- ರಾಘವೇಂದ್ರ ಅಡಿಗ ಎಚ್ಚೆನ್.

ಅದ್ಧೂರಿ ಮನೆಗಳು, ಸೆಟ್ಸ್, ಫಾರಿನ್ನಲ್ಲಿ ಶೂಟಿಂಗ್ ಹೀಗೆ ಅದ್ಧೂರಿ ಮೇಕಿಂಗ್ ಮೂಲಕ ಸೀರಿಯಲ್ಗಳ ಶೂಟಿಂಗ್ ಮಾಡೋದು ಕಿರುತೆರೆ ಲೋಕದಲ್ಲಿ ಹೆಚ್ಚಾಗಿದೆ. ಇದೇ ಕಾನ್ಸೆಪ್ಟ್ನಲ್ಲಿ ಕಿರುತೆರೆ ವೀಕ್ಷಕರಿಗೆ ಸದಾ ಹೊಸತನ್ನು ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯು ಈಗ ಹೊಸ ಧಾರವಾಹಿ ನೀ ಇರಲು ಜೊತೆಯಲ್ಲಿ ಪ್ರಸಾರ ಮಾಡಲು ಸಜ್ಜಾಗಿದೆ.

rajani1
ಮುದ್ದುಲಕ್ಷೀ,  ಮರಳಿ ಬಂದಳು ಸೀತೆ, ಮರಳಿ ಮನಸಾಗಿದೆ ಇನ್ನು ಮುಂತಾದ ಯಶಸ್ವಿ ಧಾರವಾಹಿಗಳನ್ನು ನಿರ್ದೇಶಿಸಿರುವ ಧರಣಿ.ಜಿ.ರಮೇಶ್  ನಿರ್ಮಾಣ ಜತೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.   ಈ ಕುರಿತು ಇತ್ತೀಚೆಗೆ ಮಾಧ್ಯಮಗೋಷ್ಟಿ ನಡೆಸಿದ ತಂಡ ಧಾರಾವಾಹಿ ಬಗ್ಗೆ ಅನೇಕ ಮಾಹಿತಿ  ಹಂಚಿಕೊಂಡಿತು.

rajani2

ಸ್ವಾತಂತ್ರ ಹೋರಾಟಗಾರನ ಕುಟುಂಬದಲ್ಲಿ ಬೆಳೆದ ನಾಯಕ ಕೃಷ್ಣ ತಂತ್ರದಲ್ಲಿ ಕಪಟಿಯಾಗಿದ್ದರೂ, ಮಾಡಿದ ಸಹಾಯಕ್ಕೆ ಪ್ರತಿಫಲವನ್ನು ನಿರೀಕ್ಷಿಸದ ಆಧುನಿಕ ಯುಗದ ಶ್ರೀ ಕೃಷ್ಣ. ಆದರೆ ಅತ್ತಿಗೆ ಮನೆ ಮಂದಿಯರನ್ನೆಲ್ಲಾ ತನ್ನ ಕೈಗೊಂಬೆಯಾಗಿಸಿ ಕೊಂಡಿರುತ್ತಾಳೆ.
ಅಪ್ಪನ ಮುದ್ದಿನ ಮಗಳು ನಾಯಕಿ ರಚನಾಪಾಟೀಲ್ ವಿದ್ಯಾವಂತೆ. ಯಾರನ್ನು ನೋಯಿಸದ ಮಾತೃ ಹೃದಯಿ. ಮುಂದೆ ಸೊಕ್ಕಿನಿಂದ ಮರೆಯುತ್ತಿರುವ ಅತ್ತಿಗೆಗೆ ಕೃಷ್ಣ ತಕ್ಕ ಪಾಠ ಕಲಿಸುತ್ತಾನಾ? ತದ್ವಿರುದ್ದ ಭಾವಗಳನ್ನು ಹೊಂದಿರುವ ಕೃಷ್ಣಾ-ರಚನಾ ಹೇಗೆ ಒಂದಾಗುತ್ತಾರೆ? ಆಕೆಗೆ ಆದರ್ಶವಾಗಿರೋ ಅತ್ತಿಗೆ. ತನ್ನನ್ನೇ ಎದುರಾಳಿಯಾಗಿ  ನೋಡಿದ್ರೆ ಮುಂದೇನಾಗಬಹುದು ಎಂಬುದು ಮುಖ್ಯ ಕಥಾ ಸಾರಾಂಶವಾಗಿದೆ.

rajani4

ನಾಯಕನಾಗಿ ಪವನ್ ರವೀಂದ್ರ, ನಾಯಕಿಯಾಗಿ ಸಲೋಮಿ ಡಿಸೋಜ. ’ಅಮೃತವರ್ಷಿಣಿ’ ಧಾರವಾಹಿಯಲ್ಲಿ ಹೆಸರು ಮಾಡಿದ್ದ ರಜಿನಿ, ಗ್ಯಾಪ್ ನಂತರ ಊರ್ಮಿಳಾ ದಿವಾನ್ ಹೆಸರಿನಲ್ಲಿ ದುರಳ ಅತ್ತಿಗೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಜಿನಿ ಕಿರುತೆರೆ ಲೋಕಕ್ಕೆ ಬರುವುದಕ್ಕಿಂತ ಮುನ್ನ ಆರ್ಕೆಸ್ಟ್ರಾಗಳಲ್ಲಿ ಹಾಡು ಹೇಳುತ್ತಿದ್ದರು. ನಂತರ ಕಿರುತೆರೆಗೆ ಎಂಟ್ರಿ ಕೊಟ್ಟರು. ಸ್ಟಾರ್ ಸುವರ್ಣದಲ್ಲಿ ಮೂಡಿ ಬಂದ ಅಮೃತ ವರ್ಷಿಣಿ ಧಾರಾವಾಹಿ ಮೂಲಕ ಮನೆ ಮಾತಾದರು. ಅಮೃತವರ್ಷಿಣಿಯಲ್ಲಿ ಅಮೃತ ಪಾತ್ರದ ಮೂಲಕ ಎಲ್ಲರ ಮನಗೆದ್ದಿದ್ದರು. ಆ ಪಾತ್ರದ ಮುಗ್ಧತೆ, ಕಷ್ಟ ಮತ್ತು ಸವಾಲುಗಳು ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿವೆ. ಆದರೆ, ನೀ ಇರಲು ಜೊತೆಯಲ್ಲಿ ಧಾರಾವಾಹಿಯಲ್ಲಿ ರಜಿನಿ ಸಂಪೂರ್ಣ ತದ್ವಿರುದ್ಧವಾದ ಖಡಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧಾರಾವಾಹಿಗಳಷ್ಟೇ ಅಲ್ಲದೇ, ರಿಯಾಲಿಟಿ ಶೋಗಳಲ್ಲೂ ಕಮಾಲ್ ಮಾಡಿದ್ದ ರಜಿನಿ, ಇದೀಗ ಸಿನಿಮಾ ರಂಗದಲ್ಲೂ ಮಿಂಚುತ್ತಿದ್ದಾರೆ. ಮತ್ತೆ ಹೊಸ ಕಾನ್ಸೆಪ್ಟ್ ಹಾಗೂ ಅದ್ದೂರಿತನ ಹೊಂದಿರುವ ನೀ ಇರಲು ಜೊತೆಯಲ್ಲಿ ಸೀರಿಯಲ್ ಮೂಲಕ ಕಮಾಲ್ ಮಾಡಲು ರಜಿನಿ ಸಜ್ಜಾಗಿದ್ದಾರೆ.  ಅಂದಹಾಗೆ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ನಟಿ ರಜಿನಿ ಅವರು 'ಮಜಾ ಟಾಕೀಸ್'‌ ಶೋನಲ್ಲಿ ಕೂಡ ಭಾಗವಹಿಸಿದ್ದರು. ಒಟ್ಟಿನಲ್ಲಿ ರಜಿನಿ ಅವರು ಡ್ಯಾನ್ಸ್‌, ಸಂಗೀತ, ಕಾಮಿಡಿ, ನಟನೆ ಎಂದು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು.

rajani3

ಇವರಲ್ಲದೆ ಮೋಹನ್ ಸೇರಿದಂತೆ ಇನ್ನು ಅನೇಕ ಪ್ರತಿಭಾನ್ವಿತ ನಟ-ನಟಿಯರು ಅಭಿನಯಿಸುತ್ತಿದಾರೆ. ಇದೇ ಆಗಸ್ಟ್ 11ರಿಂದ ಪ್ರತಿ ದಿನ ರಾತ್ರಿ 7 ಘಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ.  ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ