- ರಾಘವೇಂದ್ರ ಅಡಿಗ ಎಚ್ಚೆನ್.
ಹೊಸಚಿತ್ರಗಳ ಶೀರ್ಷಿಕೆಗಳನ್ನು ಸಾಮಾನ್ಯವಾಗಿ ಸೆಲೆಬ್ರಿಟಿಗಳಿಂದ ಲೋಕಾರ್ಪಣೆಗೊಳಿಸುವ ಪರಿ ರೂಢಿಯಲ್ಲಿದೆ. ಆದರೆ ಒಂದು ಚಿತ್ರತಂಡ ಬಾರ್ ಒಂದರಲ್ಲಿ ಮದ್ಯಸೇವನೆ ಮಾಡಲು ಬಂದ ಮದ್ಯಪ್ರಿಯರಿಂದ ಸಿನಿಮಾ ಶೀರ್ಷಿಕೆ ಬಿಡುಗಡೆ ಮಾಡಿಸಿದ ವಿಭಿನ್ನ ಪ್ರಯೋಗ ನಡೆದಿದೆ.
ಹೌದು ನಿರ್ದೇಶಕ ಆಸ್ಕರ್ ಕೃಷ್ಣ ನಿರ್ದೇಶನದ ಎಂಟನೇ ಚಿತ್ರವಾಗಿ ಶುರುವಾಗುತ್ತಿರುವ "ಕುಡುಕ ನನ್ಮಕ್ಳು" ಶೀರ್ಷಿಕೆಯನ್ನು ಇಂದು ಬೆಂಗಳೂರಿನ ಉಲ್ಲಾಳದಲ್ಲಿರುವ ಬಾರ್ ಒಂದರಲ್ಲಿ ಬೆಳ್ಳಂಬೆಳಗ್ಗೆಯೇ ಮದ್ಯಪಾನ ಸೇವನೆ ಮಾಡಲು ಬಂದ ಮದ್ಯಪ್ರಿಯರಿಂದ ಲಾಂಚ್ ಮಾಡಿಸಲಾಗಿದೆ. ಇಂತಹ ವಿಭಿನ್ನ ಪ್ರಯೋಗದಲ್ಲಿ ಚಿತ್ರತಂಡ ಭಾಗವಹಿಸಿದ್ದು ಮದ್ಯಪಾನ ಮಾಡಲು ಬಂದ ಹಲವಾರು ಜನರನ್ನು ಮಾತನಾಡಿಸಿ ಅವರ ವ್ಯಸನಕ್ಕೆ ಕಾರಣವೇನು? ಎಂಬ ವಿಷಯಗಳನ್ನೂ ಸಹ ಸಂಗ್ರಹಿಸಿದೆ.
ಕಲಾಭೂಮಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ "ಕುಡುಕ ನನ್ಮಕ್ಳು" ಚಿತ್ರಕ್ಕೆ ನಿರ್ದೇಶಕರ ಸ್ನೇಹಿತರಾದ ಅರುಣ ಶೆಟ್ಟಿ, ವೈಶಾಲಿ ಮುರುಳೀಧರ್ ಕೊಟ್ಟೂ
ರು, ಪಲ್ಲವಿ ಅರುಣ್ ಅಗ್ನಿಹೋತ್ರಿ, ಎಸ್.ಹೆಚ್ ಬಾಬು ತುಮಕೂರು, ಬಿ.ನಿಂಗರಾಜು, ಲೋಕೇಶ್ ಎಸ್, ನಾಗಮಂಗಲ ಶ್ರೀನಿವಾಸ್, ಸಿದ್ದಲಿಂಗಯ್ಯ, ಗೋವಿಂದರಾಜು ಹಾಗೂ ಮುನಿ ಆಂಜನಪ್ಪ ಬಂಡವಾಳ ಹೂಡುತ್ತಿದ್ದಾರೆ.
ನಿರ್ಮಾಣದಲ್ಲಿ ಭಾಗಿಯಾಗಿರುವ ಬಿ.ನಿಂಗರಾಜು ಹಾಗೂ ಎಅ್ ಲೋಕೇಶ್ ರವರ ಹುಟ್ಟುಹಬ್ಬದ ಪ್ರಯುಕ್ತ ಶೀರ್ಷಿಕೆ ಬಿಡುಗಡೆ ಮಾಡಿದ ಚಿತ್ರತಂಡ, ಅತಿ ಶೀಘ್ರದಲ್ಲಿ ಚಿತ್ರದ ಚಿತ್ರೀಕರಣ ಶುರು ಮಾಡುವುದಾಗಿ ಹೇಳಿದೆ. "ಕುಡುಕ ನನ್ಮಕ್ಳು" ಚಿತ್ರಕ್ಕೆ ಮಂಜುಕವಿ ಸಂಗೀತ ನೀಡಿ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ವೆಂಕಟ್ ರವರು ಒದಗಿಸಿದ್ದು, ಪ್ರದೀಪ್ ವಿ. ಬಂಗಾರಪೇಟೆ ಛಾಯಾಗ್ರಹಣ, ಅಯುರ್ ಸಂಕಲನ ಹಾಗೂ ಸತೀಶ್ ಕ್ಯಾತಘಟ್ಟ ಸಹನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲಿದ್ದಾರೆ.
ಚಿತ್ರದ ಕಲಾವಿದರ ಆಯ್ಕೆಯು ಪ್ರಗತಿಯಲ್ಲಿದ್ದು, ಅತೀ ಶೀಘ್ರದಲ್ಲೇ ಪೂರ್ಣ ವಿವರಗಳನ್ನು ತಿಳಿಸಲಾಗುವುದೆಂದು ನಿರ್ದೇಶಕ ಆಸ್ಕರ್ ಕೃಷ್ಣ ಹೇಳಿದ್ದಾರೆ.
"ಕುಡುಕ ನನ್ಮಕ್ಳು" ಚಿತ್ರದಲ್ಲಿ ಹಾಸ್ಯ ಕಲಾವಿದರಾದ ಮಿಮಿಕ್ರಿ ಗೋಪಿ, ಚಂದ್ರಪ್ರಭ, ವಿನೋದ್ ಗೊಬ್ರಗಾಲ ಹಾಗೂ ಇತರರು ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಇದೊಂದು ಹಾಸ್ಯ ಚಿತ್ರವಿರಬಹುದೆಂದು ಅಂದಾಜಿಸಬಹುದಾಗಿದೆ.
ಮುಂದಿನ ದಿನಗಳಲ್ಲಿ ಚಿತ್ರಕ್ಕೆ ಸಂಬಂಧಿಸಿದಂತೆ ಪೂರ್ತಿ ವಿವರಗಳು ಲಭಿಸಲಿವೆ ಎಂದು ಚಿತ್ರತಂಡ ತಿಳಿಸಿದೆ.