– ರಾಘವೇಂದ್ರ ಅಡಿಗ ಎಚ್ಚೆನ್.
ನಟ ಕಿಚ್ಚ ಸುದೀಪ್ ಅವರು ಮ್ಯಾಕ್ಸ್ ಬಳಿಕ ʼಮಾರ್ಕ್ʼ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಕಿಚ್ಚ ಸುದೀಪ್ ಬರ್ತ್ ಡೇ ನಿಮಿತ್ತ ಸೆಪ್ಟೆಂಬರ್ 1ರಂದು ಚಿತ್ರದ ಟೈಟಲ್ ಟೀಸರ್ ರಿಲೀಸ್ ಆಗಿತ್ತು. ಕೆ47 ಸಿನಿಮಾಕ್ಕೆ ಮಾರ್ಕ್ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾವನ್ನ ಮ್ಯಾಕ್ಸ್ ನಿರ್ದೇಶಕ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ವರ್ಷ ಮ್ಯಾಕ್ಸ್ ಸಿನಿಮಾ ರಿಲೀಸ್ ಆದ ಡೇಟ್‌ಗೇ ಈ ವರ್ಷ ಮಾರ್ಕ್ ಸಿನಿಮಾವೂ ರಿಲೀಸ್ ಆಗಲಿದೆ. ಅಂದರೆ ಡಿಸೆಂಬರ್ 25ಕ್ಕೆ ಚಿತ್ರ ಬಿಡುಗಡೆ ಮಾಡ್ತೇವೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಇನ್ನೂ ಕಿಚ್ಚ ಸುದೀಪ್, ‘ಮಾರ್ಕ್’ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದು ಹೊಸ ಅಪ್ಡೇಟ್ ನೀಡಿದ್ದಾರೆ. ಸುದೀಪ್ ಮಾಡಿರುವ ಟ್ವೀಟ್ನ ಪ್ರಕಾರ, ‘ಮಾರ್ಕ್’ ಸಿನಿಮಾದ ಹೊಸ ಹಾಡು ಶೀಘ್ರವೇ ಬಿಡುಗಡೆ ಆಗಲಿದೆಯಂತೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ‘ಲಿರಿಕಲ್ ವಿಡಿಯೋ ಹಾಡು ಶೀಘ್ರವೇ ಬಿಡುಗಡೆ ಆಗಲಿದೆ.
ಅಜನೀಶ್ ಲೋಕನಾಥ್ ಅದ್ಭುತವಾದ ಹಾಡು ಸಂಯೋಜನೆ ಮಾಡಿದ್ದಾರೆ. ಶೋಭಿ ಮಾಸ್ಟರ್ ಅವರು ಅದ್ಭುತವಾಗಿ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ಹಾಡಿನ ಚಿತ್ರೀಕರಣದ ಸಮಯದಲ್ಲಿ ನಾನಂತೂ ಬಹಳ ಎಂಜಾಯ್ ಮಾಡಿದೆ. ಶೀಘ್ರವೇ ಹಾಡು ಬಿಡುಗಡೆ ಆಗಲಿದೆ’ ಎಂದಿದ್ದಾರೆ.
‘ಮಾರ್ಕ್’ ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸುದೀಪ್ ನಟಿಸಿದ್ದ ‘ಮ್ಯಾಕ್ಸ್’ ಸಿನಿಮಾಕ್ಕೂ ಅಜನೀಶ್ ಅವರೇ ಸಂಗೀತ ನೀಡಿದ್ದರು. ಆ ಸಿನಿಮಾದ ಹಾಡುಗಳೂ ಸಹ ಹಿಟ್ ಆಗಿದ್ದವು. ಈಗ ‘ಮಾರ್ಕ್’ ಸಿನಿಮಾಕ್ಕೂ ಅಜನೀಶ್ ಅವರೇ ಸಂಗೀತ ನೀಡಿದ್ದಾರೆ. ಈ ಸಿನಿಮಾದ ಹಾಡುಗಳೂ ಸಹ ದೊಡ್ಡ ಹಿಟ್ ಆಗುವ ನಿರೀಕ್ಷೆ ಇದೆ. ಕೆಲವೇ ದಿನಗಳಲ್ಲಿ ಸಿನಿಮಾದ ವಿಡಿಯೋ ಹಾಡು ಬಿಡುಗಡೆ ಆಗಲಿದೆ.