– ರಾಘವೇಂದ್ರ ಅಡಿಗ ಎಚ್ಚೆನ್.
ನಟಿ ರಾಗಿಣಿ ದ್ವಿವೇದಿ ಮನೆಯಲ್ಲಿ ದಸರಾ ಹಬ್ಬ ಜೋರಾಗಿ ನಡೆದಿದೆ. ನವರಾತ್ರಿ ಉಪವಾಸದ ಪೂಜೆಯ 9ನೇ ದಿನ, 9ಹೆಣ್ಣು ಮಕ್ಕಳು ಹಾಗೂ 9 ಹೆಂಗಸರಿಗೆ ಬಳೆ ಬಟ್ಟೆ ಉಡುಗೊರೆ ಕೊಟ್ಟು ಊಟ ಬಡಿಸಿ ಉಪವಾಸ ಬಿಟ್ಟಿದ್ದಾರೆ. ಇದಕ್ಕೆ ಕಣಜಕ್ ಪೂಜಾ ಎಂದು ಕರೆಯುತ್ತಾರೆ.
ಪ್ರತಿ ವರ್ಷ ನವರಾತ್ರಿಗೆ ರಾಗಿಣಿ ಈ ಸಂಪ್ರದಾಯವನ್ನ ಪಾಲಿಸಿಕೊಂಡು ಬಂದಿದ್ದಾರೆ.
ಪಂಜಾಬ್ ಮೂಲದವರಾದ ಅವರ ಕುಟುಂಬದ ಸಂಪ್ರದಾಯದ ಪ್ರಕಾರ ನವರಾತ್ರಿ ಹಬ್ಬದಲ್ಲಿ ಕನ್ಯೆಯರ ಪೂಜೆ ವಿಶೇಷ. ಹೀಗಾಗಿ ಪ್ರತಿ ವರ್ಷ ಮನೆಗೆ ಬಡ ಕುಟುಂಬದ ಹೆಣ್ಣುಮಕ್ಕಳನ್ನ ಕರೆದು ಹೂ ಮುಡಿಸಿ, ಬಳೆ ತೊಡಿಸಿ, ಊಟ ತಿಂಡಿ ಕೊಟ್ಟು ಗಿಫ್ಟ್ ಕೊಟ್ಟು ಕಳಿಸುತ್ತಾರೆ.
ನವರಾತ್ರಿ ಉಪವಾಸದ 9ನೇ ದಿನ 9 ಕನ್ಯೆಯರು ಹಾಗೂ 9 ಮುತೈದೆಯರಿಗೆ ಬಳೆ ಕೊಟ್ಟು ಉಡುಗೊರೆ ನೀಡಿ ಊಟ ಬಡಿಸಿ ಅವರು ಊಟ ಮಾಡಿದ ಬಳಿಕವೇ ಉಪವಾಸ ತೊರೆಯುವ ಪದ್ಧತಿ ಇರುತ್ತೆ.
ಹೀಗಾಗಿ ಕುಟುಂಬದ ಸಂಪ್ರದಾಯಂತೆ ಈ ಬಾರಿಯೂ ರಾಗಿಣಿ ತಮ್ಮ ನಿವಾಸದಲ್ಲಿ 9 ಬಡ ಕುಟುಂಬದ ಹೆಣ್ಣುಮಕ್ಕಳನ್ನ ಕರೆದು ಕಣಜಕ್ ಪೂಜಾ ಕಾರ್ಯ ಪೂರೈಸಿದ್ದಾರೆ. ವಿಡಿಯೋಗಳನ್ನು ಇದೀಗ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.