- ರಾಘವೇಂದ್ರ ಅಡಿಗ ಎಚ್ಚೆನ್.

ಸೈಬರ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ *’ಅಚ್ಯುತ ಅವತಾರಂ’* ಚಿತ್ರದ ಫಸ್ಟ್ ಲುಕ್ ಹೊರಬಂದು ಸದ್ದು ಮಾಡಿತ್ತು. ಇದರ ಪ್ರೇರಣೆಯಿಂದಲೇ ಈಗ ಎರಡನೇ ನೋಟವನ್ನು ಅನಾವರಣಗೊಳಿಸಿದ್ದಾರೆ. 2016ರಂದು ಟೆಂಟ್ ಸಿನಿಮಾದಲ್ಲಿ ಮೆಚ್ಚುಗೆ ಪಡೆದು ನಾಗತ್ತಿಹಳ್ಳಿ ಶಿಷ್ಯನೆಂದು ಗುರುತಿಸಿಕೊಂಡಿರುವ ಬೆಂಗಳೂರು ಮೂಲದ ಪುನೀತ್ ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ಹತ್ತು ವರ್ಷಕ್ಕೂ ಮೇಲ್ಪಟ್ಟು ಕೆಲಸ ಮಾಡಿ ಅನುಭವ ಪಡೆದುಕೊಂಡಿದ್ದಾರೆ.

achyutha

ಇದರ ಪ್ರತಿಫಲವೇ  ಈ ಸಿನಿಮಾಕ್ಕೆ  ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿರುವುದು ಹೊಸ ಅನುಭವ. ರಾಯ್ರಾ ವೆಂಚರ‍್ಸ್‌ನ ರಮೇಶ್.ಸಿ.ರುದ್ರಮೂರ್ತಿ ಮತ್ತು ರಾಕೇಶ್.ಆರ್ ಜಂಟಿಯಾಗಿ ಬಂಡವಾಳ ಹೂಡಿದ್ದು, ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ.

achyutha 1

ಸಿನಿಮಾವು ಜಾಗತಿಕ ಸೈಬರ್ ಹಗರಣಗಳ ಕತ್ತಲೆಯಾದ, ಅತ್ಯಾಧುನಿಕ ಜಗತ್ತನ್ನು ಆಳವಾಗಿ ಪರಿಶೀಲಿಸುತ್ತದೆ. ಕಾಸರಗೂಡಿನಲ್ಲಿರುವ ಸಾಂಪ್ರದಾಯಿಕ ಹಳ್ಳಿಯ ವಿಶಿಷ್ಟ ಹೃದಯ ಬಡಿತವನ್ನು ಕಂಡುಕೊಳ್ಳುತ್ತದೆ. ಹೆಚ್ಚಿನ ಮಟ್ಟದ ಟಿಜಿಟಲ್, ಸ್ಥಳೀಯ ಸಂಸ್ಕ್ರತಿ ಹಾಗೂ ಸಂಕೀರ್ಣ ಹೈಪರ್‌ಲಿಂಕ್ ನಿರೂಪಣೆಯೊಂದಿಗೆ ಸನ್ನಿವೇಶಗಳು ಸಾಗುತ್ತದೆ.

achyutha 2

ತಾರಾಗಣದಲ್ಲಿ ಮಾಳವಿಕಾ ನಂದನ್, ಅವಿನಾಶ್,ಸೀಮಾ.ಜಿ.ನಾಯರ್ ಸೇರಿದಂತೆ ಮಲಯಾಳಂನ ಕಲಾವಿದರು ನಟಿಸಿದ್ದಾರೆ.  ಪ್ರಶಸ್ತಿ ವಿಜೇತ ಆನಂದ್ ಮೀನಾಕ್ಷಿ ಸಂಕಲನ, ಪವನ್ ಪೂವಯ್ಯ, ಕಲೆ ನಾಗರಾಜು-ನವೀನ್, ಸಾಹಿತ್ಯ ಹರೀಶ್ ಮೋಹನನ್ ಅವರದಾಗಿದೆ. ಸದ್ಯ ಚಿತ್ರವು ಡಬ್ಬಿಂಗ್‌ದಲ್ಲಿ ಬ್ಯುಸಿ ಇದ್ದು, ಮೇ ತಿಂಗಳಲ್ಲಿ ಜನರಿಗೆ ತೋರಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ