- ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಲವ್ ಮಾಕ್ಟೇಲ್ 3
ನಿರ್ದೇಶನ: ಡಾರ್ಲಿಂಗ್ ಕೃಷ್ಣ
ನಿರ್ಮಾಣ: ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ
ತಾರಾಂಗಣ: ಡಾರ್ಲಿಂಗ್ ಕೃಷ್ಣ, ಸಂವೃತಾ, ಜಗದೀಶ್, ಅಭಿಲಾಷ್, ರೇಖಾ ಕೂಡ್ಲಿಗಿ, ನೆಯಾರಾ, ಶ್ವೇತಾ ಪ್ರಸಾದ್, ದಿಲೀಪ್ ರಾಜ್, ಗಿರಿರಾಜ್ ಮುಂತಾದವರು.
ರೇಟಿಂಗ್: 5/3.5

‘ಪಪ್ಪ.. ನೀನು, ಮಮ್ಮಿ ಲಂಡನ್‌ನಲ್ಲಿ ಮೊದಲ ಸಲ ಸಿಕ್ಕಾಗ ಏನಾಯ್ತು?’ ಅಂತ ದಿನಾ ಕೇಳುವ ಮಗಳಿಗೆ ಅಪ್ಪ ದಿನಕ್ಕೊಂದು ದೇಶದಲ್ಲಿ ಅರಳುವ ತನ್ನ ಹಾಗೂ ನಿಧಿಯ ಕಥೆ ಹೇಳುತ್ತಾನೆ. ಮಗಳಿಗೆ ಅಪ್ಪನ ಕಥೆಗಿಂತ ತಾನು ಆ ಪ್ರಶ್ನೆ ಕೇಳಿದಾಗ ಅಪ್ಪನ ಮುಖದಲ್ಲಿ ಅಪರೂಪಕ್ಕೆ ಅರಳುವ ಕ್ಯೂಟ್‌ ನಗು ಇಷ್ಟ. ಇದೇ ಇಡೀ "ಲವ್ ಮಾಕ್ಟೇಲ್ 3"  ಸಿನಿಮಾದ ಒಟ್ಟಾರೆ ಸಾರಾಂಶ ಸಹ ಹೌದು! ಡಾರ್ಲಿಂಗ್ ಕೃಷ್ಣನಟಿಸಿ, ನಿರ್ದೇಶನ ಮಾಡಿದ ‘ಲವ್ ಮಾಕ್ಟೇಲ್’ ಚಿತ್ರಕ್ಕೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ.

mocktail 3

ಇದರ ಮೂರನೇ ಇನ್ಸ್ಟಾಲ್ಮೆಂಟ್ ಈ ವಾರ ತೆರೆಗೆ ಬಂದಿದ್ದು ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿ ಚಿತ್ರಮಂದಿರಗಳು ಹೌಸ್ ಫುಲ್ ಆಗುತ್ತಿದೆ. ಇದು ಅಪ್ಪ-ಮಗಳ ಎಮೋಷನಲ್ ಕಹಾನಿ ಆಗಿದ್ದು ಪ್ರೇಕ್ಷಕರಿಗೆ ಭಾವಪರವಶತೆ ಮೂಡಿಸುವುದಂತೂ ಸುಳ್ಳಲ್ಲ.
ರೂಮ್‌ನಲ್ಲಿ ಫೋಟೋದಲ್ಲಷ್ಟೇ ಇರುವ ಅಮ್ಮ, ತಾಯಿಯ ವಾತ್ಸಲ್ಯ ತೋರುವ ಜಗ್ಗ ಮಮ್ಮಿ, ತರಲೆ ವಿಜು ಮಾಮ ಇದು ನಿಧಿ ಮತ್ತವಳ ಪಪ್ಪ ಆದಿ ಇದಿಷ್ಟೇ ಸೀಮಿತ ಪಾತ್ರವರ್ಗದಲ್ಲಿ ಇಡೀ ಸಿನಿಮಾ ಸಾಗುತ್ತದೆ. ಆದರೆ ಸಿನಿಮಾದಲ್ಲಿ ಇದರ ಹೊರತಾಗಿ ಏನೂ ಇಲ್ಲವೆ ಎಂದರೆ ಖಂಡಿತಾ ಇದೆ. ಇಲ್ಲಿ ಮಗುವಿನ ತುಂತಾಟ ಇದೆ, ಆದಿಗೆ ಲೈನ್‌ ಹೊಡೆಯೋ ಕ್ಯೂಟ್‌ ಟೀಚರ್‌ ಇದ್ದಾರೆ, ಅಪ್ಪ ಮಗಳ ಸಂಬಂಧಕ್ಕೆ ಸಿಕ್ಕುವ ಹೊಸ ವ್ಯಾಖ್ಯಾನವಿದೆ.

mocktail 1

ಬಾಲನಟಿ ಸಂವೃತಾ  ನಿಧಿ ಪಾತ್ರದಲ್ಲಿ ಸಾಕಷ್ಟು ಅನುಭವಸ್ಥ ನಟಿಯಂತೆಯೇ ಕಾಣಿಸಿಕೊಂಡಿದ್ದಾರೆ. ಇವರ ಪಾತ್ರಕ್ಕೆ ಚಿತ್ರದಲ್ಲಿ ಸಾಕಷ್ಟು ಪ್ರಮಾಣದ ಸ್ಕ್ರೀನ್ ಸ್ಪೇಸ್ ಸಹ ಸಿಕ್ಕಿದ್ದು ಸಿಕ್ಕಿರುವ ಅವಕಾಶವನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಮುಂದಿನ ದಿನದಲ್ಲಿ ಮತ್ತಷ್ಟು ಅವಕಾಶ ಸಿಕ್ಕರೆ ಉತ್ತಮ ಅಭಿನಯ ಮಾಡಬಲ್ಲ ಭರವಸೆ ಮೂಡಿಸಿದ್ದಾರೆ.  ಜಗ್ಗ ಮಮ್ಮಿ ಎಂಬ ಪಾತ್ರ ಮಾಡಿರುವ ಜಗದೀಶ್ ಅವರು ಹೆಚ್ಚು ನಗಿಸುತ್ತಾರೆ.

mocktail 2

ಡಾರ್ಲಿಂಗ್ ಕೃಷ್ಣ ತಮ್ಮ ನಿರ್ದೇಶನದ ಜೊತೆಗೆ ಮಾಗಿದ ಭಿನಯ ಕೊಟ್ಟಿದ್ದಾರೆ. ಇನ್ನುಳಿದ ಪಾತ್ರವರ್ಗದವರೆಲ್ಲರೂ ಕಥೆಗೆ ಪೂರಕವಾಗಿ ಅಭಿನಯಿಸಿದ್ದಾರೆ.ಸಂಗೀತ, ಸಂಕಲನ, ಛಾಯಾಗ್ರಹಣ ಮುಂತಾದ ತಾಂತ್ರಿಕ ಅಂಶಗಳು ಅಚ್ಚುಕಟ್ಟಾಗಿದೆ.  ಒಟ್ಟಾರೆಯಾಗಿ ಫ್ಯಾಮಿಲಿ ಪ್ರೇಕ್ಷಕರನ್ನು ‘ಲವ್ ಮಾಕ್ಟೇಲ್ 3’ ಸಿನಿಮಾ ಸೆಳೆಯುತ್ತದೆ ಎನ್ನುವುದುಸುಳ್ಳಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ