-ಶರತ್ ಚಂದ್ರ

ಕಳೆದ ವರ್ಷದ ಕೊನೆಗೆ ಮಾಕ್ಸ್ ಅಲಿಯಾಸ್ ಮಹಾ ಅಕ್ಷಯ್ ಪಾತ್ರದಲ್ಲಿ ಕಿಚ್ಚ ಸುದೀಪ್ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿ ಸದ್ದು ಮಾಡಿದ್ದು ನಿಮಗೆ ಗೊತ್ತಿದೆ. ಈಗ ಮತ್ತೆ ಅಭಿಮಾನಿಗಳನ್ನು ರಂಜಿಸಲು ಮ್ಯಾಕ್ಸ್ ಮತ್ತೆ ಬರುತ್ತಿದ್ದಾನೆ.

'ಸಧ್ಯಕ್ಕೆ ಬಿಲ್ಲಾ ರಂಗ ಭಾಷಾ ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಸುದೀಪ್ ಮ್ಯಾಕ್ಸ್ ಚಿತ್ರದ ಸೀಕ್ವಲ್ ಅಥವಾ ಪ್ರೀಕ್ವಲ್ ನಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ಬಿಲ್ಲಾ ರಂಗ ಭಾಷಾ ' ತುಂಬಾ ದೊಡ್ಡ ಸ್ಕೇಲ್ ನ ಚಿತ್ರವಾದುದರಿಂದ ಮೇಕಿಂಗ್ ವರ್ಷದ ಮೇಲೆ ಹಿಡಿಯುವುದರಿಂದ ಆ ಗ್ಯಾಪ್ ನಲ್ಲಿ ಮ್ಯಾಕ್ಸ್ 2 ನಲ್ಲಿ ಕಿಚ್ಚ ಅಭಿನಯಿಸುವ ಬಗ್ಗೆ ಯೋಚಿಸಿದ್ದಾರಂತೆ.

ಈ ಬಾರಿ ನಿರ್ಮಾಪಕರು ಕೂಡ ಬದಲಾಗುವ ಸಾಧ್ಯತೆ ಇದೆಯೆಂದು ಕೇಳಿ ಬರುತ್ತಿದೆ.ಕಳಪುಲ್ಲಿ. ಎಸ್. ತನು ಅವರ ಜಾಗದಲ್ಲಿ ಹೊಸ ನಿರ್ಮಾಪಕರು ಬಂಡವಾಳ ಹೂಡಲಿದ್ದಾರೆ.

ಬಲ್ಲ ಮೂಲಗಳ ಪ್ರಕಾರ ಮ್ಯಾಕ್ಸ್ ಚಿತ್ರದಲ್ಲಿ ಸುದೀಪ್ ಕೈಲ್ಲಿ ಅದ್ಬುತ ಅಭಿನಯ ಮಾಡಿಸಿದ ನಿರ್ದೇಶಕ ವಿಜಯ ಕಾರ್ತಿಕೇಯ,ಸೀಕ್ವೆಲ್ ನಲ್ಲಿ ಮತ್ತೆ ಕಮಾಲ್ ಮಾಡಲು ಹೊರಟಿದ್ದಾರಂತೆ.ಮ್ಯಾಕ್ಸ್ ಮೊದಲ ಭಾಗವನ್ನು ಮೀರಿಸುವ ಕಥೆಯನ್ನು ಹೆಣೆಯುವ ಜವಾಬ್ದಾರಿ ವಿಜಯ್ ಮೇಲೆ ಇದೆ.

1000525750

ಮ್ಯಾಕ್ಸ್ ಚಿತ್ರದಲ್ಲಿ ಅಭಿನಯಿಸಿರುವ ಕಿಚ್ಚ ನ ಸ್ಕ್ವಾಡ್ ಇಲ್ಲೂ ಕೂಡ ಮುಂದುವರಿಯಲಿದೇಯಾ ಅನ್ನೋದು ಇನ್ನೂ ಗೊತ್ತಾಗಿಲ್ಲ.

ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನ ಅತೀ ಜನಪ್ರಿಯ ಸಿನಿಮಾವೊಂದರ ಸೀಕ್ವಲ್ ಅಥವಾ ಪ್ರೀಕ್ವಲ್ ಬರುತ್ತಿದೆ.

1000525752

ಈ ಹಿಂದೆ ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡುವುದಕ್ಕೋಸ್ಕರ ಬಿಗ್ ಬಾಸ್ ಹೊಸ್ಟ್ ಮಾಡು ವುದನ್ನು ನಿಲ್ಲಿಸುವುದಾಗಿ ಹೇಳಿದ್ದ ಕಿಚ್ಚ, ತಮ್ಮ ಅಭಿಮಾನಿಗಳಿಗಾಗಿ 'ಬಿಲ್ಲಾ ರಂಗ ಭಾಷಾ' ಬಿಡುಗಡೆ ಮುಂಚೆಯೇ ಮ್ಯಾಕ್ಸ್ 2 ಮೂಲಕ ರಸದೌತನ ನೀಡುವ ಸಾಧ್ಯತೆ ಇದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ