– ರಾಘವೇಂದ್ರ ಅಡಿಗ ಎಚ್ಚೆನ್.
ಶ್ರೀಕೃಷ್ಣ ಪ್ರೊಡಕ್ಸನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಎರಡೇ ಚಿತ್ರಕ್ಕೆ ಆದರ್ಶ್ ಅಯ್ಯಂಗಾರ್ ಬಂಡವಾಳ ಹೂಡಿದ್ದಾರೆ. ರಕ್ಷಿತ್ ತೀರ್ಥಹಳ್ಳಿ ರಚನೆ ನಿರ್ದೇಶನ ಮಾಡಿರುವ “ಮೋಡ, ಮಳೆ ಮತ್ತು ಶೈಲ” ಚಿತ್ರದ ಶೀರ್ಷಿಕೆ ಮತ್ತು ವಿಡಿಯೋ ತುಣುಕು ಬಿಡುಗಡೆ ಸಮಾರಂಭ ಇತ್ತೀಚೆಗೆ ಬೆಂಗಳುರಿನ ಉತ್ಸವ ಲೆಗಸೆಇಯಲ್ಲಿ ಅದ್ದೂರಿಯಾಗಿ ನೆರವೇರಿದೆ. ಒಂದು ಹೆಣ್ಣಿನ ಕಥೆ ಹೇಳ ಹೊರಟಿರುವ ನಿರ್ದೇಶಕರು ಒಂದೊಳ್ಳೆಯ ಸದಭಿರುಚಿ ಚಿತ್ರ ಮಾಡಿದ್ದಾರೆ.
‘ಶೈಲ’ ಪಾತ್ರದಲ್ಲಿ ಅಕ್ಷತಾ ಪಾಂಡವಪುರ – ಇನ್ನಿತರ ಮುಖ್ಯ ಭೂಮಿಕೆಯಲ್ಲಿ :-ಸಂಪತ್ ಮೈತ್ರೆಯ, ಗೋಪಾಲ್ ಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯ , ರಾಘು ರಾಮನಕೊಪ್ಪ, , ಉತ್ಪಲ್ ಗೌಡ, , ಬಲರಾಜ್ ವಾಡಿ, , ಅಶ್ವಿನ್ ಹಾಸನ, , ಶ್ರೀರ್ಷ ಗೋಭಟ್, ರಘು ಪಾಂಡೇಶ್ವರ್ ಮುಂತಾದವರ ಅಭಿನಯವಿದೆ.
ಈ ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಪಿ ಆರ್ ಓ ಸುಧೀಂದ್ರ ವೆಂಕಟೇಶ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ಬರಹಗಾರ ಮತ್ತು ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ, ‘ಸದ್ಯ ನಮ್ಮ ಚಿತ್ರದ ಶೂಟಿಂಗ್ ಮುಕ್ತಾಯವಾಗಿ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿದೆ. ಆದರ್ಶ ಅಯ್ಯಂಗಾರ್ ಅವರಿಗೆ ಕಥೆ ಹೇಳಿದಾಗ ಕಂಟೆಂಟ್ ಸ್ಟ್ರಾಂಗ್ ಆಗಿದೆ ಚಿತ್ರ ಮಾಡೋಣ ಎಂದರು. ಈ ಚಿತ್ರವನ್ನು ಸಂಪೂರ್ಣ ಮಳೆಯಲ್ಲಿಯೇ ಸಿಂಕ್ ಸೌಂಡ್ ನಲ್ಲಿ ಶೂಟ್ ಮಾಡಲಾಗಿದೆ. ಈ ಮೊದಲಿನ ಮೂರು ಚಿತ್ರಗಳನ್ನು ವಿಷಯಗಳ ಮೇಲೆ ಮಾಡಿದ್ದೆ. ಈಗ ಶೈಲ ಕಥೆ ಹೇಳಲು ಹೊರಟಿದ್ದೇನೆ. ಕಲಾವಿದರು ಚೆನ್ನಾಗಿ ನಟಿಸಿದ್ದು, ಇದು ಕಲಾವಿದರ ಸಿನಿಮಾ ಎನ್ನಬಹುದು. ಡ್ರಾಮಾ ಥ್ರಿಲ್ಲರ್ ಜಾನರ್ ಸಿನಿಮಾ ಇದಾಗಿದೆ. ತೀರ್ಥಹಳ್ಳಿ, ಕುಂದಾಪುರ ಗಡಿಭಾಗಗಳ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ನಾನು 2012-13ರ ಕಾಲಘಟ್ಟದಲ್ಲಿ ನೋಡಿದ ಹಾಗೂ ಕೇಳಿದ ಒಂದಿಷ್ಟು ಕಥೆ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ’ ಎಂದು ಹೇಳಿದರು.
ಅಕ್ಷತ ಪಾಂಡವಪುರ ಮಾತನಾಡಿ, ‘ನಾನಿಲ್ಲಿ ಶೈಲ ಪಾತ್ರ ಮಾಡಿದ್ದೇನೆ. ಮೂಲತಃ ರಂಗಭೂಮಿ ಕಲಾವಿದೆ. ಇಂತಹ ಸಿನಿಮಾ ನನ್ನ ಕೆರಿಯರ್ ನಲ್ಲಿ ಮುಂದೆ ಸಿಗುತ್ತೋ ಇಲ್ವೋ..! ಹಾಗಾಗಿ ನಂಗೆ ಇದು ಸ್ಪೆಷಲ್ ಸಿನಿಮಾ. ಇದರಲ್ಲಿ ನಿರ್ದೇಶಕರು ಮಲೆನಾಡಿನ ಒಂಟಿ ಹೆಣ್ಣಿನ ಕಥೆ ಹೇಳ ಹೊರಟಿದ್ದಾರೆ. ಚಿತ್ರಕ್ಕಾಗಿ ನಿರ್ದೇಶಕರು ತುಂಬಾ ಶ್ರಮ ಪಟ್ಟಿದ್ದಾರೆ. ಇದರಲ್ಲಿ ಮಳೆ ಕೂಡ ಒಂದು ಪ್ರಮುಖ ಪಾತ್ರವಾಗಿ ತೋರಿಸಲಾಗಿದೆ. ನಾನು ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದೇನೆ’ ಎಂದರು.
ಈ ಚಿತ್ರದ ಶೂಟಿಂಗ್ ಇದಾಗಲೇ ಮುಗಿದಿದ್ದು ನೈಜವಾದ ಮಳೆಗಾಲದಲ್ಲಿ ಮಳೆಯ ನೈಸರ್ಗಿಕ ಸದ್ದಿನಲ್ಲೇ (Synch sound) :ಚಿತ್ರೀಕರಣ ನಡೆಸಲಾಗಿದೆ. ಬಹುತೇಕ ಮಲೆನಾಡು ಭಾಗಗಲಲ್ಲಿ ಚಿತ್ರೀಕರಣ ನಡೆದಿದ್ದು ಅಕ್ಷತಾ ಪಾಂಡವಪುರ ಅವರದು ಒಂದು ಮಹತ್ವದ ಪಾತ್ರವಿದೆ. ಅವರೇ ಈ ಚಿತ್ರದ ಕೇಂದ್ರ ಪಾತ್ರವೆಂದೂ ಹೇಳಲಾಗಿದೆ.
ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಈ ಹಿಂದೆ “ಹೊಂಬಣ್ಣ”, ‘ಎಂಥಾ ಕಥೆ ಮಾರಾಯ’, “ತಿಮ್ಮನ ಮೊಟ್ಟೆಗಳು” ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕರು ಇದೇ ಮೊದಲ ಬಾರಿ ಹೆಣ್ಣೊಬ್ಬಳ ಸುತ್ತ ಸುತ್ತುವ ಕಥೆ ಆರಿಸಿಕೊಂಡಿದ್ದಾರೆ,
ಈ ಚಿತ್ರಕ್ಕೆ ಹೇಮಂತ್ ಜೋಯಿಷ್ ಸಂಗೀತವಿದ್ದು ಶಾಂತಿಸಾಗರ್ ಹೆಚ್ ಜಿ ಛಾಯಾಗ್ರಾಹಣ ಇದೆ. : ಅಕ್ಷಯ್ ಪಿ ರಾವ್ ಸಂಕಲನ ಚಿತ್ರಕ್ಕಿದ್ದರೆ ಮಿತ್ರ ಮಧ್ಯಸ್ಥ ಧ್ವನಿ ಮುದ್ರಣ ಇದೆ. ಚಿತ್ರ ಶೀಘ್ರದಲ್ಲೇ ತೆರೆಗೆ ಬರುತ್ತಿದ್ದು ಮಾದ್ಯಮದವರ ಸಹಕಾರವನ್ನು ಚಿತ್ರತಂಡ ಕೋರಿದೆ.