ರಾಘವೇಂದ್ರ ಅಡಿಗ ಎಚ್ಚೆನ್.

ಯೋಗಿ ಅವರ ವೃತ್ತಿ ಜೀವನ ಸಾಕಷ್ಟು ಏರಿಳಿತಗಳಿಂದ ಕೂಡಿದೆ. ಇಷ್ಟು ದಿನ ಒಂದು ಲೆಕ್ಕವಾದರೆ, ಇನ್ಮುಂದೆ ಬೇರೆಯದೇ ಲೆಕ್ಕ ಶುರು ಎಂದು ಅವರು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಅವರ ಐವತ್ತನೇ ಸಿನಿಮಾ ಅನೌನ್ಸ್ ಆಗಿದೆ. ಈ ಸಿನಿಮಾಗೆ ‘ಕಿಂಗ್’ ಟೈಟಲ್ ಇಡಲಾಗಿದೆ. ಈ ಸಿನಿಮಾ ಟೈಟಲ್ ಗಮನ ಸೆಳೆಯೋ ರೀತಿಯಲ್ಲಿ ಇದೆ. ಟೀಸರ್ ಕೂಡ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಭಾರಿ ಬಜೆಟ್ನಲ್ಲಿ ಚಿತ್ರ ಸಿದ್ಧವಾಗುತ್ತಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
ವೃತ್ತಿ ಜೀವನದಲ್ಲಿ ಯೋಗಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಹಲವು ರೀತಿಯ ಪಾತ್ರಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಈಗ ಅವರು ‘ಕಿಂಗ್’ ಸಿನಿಮಾದಲ್ಲಿ ಸಖತ್ ರಗಡ್ ಅವತಾರ ತಾಳಲು ರೆಡಿ ಆಗಿದ್ದಾರೆ. ಈ ಚಿತ್ರದ ಟೀಸರ್ ರಾ ಆಗಿದೆ. ಶಿವರಾಜ್ಕುಮಾರ್ ಅವರು ಟೀಸರ್ ರಿಲೀಸ್ ಮಾಡಿ ತಂಡಕ್ಕೆ ಶುಭಕೋರಿದ್ದಾರೆ.
‘ಯೋಗಿ ನಂಗೆ ತುಂಬಾನೇ ಆಪ್ತ. ಅವರು ನನ್ನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಪುನೀತ್ ಜೊತೆ ತುಂಬಾನೇ ಆಪ್ತವಾಗಿದ್ದರು. ಹೀಗಾಗಿ, ಯೋಗಿನ ನೋಡಿದಾಗೆಲ್ಲ ಅಪ್ಪುನ ನೆನಪಾಗುತ್ತದೆ. ಈ ಸಿನಿಮಾ ಗೆಲ್ಲಲೇಬೇಕು. ಈ ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ನಾನು ಭಾಗಿ ಆಗುತ್ತೇನೆ’ ಎಂದು ಅವರು ಭರವಸೆ ನೀಡಿದ್ದಾರೆ.

loose

‘ಕಿಂಗ್’ ಚಿತ್ರದ ಬಜೆಟ್ ದೊಡ್ಡದು. ಈ ಬಗ್ಗೆ ಯೋಗಿ ಆತಂಕ ವ್ಯಕ್ತಪಡಿಸಿದರು. ಆದರೆ, ನಿರ್ಮಾಪಕರು ಧೈರ್ಯ ತುಂಬಿದರಂತೆ. ಹೀಗಾಗಿ, ಅವರು ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಮುಂದಿನ ದಿನಗಳಲ್ಲಿ ದೊಡ್ಡ ಸಿನಿಮಾಗಳನ್ನು ಮಾಡುವ ಆಲೋಚನೆ ಅವರಿಗೆ ಇದೆ.
‘ಕಿಂಗ್’ ಚಿತ್ರದ ಬಜೆಟ್ ದೊಡ್ಡದು. ಈ ಬಗ್ಗೆ ಯೋಗಿ ಆತಂಕ ವ್ಯಕ್ತಪಡಿಸಿದರು. ಆದರೆ, ನಿರ್ಮಾಪಕರು ಧೈರ್ಯ ತುಂಬಿದರಂತೆ. ಹೀಗಾಗಿ, ಅವರು ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಮುಂದಿನ ದಿನಗಳಲ್ಲಿ ದೊಡ್ಡ ಸಿನಿಮಾಗಳನ್ನು ಮಾಡುವ ಆಲೋಚನೆ ಅವರಿಗೆ ಇದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ