ಶರತ್ ಚಂದ್ರ
ರಶ್ಮಿಕಾ ಮಂದಣ್ಣ ನಂತರ ಕನ್ನಡದ ಇನ್ನೊಬ್ಬ ನಾಯಕ ನಟಿ ಪರಭಾಷೆಯಲ್ಲಿ ಪರ್ಮನೆಂಟಾಗಿ ನೆಲೆಯುರುವ ಸೂಚನೆ ನೀಡಿದ್ದಾಳೆ. ಅದು ಬೇರೆ ಯಾರು ಅಲ್ಲ, ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಪುಟ್ಟಿ ಎಂದು ಕನ್ನಡಿಗರಿಂದ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ರುಕ್ಮಿಣಿ ವಸಂತ್ ಕನ್ನಡ ಚಿತ್ರಗಳಿಂದ ದೂರವಾಗಿದ್ದಾರೆ.
ಈ ವರ್ಷ ಬಿಡುಗಡೆಗೆ ಸಿದ್ಧವಾಗಿರುವ ಬಹುನಿರೀಕ್ಷಿತ ಚಿತ್ರ ಕಾಂತಾರ ಚಾಪ್ಟರ್ 1 ಬಿಟ್ಟರೆ, ರುಕ್ಮಿಣಿ ವಸಂತವರ ಕೈಯಲ್ಲಿ ಯಾವುದೇ ಕನ್ನಡ ಚಿತ್ರಗಳಿಲ್ಲ. ತೆಲುಗಿನಲ್ಲಿ ಅಪ್ಪುಡೋ ಇಪ್ಪುಡೋ ಎಪ್ಪುಡೋ ಚಿತ್ರದಲ್ಲಿ ಅಭಿನಯಿಸಿದ ನಂತರ ಕಾಲಿ ವುಡ್ಗೆ ಎಂಟ್ರಿ ನೀಡಿದ್ದಾರೆ. ವಿಜಯ್ ಸೇತುಪತಿಯಂತಹ ಸೂಪರ್ ಸ್ಟಾರ್ ನಟನ ಜೊತೆ ನಾಯಕಿಯಾಗಿ' ಏಸ್' ಚಿತ್ರದಲ್ಲಿ ನಟಿಸಿದ್ದರು. ಚಿತ್ರ ಅಷ್ಟೊಂದು ಯಶಸ್ಸು ಕಾಣದಿದ್ದರೂ ಕೂಡ, ತಮಿಳು ಚಿತ್ರರಂಗದಲ್ಲಿ ಆಕೆಗೆ ಬರುತ್ತಿರುವ ಅವಕಾಶಗಳನ್ನು ಗಮನಿಸಿದರೆ ಆಕೆ ತಮಿಳಿನಲ್ಲಿ ಇನ್ನೊಂದಷ್ಟು ಚಿತ್ರಗಳಲ್ಲಿ ಅಭಿನಯಿಸಿ ಅಲ್ಲೇ ನೆಲೆ ಊರುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.
ಈಗಾಗಲೇ ಬಿಡುಗಡೆಗೆ ಸಿದ್ಧವಾಗಿರುವ' ಮದ್ರಾಸಿ' ಚಿತ್ರದಲ್ಲಿ ಶಿವ ಕಾರ್ತಿಕೇಯ್ ಗೆ ಹೀರೋಯಿನ್ ಆಗಿ ಅಭಿನಯಿಸುತ್ತಿದ್ದಾರೆ.
ಇತ್ತೀಚೆಗೆ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಮಣಿರತ್ನಂ ಅವರ ಮುಂದಿನ ಚಿತ್ರದಲ್ಲಿ ಅಭಿನಯಿಸಲು
ರುಕ್ಮಿಣಿ ವಸಂತ್ ನಾಯಕಿಯಾಗಿ ಅಭಿನಯಿಸಲು ಆಯ್ಕೆಯಾಗಿದ್ದಾರೆ. ವಿಕ್ರಂ ಚಿಯಾನ್ ಮಗ ಧ್ರುವ ವಿಕ್ರಂ ನಾಯಕನಾಗಿ ನಟಿಸುತ್ತಿದ್ದಾರೆ.ಥಗ್ ಲೈಫ್ ನ ಸೋಲಿನ ನಂತರ ಮಣಿರತ್ನಂ ಅವರು ಒಂದು ರೋಮ್ಯಾಂಟಿಕ್ ಲವ್ ಸ್ಟೋರಿ ಮತ್ತು ಆಕ್ಷನ್ ಚಿತ್ರಕ್ಕೆ ಕೈ ಹಾಕಿದ್ದಾರೆ.
ಅಲ್ಲಿಗೆ ಸದ್ಯಕ್ಕೆ ರುಕ್ಮಿಣಿ ವಸಂತ್ ಮತ್ತೆ ಕನ್ನಡಕ್ಕೆ ಮರಳುವ ಸೂಚನೆ ಕಾಣುತ್ತಿಲ್ಲ.