ಶರತ್ ಚಂದ್ರ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ‘ನೀನಾದೆನಾ ಪ್ರೀತಿಯ ಹೊಸ ಅಧ್ಯಾಯ ‘ 200 ಸಂಚಿಕೆಗಳನ್ನು ಪೂರೈಸಿದೆ. ಈ ಹಿಂದೆ ಪ್ರಸಾರ ವಾದ ‘ನೀನಾದೆನಾ’ ಇದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದೂ ಬಹಳಷ್ಟು ಜನಪ್ರಿಯವಾಗಿತ್ತು. ಚಿತ್ರದುರ್ಗದ ಹಿನ್ನಲೆಯ ಕಥೆ ಹೊಂದಿದ್ದ ಈ ಧಾರವಾಹಿಯನ್ನು ರಮೇಶ್ ಅರವಿಂದ್ ನಿರ್ಮಾಣ ಮಾಡಿದ್ದರು.

ಜನರಿಗೆ ಧಾರವಾಹಿ ಬೋರ್ ಹೊಡೆಯುವ ಮೊದಲೇ ಚಾನೆಲ್ ನವರು ಧಾರವಾಹಿಯ ಕಥೆ ಗೆ ಒಂದು ಒಳ್ಳೆ ಅಂತ್ಯ ನೀಡಿ ಎರಡನೇ ಸೀಸನ್ ಗೆ ನಾಂದಿ ಹಾಡಿತ್ತು.

ದಕ್ಷಿಣ ಕನ್ನಡ ದ ಹಿನ್ನಲೆಯಲ್ಲಿ ಸಾಗುವ ಕಥೆ ಹೊಂದಿರುವ ‘ನೀನಾದೆನಾ ಪ್ರೀತಿಯ ಹೊಸ ಅಧ್ಯಾಯ’ವನ್ನು ಪಿಂಗಾರ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ.

1000493170

ಮೊದಲ ಅಧ್ಯಾಯದಲ್ಲಿ ಪ್ರೇಕ್ಷಕರನ್ನು ರಂಜಿಸಿದ ವಿಕ್ರಂ ಮತ್ತು ವೇದಾ ಪಾತ್ರಗಳು ಎರಡನೇ ಸೀಸನ್ ನಲ್ಲೂ ಮುಂದುವರೆದಿದ್ದು ನಾಯಕ ದಿಲೀಪ್ ಶೆಟ್ಟಿ ಮತ್ತು ಖುಷಿ ಶಿವು ಕೆಮಿಸ್ಟ್ರಿ ಈ ಅಧ್ಯಾಯದಲ್ಲೂ ಮುಂದುವರಿದಿದೆ. ಈ ಇಬ್ಬರ ಜೋಡಿಗೆ ದೊಡ್ಡ ಫ್ಯಾನ್ ಬೇಸ್ ಇದ್ದು ಇವರಿಗೋಸ್ಕರ ಸೀರಿಯಲ್ ನೋಡುವವರಿದ್ದಾರೆ.

1000492662

ಮಂಗಳೂರಿನ ಆಸು ಪಾಸಿನಲ್ಲಿ ಚಿತ್ರೀಕರಣ ನಡೆಯುತ್ತಿರುವುದರಿಂದ ಇಡೀ ಚಿತ್ರತಂಡ ಮಂಗಳೂರಿನಲ್ಲಿ ಬೀಡು ಬಿಟ್ಟಿದೆ.ಆರಂಭದಲ್ಲಿ ತುಳು ಮಿಶ್ರಿತ ಸಂಭಾಷಣೆಯನ್ನು ಬಳಸಿದ್ದ ನಿರ್ದೇಶಕರು, ಈಗ ಎಲ್ಲರಿಗೂ ಅರ್ಥವಾಗುವ ಹಾಗೆ ಮಾಮೂಲಿ ಭಾಷೆಯಲ್ಲಿ ಸೀರಿಯಲ್ ಬರ್ತಾ ಇದೆ.

1000492048

ಭೂಗತ ಜಗತ್ತಿನಲ್ಲಿ ತೊಡಗಿರುವ ಗಂಡನನ್ನು ತೊರೆದು, ಮಕ್ಕಳನ್ನು ಅನಾಥರನ್ನಾಗಿ ಮಾಡಿ ಹೋಗುವ ನಾಯಕ ನ ಅಮ್ಮ, ಮತ್ತೆ ಅದೇ ಊರಿಗೆ ಬಂದ ಮೇಲೆ ನಡೆಯುವ ವಿದ್ಯಾಮಾನಗಳು, ರೌಡಿಯಾಗಿರುವ ಗಂಡ ವಿಕ್ರಂ ನನ್ನು ಬದಲಾಯಿಸಲು ಪ್ರಯತ್ನಿಸುವ ಹೆಂಡತಿ ವೇದಾ, ಹೀಗೆ ಒಂದಷ್ಟು ಇಂಟರ್ಸ್ಟ್ಟಿಂಗ್ ವಿಷಯಗಳು ನೋಡುಗರಿಗೆ ಇಷ್ಟವಾಗಿದೆ.

ಒಟ್ಟಿನಲ್ಲಿ ಪ್ರತೀ ದಿನ 9.30ಕ್ಕೆ ಪ್ರಸಾರವಾಗುವ ಈ ಧಾರವಾಹಿ ಟಿ. ಆರ್. ಪಿ. ವಿಷಯ ದಲ್ಲೂ ಮುಂದಿದೆ. ಈ ಶೋ ಸುದೀರ್ಘವಾಗಿ ಪ್ರೇಕ್ಷಕರನ್ನು ರಂಜಿಸುವ ಸಾಧ್ಯತೆ ಇದ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ