-  ರಾಘವೇಂದ್ರ ಅಡಿಗ ಎಚ್ಚೆನ್.

ಭಾರತೀಯ ದೂರದರ್ಶನದ ಇತಿಹಾಸದಲ್ಲೇ ಶಾಶ್ವತ ಸ್ಥಾನ ಪಡೆದ ಮಾಲ್ಗುಡಿ ಡೇಸ್ಧಾರಾವಾಹಿಗೆ 40 ವರ್ಷಗಳು ತುಂಬಿವೆ. 1986ರಲ್ಲಿ ದೂರದರ್ಶನದಲ್ಲಿ ಮೊದಲ ಬಾರಿಗೆ ಪ್ರಸಾರವಾದ ಈ ಸರಣಿ, ಇಂದಿಗೂ ಕೋಟ್ಯಂತರ ಭಾರತೀಯರ ಬಾಲ್ಯದ ನೆನಪುಗಳನ್ನು ಮರುಕಳಿಸುವ ಅಪರೂಪದ ಕ್ಲಾಸಿಕ್ ಆಗಿ ಉಳಿದಿದೆ.

ಖ್ಯಾತ ಸಾಹಿತಿ ಆರ್.ಕೆ. ನಾರಾಯಣ್ ಅವರ ಕಥೆಗಳಿಗೆ ಕನ್ನಡದ ಹೆಮ್ಮೆಯ ನಟ-ನಿರ್ದೇಶಕ ಶಂಕರ್ ನಾಗ್ ದೃಶ್ಯರೂಪ ನೀಡಿದ ರೀತಿ ಭಾರತೀಯ ಟೆಲಿವಿಷನ್ ಇತಿಹಾಸದಲ್ಲೇ ಮಾದರಿಯಾಗಿದೆ. ಸರಳ ಕಥೆಗಳನ್ನೇ ಜೀವಂತ ಅನುಭವವಾಗಿಸಿದ ಅವರ ನಿರ್ದೇಶನ, ಕ್ಯಾಮೆರಾ ಭಾಷೆ ಹಾಗೂ ಮೇಕಿಂಗ್ ಇಂದಿಗೂ ಸಿನಿ ವಿದ್ಯಾರ್ಥಿಗಳಿಗೆ ಪಾಠವಾಗಿದೆ.

ಕಥೆಯ ಕಾಲ್ಪನಿಕ ಊರಾದ **‘ಮಾಲ್ಗುಡಿ’**ಗೆ ಜೀವ ತುಂಬಲು ಶಂಕರ್ ನಾಗ್ ಶಿವಮೊಗ್ಗ ಜಿಲ್ಲೆಯ ಆಗುಂಬೆಯನ್ನು ಆಯ್ಕೆ ಮಾಡಿದ್ದರು. ಮಲೆನಾಡಿನ ಹಸಿರು, ಮಳೆ, ಹಳೆಯ ಮನೆಗಳು ಹಾಗೂ ಗ್ರಾಮೀಣ ವಾತಾವರಣ ಧಾರಾವಾಹಿಗೆ ವಿಶಿಷ್ಟ ಅಸ್ತಿತ್ವ ನೀಡಿತ್ತು. ಇಂದಿಗೂ ಆಗುಂಬೆಯಲ್ಲಿರುವ ಶೂಟಿಂಗ್ ಸ್ಥಳಗಳು ಪ್ರವಾಸಿಗರ ನೆಚ್ಚಿನ ತಾಣಗಳಾಗಿವೆ.

ಮಾಸ್ಟರ್ ಮಂಜುನಾಥ್ ಅಭಿನಯಿಸಿದ ‘ಸ್ವಾಮಿ’ ಪಾತ್ರ, ಅನಂತ್ ನಾಗ್, ಗಿರೀಶ್ ಕಾರ್ನಾಡ್, ವೈಶಾಲಿ ಕಾಸರವಳ್ಳಿ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರ ಅಭಿನಯ ಧಾರಾವಾಹಿಯ ಪ್ರಮುಖ ಆಕರ್ಷಣೆಯಾಗಿತ್ತು.

ಸಂಗೀತ ನಿರ್ದೇಶಕ ಎಲ್. ವೈದ್ಯನಾಥನ್ ಸಂಯೋಜಿಸಿದ ‘ತಾನಾ ನಾನಾ ತಾನಾನಾನಾ…’ ಶೀರ್ಷಿಕೆ ಸಂಗೀತ ಇಂದಿಗೂ ಭಾರತೀಯ ಟೆಲಿವಿಷನ್ ಇತಿಹಾಸದ ಅತ್ಯಂತ ಜನಪ್ರಿಯ ಥೀಮ್ ಟ್ಯೂನ್‌ಗಳಲ್ಲಿ ಒಂದಾಗಿದೆ.

ನಾಲ್ಕು ದಶಕಗಳು ಕಳೆದರೂ ‘ಮಾಲ್ಗುಡಿ ಡೇಸ್’ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳದೇ ಭಾರತೀಯ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಭಾಗವಾಗಿ ಉಳಿದಿದೆ. ಇದು ಶಂಕರ್ ನಾಗ್ ಅವರ ದೂರದೃಷ್ಟಿ, ಆರ್.ಕೆ. ನಾರಾಯಣ್ ಅವರ ಕಥಾಸಾಮರ್ಥ್ಯ ಮತ್ತು ಇಡೀ ತಂಡದ ಅದ್ಭುತ ಸೃಜನಶೀಲತೆಗೆ ಸಿಕ್ಕ ಅಮರ ಗೌರವವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ