ಇಂದು ನಮಗೆ ಯಾವುದಾದರೂ ವಿಷಯದ ಬಗ್ಗೆ ತಿಳಿಯಬೇಕೆಂದರೆ ಥಟ್ ಎಂತ ಮೊಬೈಲ್ ಇಲ್ಲವೇ ಕಂಪ್ಯೂಟರ್ನಲ್ಲಿ ಗೂಗಲ್ ತೆರೆದು ನಮಗೆ ಬೇಕಾದ ವಿಷಯವನ್ನು ಅಲ್ಲಿ ನಮೂದಿಸಿದ ಕ್ಷಣದಲ್ಲೇ ಹತ್ತಾರು ಉತ್ತರಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಆದೇ 80-90ರ ದಶಕದಲ್ಲಿ ಇಂಟರ್ನೆಟ್ ಇಲ್ಲದೇ ಹೋದ ಸಮಯದಲ್ಲಿ ಸಮೀಪದ ಗ್ರಂಥಾಲಯಕ್ಕೆ ಹೋಗಿ ಹತ್ತಾರು ಗಂಟೆಗಳ ಕಾಲ ಅಲ್ಲಿರುವ ಪುಸ್ತಕಗಳಲ್ಲಿ ನಮಗೆ ಬೇಕಾದ ವಿಷಯಗಳು ಸಿಗುತ್ತದೆಯೇ ಎಂದು ಹುಡುಕುವಂತಹ ಸಮಯದಲ್ಲೇ ನಡೆದಾಡುವ ಗೂಗಲ್ ನಂತೆ ನಾಡು ನುಡಿ ವಿಜ್ಞಾನ, ಗಣಿತ, ಜನಪದ ಹೀಗೆ ಯಾವುದೇ ವಿಷಯದ ಕುರಿತಾದರೂ ಗಂಟೆ ಗಟ್ಟಲೆ ಮಾತನಾಡಬಲ್ಲಂತ, ದೇವರು ಮೇಲೆ ಹೂವು ತಪ್ಪಿದರೂ, ಅಂದಿನ ಕಾಲದ ಪತ್ರಿಕೆಗಳು, ವಾರ ಪತ್ರಿಕೆಗಳು ಇಲ್ಲವೇ ಮಾಸಪತ್ರಿಕೆಗಳಲ್ಲಿ ಅವರ ಯಾವುದಾದರೂ ಒಂದು ಲೇಖನ ಅಥವಾ ಉಪಯುಕ್ತ ಮಾಹಿತಿ ತಪ್ಪಿಸದೇ ನಿರಂತರವಾಗಿ ಬಿಡುವಿಲ್ಲದಂತೆ ಬರೆವ, ಬಿಡುವಿಲ್ಲದ ಬರಹಗಾರಾಗಿದ್ದ ನಮ್ಮಂತಹ ಸಾವಿರಾರು ಜನರಿಗೆ ಕೌತುಕವನ್ನು ಹುಟ್ಟು ಹಾಕುತ್ತಿದ್ದ ಶ್ರೀ ಸಂಪಟೂರು ವಿಶ್ವನಾಧ್ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾ ನಾಯಕರು.

SV2

ಬೆಂಗಳೂರಿನ ಮಲ್ಲೇಶ್ವರದ 15ನೇ ಕ್ರಾಸಿನ ಆಸುಪಾಸಿನವರಾಗಿದ್ದ ಎಸ್‌. ಹನುಮಂತರಾವ್‌ ಮತ್ತು ನಾಗಮ್ಮ ದಂಪತಿಗಳಿಗೆ ಫೆಬ್ರವರಿ 28, 1938ರ ಶಿವರಾತ್ರಿಯ ದಿನದಂದು ಜನಿಸಿದ ಮಗುವಿಗೆ ಶಿವನ ಹೆಸರೇ ಆದ ವಿಶ್ವನಾಥ ಎಂದು ನಾಮಕರಣ ಮಾಡುತ್ತಾರೆ. ಬಾಲ್ಯದಿಂದಲೂ ಅತ್ಯಂತ ಚುರುಕಿನ ಹುಡುಗರಾಗಿದ್ದ ವಿಶ್ವನಾಥ್ ತಮ್ಮ ಮನೆಯ ಹತ್ತಿರವೇ ಇದ್ದ ಮಲ್ಲೇಶ್ವರದ ಸರಕಾರಿ ಪ್ರೌಢಶಾಲೆ ಮತ್ತು ಹೈಸ್ಕೂಲ್ ನಲ್ಲಿ ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿಯನ್ನು ಮುಗಿಸಿ ಅಂದಿನ ದಿನಗಳಲ್ಲಿ GAS college ಎಂದೇ ಪ್ರಸಿದ್ಧಿಯಾಗಿದ್ದ ಸರಕಾರಿ ಕಲೆ ಮತ್ತು ವಿಜ್ಞಾನ ಕಾಲೇಜಿನಿಂದ ಇಂಟರ್ ಮೀಡಿಯೆಟ್‌ ಮುಗಿಸಿ ಅಲ್ಲಿಯೇ ಹತ್ತಿರದ ಸೆಂಟ್ರಲ್‌ ಕಾಲೇಜಿನಿಂದ ಬಿ.ಎಸ್ಸಿ ನಂತರ ಸಸ್ಯಶಾಸ್ತ್ರ MScದಲ್ಲಿ ಪದವಿಯನ್ನು ಮುಗಿಸುತ್ತಾರೆ. ಆನಂತರ ಮತ್ತೆ ತಮ್ಮ ಮನೆಯ ಸಮೀಪವೇ ಇದ್ದ ಎಂ.ಇ.ಎಸ್‌. ಕಾಲೇಜಿನಿಂದ ಬಿ.ಎಡ್‌ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಡಿಪ್ಲೊಮ ಪಡೆದ ನಂತರ ಮಲ್ಲೇಶ್ವರದ ಕುಮಾರಪಾರ್ಕ್ ಬಳಿ ಇದ್ದ ಪ್ರತಿಷ್ಠಿತ ಗಾಂಧೀನಗರ ಪ್ರೌಢಶಾಲೆಯಲ್ಲಿ 1960 ಅಧ್ಯಾಪಕರಾಗಿ ಸೇರಿಕೊಳ್ಳುತ್ತಾರೆ.

ಅಂದಿನ ಕಾಲದಲ್ಲಿ ಶಾಲೆಗಳಲ್ಲಿ ಅಧ್ಯಾಪಕರನ್ನು ಅವರ ಇನಿಷಿಯಲ್ಸ್ ನಿಂದ ಕರೆಯುವುದು ರೂಢಿಯಲ್ಲಿದ್ದ ಕಾರಣ, ಸಂಪಟೂರು ವಿಶ್ವನಾಥರು ಎಸ್.ವಿ. ಎಂದೇ ಅವರ ವಿದ್ಯಾರ್ಥಿಗಳಿಗೆ ಚಿರಪರಿಚಿತರಾಗಿದ್ದಾರೆ. ಉಳಿದೆಲ್ಲಾ ಪಾಠಕ್ಕಿಂತ ಎಸ್.ವಿ ಅವರ ಪಾಥ ಎಂದರೆ ವಿದ್ಯಾರ್ಥಿಗಳಿಗೆ ಒಂದು ರೀತಿಯ ರಸಕವಳ ಎಂದರು ತಪ್ಪಾಗದು. ಸಾಧಾರಣವಾಗಿ ಬಹುತೇಕ ಶಿಕ್ಷಕರು ಪಠ್ಯಕ್ರಮದಲ್ಲಿ ಅಳವಡಿಸಲಾಗಿರುವ ಪಥ್ಯಗಳನ್ನು ಮುಗಿಸುವಷ್ಟರಲ್ಲೇ ಸಾಕು ಸಾಕಾಗಿ ಹೋಗುತ್ತದೆ ಎಂದು ಗೊಣಗುತ್ತಿದ್ದರೆ, ಎಸ್.ವಿ ಅವರ ತರಗತಿಗಳಲ್ಲಿ ಪಠ್ಯ ಪುಸ್ತಕಗಳಲ್ಲಿದ್ದ ಪಾಠವನ್ನಷ್ಟೇ ಬೋಧಿಸದೆ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾದ ಜ್ಞಾನವನ್ನು ಬೋಧಿಸಿದ್ದೇ ಹೆಚ್ಚು. ಅವರು ಹೇಳುತ್ತಿದ್ದ ನೀತಿ ಕಥೆಗಳು, ಪೌರಾಣಿಕ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕಥೆಗಳು, ಒಂದು ಪದವನ್ನು ತೆಗೆದುಕೊಂಡು ವಿವಿಧ ವಾಕ್ಯಗಳಲ್ಲಿ ಆ ಪದ ಬಳಕೆಯಿಂದ ಬರಬಹುದಾದ ಅರ್ಥ ಹೀಗೆ ಉಫ್ ಒಂದೇ ಎರಡೇ, ಹೇಳುತ್ತಾ ಹೋದರೆ ಪುಟಗಟ್ಟಲೇ ಬರೆಯಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ