- ರಾಘವೇಂದ್ರ ಅಡಿಗ ಎಚ್ಚೆನ್.

ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಇದೇ ಖುಷಿಯಲ್ಲಿ ವಿಷ್ಣುವರ್ಧನ್ ಅವರ 75ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನ್ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲು ಅಭಿಮಾನಿಗಳು ಸಿದ್ಧವಾಗಿದ್ದರು. ಆದರೆ ಇದಕ್ಕೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿದೆ.
ಸೆಪ್ಟೆಂಬರ್ 18 ರಂದು ವಿಷ್ಣುವರ್ಧನ್ ಅವರ ಜಯಂತೋತ್ಸವವನ್ನು ಉದ್ಯಾನ ನಗರಿಯ ಕಂಗೇರಿ ಬಳಿಯ ಉತ್ತರಹಳ್ಳಿ ಮೇನ್ ರೋಡ್ನಲ್ಲಿರುವ ಅಭಿಮಾನ್ ಸ್ಟುಡಿಯೋದಲ್ಲಿ ಆಚರಣೆ ಮಾಡಲು ಅವರ ಅಭಿಮಾನಿಗಳು ತಯಾರಿಯಲ್ಲಿದ್ದರು. ಇದಕ್ಕಾಗಿ ಅವರ ಅಭಿಮಾನಿಗಳು ಸಂಘ, ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ ಈ ಬಗ್ಗೆ ವಿಚಾರಣೆ ನಡೆಸಿದ

rathna

ನ್ಯಾಯಾಲಯ ಅನುಮತಿಯನ್ನು ನಿರಾಕರಣೆ ಮಾಡಿದೆ. ಸಮಾಧಿ ಜಾಗದ ವಿವಾದ ವಿಚಾರಣೆ ಇನ್ನೂ ಬಾಕಿ ಇರುವ ಕಾರಣ ಸಂಭ್ರಮಾಚರಣೆ ಬೇಡ ಎಂದು ಹೇಳಿದೆ.
ಹೈಕೋರ್ಟ್ ಅಭಿಮಾನ್ ಸ್ಟುಡಿಯೋದಲ್ಲಿ ಜಯಂತೋತ್ಸವ ಸಂಭ್ರಮಾಚರಣೆ ಬೇಡ ಎಂದಿದೆ. ಇನ್ನೇನು ಒಂದೇ ದಿನ ಕಳೆದರೆ ದಾದಾ ಅವರ ಹುಟ್ಟುಹಬ್ಬ ಇದೆ. ಇಷ್ಟರೊಳಗೆ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಸಂಭ್ರಮಾಚರಣೆ ಎಲ್ಲಿ? ಹೇಗೆ? ಎನ್ನುವುದನ್ನ ತಿಳಿಸಬೇಕಿದೆ. ಹೀಗಾಗಿ ಹುಟ್ಟುಹಬ್ಬದ ಬಗ್ಗೆ ಸಾಹಸಸಿಂಹನ ಅಭಿಮಾನಿಗಳಲ್ಲಿ ಸದ್ಯಕ್ಕಂತೂ ಗೊಂದಲ ಅಂತೂ ಇದ್ದೇ ಇದೆ.
ನಾಳೆ ಬಿಟ್ಟು ನಾಡಿದ್ದು ಗುರುವಾರ ವಿಷ್ಣುವರ್ಧನ್ ಅವರ 75ನೇ ವರ್ಷದ ಜಯಂತೋತ್ಸವ ಆಚರಣೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಅಂದು ಎಲ್ಲಿಗೆ ಹೋಗಬೇಕು ಎನ್ನುವ ಗೊಂದಲವಿದೆ. 2 ವರ್ಷಗಳಿಂದ ಅಭಿಮಾನ್ ಸ್ಟುಡಿಯೋದಲ್ಲಿ ಸಂಭ್ರಮಾಚರನೆಗೆ ಬಾಲಕೃಷ್ಣ ಕುಟುಂಬಸ್ಥರು ಅಡ್ಡಿಪಡಿಸಿದ್ದರು. ಈ ವರ್ಷ ಸ್ಮಾರಕವನ್ನೇ ಧ್ವಂಸ ಮಾಡಲಾಗಿದೆ. ಇದೇ ನೋವಿನಲ್ಲಿರುವ ಅವರ ಅಭಿಮಾನಿಗಳಿಗೆ ಮತ್ತೊಂದು ಶಾಕ್ ಎದುರಾಗಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ