೇರಿದ್ದು, ಒಳ್ಳೆ ಹುಡುಗ ಪ್ರಥಮ್ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.

IMG-20260402-WA0015

ಚಿತ್ರಕ್ಕೆ ಯಶವಂತ ಆಕ್ಷನ್-ಕಟ್ ಹೇಳಿದ್ದು, ಎಸ್.ಕೆ.ಎಲ್ಲಪ್ಪ ಹಾಗೂ ಯುವಿ ಪ್ರಮೋಷನ್ ಉಮೇಶ್ K N ಬಂಡವಾಳ ಹೂಡಿದ್ದಾರೆ. ಶಶಿಕಿರಣ್ ಗೆ ಶೋಭಿತ ಜೋಡಿಯಾಗಿದ್ದು ಮಿಮಿಕ್ರಿ ಗೋಪಿ, ಅಪ್ಪುರಾಜ್, ಅಭಿ ಸಾಮ್ರಾಟ್, ಮಂಜುಳಾ ಅರಸ್, ಗಣೇಶ್, ಜೀವನ್ ಗೌಡ ಕೂಡ ನಟಿಸಿದ್ದಾರೆ.

ಜೀವನ್ ಗೌಡ ಸಿನಿಮಾಟೋಗ್ರಾಫಿ, ಸಂತೋಷ್ ಜೋಶ್ವ ಮ್ಯೂಸಿಕ್ ಮತ್ತು ಅನಿಲ್ ಆಚಾರ್ ಸಂಕಲನ 'ಲೂಪ್' ಚಿತ್ರಕ್ಕಿದೆ., ಸದ್ಯದಲ್ಲೇ 'ಲೂಪ್' ಚಿತ್ರದ ರಿಲೀಸ್ ದಿನಾಂಕ ಘೋಷಣೆ ಆಗಲಿದೆ...!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ