Sj*

ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಜನಪ್ರಿಯ ಕಾಮಿಕ್ ಥ್ರಿಲ್ಲರ್ ‘ಇಟ್ಸ್ ಎ ಮೆಡಿಕಲ್ ಮಿರಾಕಲ್’ ಇದೀಗ ಡಿಜಿಟಲ್ ಜಗತ್ತಿನಲ್ಲೂ ಭರ್ಜರಿ ಯಶಸ್ಸು ಕಾಣುತ್ತಿದೆ. ಪ್ರಸಿದ್ಧ ಒಟಿಟಿ ವೇದಿಕೆ ಮನೋರಮಾಮ್ಯಾಕ್ಸ್‌ನಲ್ಲಿ (ManoramaMAX) ಬಿಡುಗಡೆಯಾದ ಮೊದಲ ವಾರದಲ್ಲೇ ಈ ಚಿತ್ರ ಬರೋಬ್ಬರಿ 1.50 ಕೋಟಿಗೂ (15 ಮಿಲಿಯನ್) ಅಧಿಕ ನಿಮಿಷಗಳ ವೀಕ್ಷಣಾ ಸಮಯವನ್ನು ದಾಖಲಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ದಕ್ಷಿಣ ಭಾರತದ ಪ್ರೇಕ್ಷಕರನ್ನು ಸೆಳೆಯಲು ಈ ಚಿತ್ರವನ್ನು ಮಲಯಾಳಂ ಮಾತ್ರವಲ್ಲದೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲೂ ಏಕಕಾಲಕ್ಕೆ ಲಭ್ಯವಾಗುವಂತೆ ಮಾಡಲಾಗಿದೆ.

ನವನಿರ್ದೇಶಕ ಸ್ಯಾಮಿನ್ ಗಿರೀಶ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವು ವಿಭಿನ್ನ ಕಥಾಹಂದರ ಹಾಗೂ ಹಾಸ್ಯದ ಮೇಲೆಯೇ ಸಾಗುವ ರೋಮಾಂಚಕ ತಿರುವುಗಳನ್ನು ಹೊಂದಿದೆ. ‘ಪ್ರೇಮಲು’ ಖ್ಯಾತಿಯ ಸಂಗೀತ್ ಪ್ರತಾಪ್ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದು, ನುರಿತ ನಟ ಶರಾಫುದ್ದೀನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೋಮಾದಿಂದ ಪವಾಡಸದೃಶವಾಗಿ ಎಚ್ಚರಗೊಳ್ಳುವ ಯುವಕ ರೂಬಿನ್ (ಸಂಗೀತ್ ಪ್ರತಾಪ್), ತನಗೆ ದೂರದ ಸದ್ದು ಹಾಗೂ ಮಾತುಗಳನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳುವ ಅಸಾಮಾನ್ಯ ಸಾಮರ್ಥ್ಯ ಬಂದಿರುವುದನ್ನು ಕಂಡುಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ಆತನಿಗೆ ಎದುರಾಗುವ ಸ್ನೇಹಪರ ಪೊಲೀಸ್ ಅಧಿಕಾರಿ ಸೂರಜ್ (ಶರಾಫುದ್ದೀನ್) ಪಾತ್ರವು ಕಥೆಗೆ ಹೊಸ ಆಯಾಮ ನೀಡುತ್ತದೆ. ಇಬ್ಬರ ನಡುವಿನ ಒಡನಾಟ ಹಾಗೂ ಅನಿರೀಕ್ಷಿತ ಘಟನೆಗಳ ಸುತ್ತ ಹೆಣೆದಿರುವ ಸಸ್ಪೆನ್ಸ್ ಸನ್ನಿವೇಶಗಳು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ.

miracle

ಚಿತ್ರದಲ್ಲಿ ಸಂಗೀತ್ ಪ್ರತಾಪ್ ಮತ್ತು ಶರಾಫುದ್ದೀನ್ ಅವರಲ್ಲದೆ ಅಖಿಲಾ ಭಾರ್ಗವನ್, ಪಾರ್ವತಿ ಆರ್. ಕೃಷ್ಣ, ಕೊಟ್ಟಾಯಂ ನಸೀರ್, ಆನಂದ್ ಮನ್ಮದನ್ ಹಾಗೂ ಕಿರಣ್ ಪೀತಾಂಬರನ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಕರಿಕ್ಕು’ ಖ್ಯಾತಿಯ ಪ್ರತಿಭಾನ್ವಿತ ಲೇಖಕ ನಿಲೀನ್ ಸಾಂಡ್ರಾ ಈ ಚಿತ್ರಕ್ಕೆ ಚುರುಕಾದ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು, ‘ಡಾ. ಪಾಲ್ಸ್ ಎಂಟರ್‌ಟೈನ್‌ಮೆಂಟ್’ ಮತ್ತು ‘ಡ್ರೀಮ್ ಬಿಗ್ ಫಿಲ್ಮ್ಸ್’ ಬ್ಯಾನರ್‌ಗಳ ಅಡಿಯಲ್ಲಿ ಡಾ. ಪಾಲ್ ವರ್ಗೀಸ್ ಮತ್ತು ಸುಜಿತ್ ಜೆ. ನಾಯರ್ ನಿರ್ಮಾಣ ಮಾಡಿದ್ದಾರೆ. ತಾಂತ್ರಿಕವಾಗಿ ಅಖಿಲ್ ಝೇವಿಯರ್ ಅವರ ಛಾಯಾಗ್ರಹಣ, ರಾಕೇಶ್ ಚೆರುಮದಂ ಸಂಕಲನ, ಮುಜೀಬ್ ಮಜೀದ್ ಸಂಗೀತ ಹಾಗೂ ನಿಕ್ಸನ್ ಜಾರ್ಜ್ ಅವರ ಧ್ವನಿ ವಿನ್ಯಾಸ ಚಿತ್ರದ ವೇಗ ಮತ್ತು ಗುಣಮಟ್ಟಕ್ಕೆ ಸಾಥ್ ನೀಡಿವೆ.

500ಕ್ಕೂ ಅಧಿಕ ಬ್ಲಾಕ್‌ಬಸ್ಟರ್ ಸಿನಿಮಾಗಳು ಹಾಗೂ 20,000ಕ್ಕೂ ಹೆಚ್ಚು ಗಂಟೆಗಳ ಮನರಂಜನಾ ವಿಷಯಗಳನ್ನು ಹೊಂದಿರುವ ಮನೋರಮಾಮ್ಯಾಕ್ಸ್‌ನಲ್ಲಿ ಈ ಚಿತ್ರಕ್ಕೆ ಅಪಾರ ಜನಮೆಚ್ಚುಗೆ ವ್ಯಕ್ತವಾಗುತ್ತಿದೆ. ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡ ಸಿನಿಪ್ರಿಯರು ಸೇರಿದಂತೆ ಕನ್ನಡದ ಪ್ರೇಕ್ಷಕರಿಗೂ ತಮ್ಮ ನೆಚ್ಚಿನ ಭಾಷೆಯಲ್ಲೇ ನೋಡಲು ಸುಲಭವಾಗಿ ಲಭ್ಯವಿರುವುದರಿಂದ, ಮುಂಬರುವ ದಿನಗಳಲ್ಲಿ ವೀಕ್ಷಣಾ ಸಮಯದ ದಾಖಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಮನೋರಮಾಮ್ಯಾಕ್ಸ್‌ನಲ್ಲಿ 'ಇಟ್ಸ್ ಎ ಮೆಡಿಕಲ್ ಮಿರಾಕಲ್' ವೀಕ್ಷಿಸಿ: https://www.manoramamax.com/movies/detail/10000346/it-s-a-medical-miracle-yfttyr

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ