ಬಟ್ಟೆ ಅಂದ್ರೆನೇ ಅಲರ್ಜಿ ಅನ್ನೋ ಮಟ್ಟಕ್ಕೆ ಇರುವ ಬಾಲಿವುಡ್ ನಟಿ ಕಂ ಐಟಂ ಡ್ಯಾನ್ಸರ್ ಮೌನಿ ರಾಯ್ ಸೋಷಿಯಲ್ ಮೀಡಿಯಾದಲ್ಲಿ ಮಾದಕತೆಯ ಬೆಂಕಿ ಹಚ್ಚಿದ್ದಾರೆ. ‘ಕೆಜಿಎಫ್’ ಚಿತ್ರದ ಹಿಂದಿ ವರ್ಷನ್ನಲ್ಲಿ ಹೆಜ್ಜೆ ಹಾಕಿದ್ದ ಮದನಾರಿ ನೋಡೋಕೆ ಥೇಟ್ ಶಿಲಾಬಾಲಿಕೆಯ ರೀತಿ ಇದ್ದಾರೆ. ತಮ್ಮ ಹುಕ್ ಸ್ಟೆಪ್ ಮೂಲಕವೇ ಬಾಲಿವುಡ್ ನಲ್ಲಿ ಹಲ್ಚಲ್ ಕ್ರಿಯೇಟ್ ಮಾಡಿರುವ ಮೌನಿ ರಾಯ್ ಇತ್ತೀಚೆಗಂತೂ ಬರೀ ಟು ಪೀಸ್ನಲ್ಲೇ ಹೆಚ್ಚಾಗಿ ಕಾಣಿಸಿಕೊಳ್ತಿದ್ದಾರೆ.
ನಟಿ ಮೌನಿ ರಾಯ್ಗೆ ಬೀಚ್ ಅಂದ್ರೆ ತುಂಬಾನೇ ಇಷ್ಟ. ಆಗಾಗ್ಗೆ ಬೀಚ್ನಲ್ಲೇ ಸುತ್ತುತ್ತಿರುವ ಮೌನಿ ರಾಯ್ ತಮ್ಮ ಇನ್ಸ್ಟಾದಲ್ಲಿ ಆ ಫೋಟೋಗಳನ್ನ ಪೋಸ್ಟ್ ಮಾಡುವ ಮೂಲಕ ಅದೆಷ್ಟೋ ಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ. ಕಿರುತೆರೆಯ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ’ ಅನ್ನೋ ಸೀರಿಯಲ್ ಮೂಲಕ ಬಣ್ಣ ಹಚ್ಚಿದ ಮೌನಿ ‘ಕಸ್ತೂರಿ’, ‘ದೇವೋಂಕೆ ದೇವ್ ಮಹಾದೇವ್’ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದರು. ಆದ್ರೆ, ಆ ಸೀರಿಯಲ್ಗಳಲ್ಲಿ ಅಷ್ಟಾಗಿ ಹೆಸರು ಪಡೆಯದ ಮೌನಿ ರಾಯ್, ಏಕ್ತಾ ಕಪೂರ್ ನಿರ್ಮಾಣದ ‘ನಾಗಿನ್’ನಲ್ಲಿ ಕಾಣಿಸಿಕೊಂಡು ಎಲ್ಲರ ಮನೆಮಾತಾದರು.
ಬಳಿಕವೀಗ ಬಾಲಿವುಡ್ನಲ್ಲಿ ಹಲವು ಸಿನಿಮಾಗಳಲ್ಲಿನ ಐಟಂ ಹಾಡುಗಳಿಗೆ ಹೆಜ್ಜೆ ಹಾಕ್ತಿದ್ದಾರೆ. ಹೀಗೆ ತಾಳಕ್ಕೆ ತಕ್ಕಂತೆ ಸೊಂಟ ಬಳುಕಿಸುತ್ತಾ ಹೀರೋಯಿನ್ ಕೂಡ ಆದರು. ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಮೌನಿ ರಾಯ್ ಈಗ ಬಾಲಿವುಡ್ನ ನಿರ್ಮಾಪಕರಿಗೆ ಹಾಟ್ ಕೇಕ್ ಇದ್ದಂಗೆ.
ಎರಡು ವರ್ಷಗಳ ಹಿಂದೆ ಸೂರ್ ನಂಬಿಯಾರ್ ಅನ್ನೋರನ್ನ ಮದುವೆ ಆಗಿದ್ರೂ ಕೂಡ ಮೋಹಕತೆ ಮತ್ತು ಮಾದಕತೆಯನ್ನು ತುಂಬಿಕೊಂಡಿರುವ ಮೌನಿ ರಾಯ್ ‘ಸುಲ್ತಾನ್ ಆಫ್ ದೆಹಲಿ’ ಅನ್ನೋ ವೆಬ್ ಸಿರೀಸ್ನಲ್ಲೂ ಕಾಣಿಸಿಕೊಂಡಿದ್ದರು. ಸದ್ಯ ‘ದಿ ವರ್ಜಿನ್ ಟ್ರೀ’ ಅನ್ನೋ ಫಿಲ್ಮ್ ಮುಗಿಸಿರುವ ಮೌನಿ, ಕೆಲ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನೂ ಒಪ್ಪಿಕೊಂಡಿದ್ದಾರೆ.
ಸದ್ಯ ನಟಿ ಮೌನಿ ರಾಯ್ ಪೋಸ್ಟ್ ಮಾಡಿರುವ ಹಾಟ್ ಹಾಟ್ ಫೋಟೋಗಳು ಎಲ್ಲೆಡೆ ವೈರಲ್ ಆಗ್ತಿವೆ. ಹೂವುಗಳನ್ನು ಹೊಂದಿರುವ ಸ್ಕರ್ಟ್ ಮತ್ತು ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಮೌನಿ ಎಲ್ಲರ ಅಟ್ರ್ಯಾಕ್ಟ್ ಮಾಡ್ತಿದ್ದಾರೆ. ಮೌನಿಯ ಹೇರ್ ಸ್ಟೈಲ್ ಜೊತೆ ಈಕೆ ತೊಡುವ ಬಟ್ಟೆಯೂ ಕೂಡ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಇತ್ತೀಚೆಗೆ ಬೀಚ್ ಒಂದಕ್ಕೆ ಭೇಟಿ ಕೊಟ್ಟಿದ್ದ ಮೌನಿ ರಾಯ್ ಅಷ್ಟೂ ಫೋಟೋಗಳನ್ನು ಹಂಚಿಕೊಂಡಿದ್ದು, ತಮಗೆ ಬೀಚ್ ಅಂದ್ರೆ ಪ್ರಾಣ ಅನ್ನೋ ಮೆಸೇಜ್ ತಿಳಿಸಿದ್ದಾರೆ.
ನಟನೆಯ ಜೊತೆ ಜೊತೆಗೂ ಐಟಂ ಹಾಡುಗಳಿಗೂ ಹೆಜ್ಜೆ ಹಾಕುವ ಮೌನಿ ರಾಯ್ ವಿವಿಧ ಆಲ್ಬಂಗಳಲ್ಲೂ ಚಾನ್ಸ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅದೇನೇ ಇದ್ರೂ ನೆಟ್ಟಿಗರಂತೂ ಮೌನಿ ರಾಯ್ ಫೋಟೋಗಳನ್ನ ಮತ್ತೆ ಮತ್ತೆ ನೋಡುತ್ತಿದ್ದಾರೆ. ಹೀಗಾಗೇ ಮೌನಿ ಹಾಕೋ ಪೋಸ್ಟ್ ಗಳು ಮಿಲಿಯನ್ಗಟ್ಟಲೇ ಲೈಕ್ಸ್ ಹೊಂದಿವೆ. ಆದ್ರೆ, ಬಟ್ಟೆ ಅಂದ್ರೆ ಅಲರ್ಜಿನಾ ಅಂತಾ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಬ್ಯೂಟಿನಾ ಯಾವತ್ತೂ ಮುಚ್ಚಿಡಬಾರದು ಅಂತಾ ಮೌನಿ ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ.