ಚಿತ್ರ: ವೀರ ಚಂದ್ರಹಾಸ
ನಿರ್ಮಾಣ:  ಓಂಕಾರ್ ಮೂವೀಸ್ & ರವಿ ಬಸ್ರೂರು ಮೂವೀಸ್ ಬ್ಯಾನರ್, ಎನ್‌.ಎಸ್ ರಾಜ್‌ಕುಮಾರ್
ನಿರ್ದೇಶನ: ರವಿ ಬಸ್ರೂರು
ತಾರಾಂಗಣ: ಶಿವರಾಜ್‌ಕುಮಾರ್, ಗರುಡ ರಾಮ್, ಶಿಥಿಲ್ ಶೆಟ್ಟಿ, ನಾಗಶ್ರೀ ಜಿ.ಎಸ್, ಪ್ರಸನ್ನ ಶೆಟ್ಟಿಗಾರ್ ಮಂದಾರ್ಥಿ, ಉದಯ್ ಕಡಬಾಳ್, ರವೀಂದ್ರ ದೇವಾಡಿಗ, ನಾಗಶ್ರೀ ಸರ್ವೇಗಾರ್, ಗುಣಶ್ರೀ ಎಂ ನಾಯಕ್, ಶ್ರೀಧರ್ ಕಾಸರಗೋಡು, ಶ್ವೇತಾ ಅರೆಹೊಳೆ, ಪ್ರಜ್ವಲ್ ಕಿನ್ನಾಳ್ ಮುಂತಾದವರು
ರೇಟಿಂಗ್: 3.5/5
- ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶನ ಮಾಡಿರುವ ವೀರ ಚಂದ್ರಹಾಸ ಇಂದು (ಏಪ್ರಿಲ್ ೧೮) ಬಿಡುಗಡೆ ಆಗಿದೆ. ಸಿನಿಮಾ ಇತಿಹಾಸದಲ್ಲಿಯೇ ಇದು ಮೊದಲ ಪ್ರಯತ್ನವಾಗಿದೆ. ಚಿತ್ರದಲ್ಲಿ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ. ಉಳಿದಂತೆ ಗರುಡ ರಾಮ್, ಶಿಥಿಲ್ ಶೆಟ್ಟಿ, ನಾಗಶ್ರೀ ಜಿ.ಎಸ್, ಪ್ರಸನ್ನ ಶೆಟ್ಟಿಗಾರ್ ಮಂದಾರ್ಥಿ, ಉದಯ್ ಕಡಬಾಳ್, ರವೀಂದ್ರ ದೇವಾಡಿಗ, ನಾಗಶ್ರೀ ಸರ್ವೇಗಾರ್, ಗುಣಶ್ರೀ ಎಂ ನಾಯಕ್, ಶ್ರೀಧರ್ ಕಾಸರಗೋಡು, ಶ್ವೇತಾ ಅರೆಹೊಳೆ, ಪ್ರಜ್ವಲ್ ಕಿನ್ನಾಳ್ ಮುಂತಾದವರು ನಟಿಸಿದ್ದಾರೆ. ರವಿ ಬಸ್ರೂರು ಸಂಗೀತ, ಕಿರಣ್ ಕುಮಾರ್ ಆರ್ ಛಾಯಾಗ್ರಹಣ ಸಿನಿಮಾಗಿದೆ. ಓಂಕಾರ್ ಮೂವೀಸ್ & ರವಿ ಬಸ್ರೂರು ಮೂವೀಸ್ ಬ್ಯಾನರ್ ಅಡಿಯಲ್ಲಿ ಎನ್‌.ಎಸ್ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದಾರೆ.  ಹಾಗಾದರೆ ಈ ಸಿನಿಮಾ ಹೇಗಿದೆ ಮುಂದೆ ನೋಡಿ...

491400005_1219823102847887_6661031737167756691_n

ಮೂಲದಲ್ಲಿ ಜೈಮಿನಿ ಭಾರತದಲ್ಲಿ ಬರುವ ಒಂದು ಉಪಕಥೆ ವೀರ ಚಂದ್ರಹಾಸ. ಇದೊಂದು ಪೌರಾಣಿಕ ಪ್ರಸಂಗ, ಅನಾಥ ಬಾಲಕನೊಬ್ಬ ವೀರ ಚಂದ್ರಹಾಸನಾಗಿ ಬೆಳೆದಿರುವ ಕಥೆ ಇದಾಗಿದೆ. ಯಕ್ಷಗಾನ ರಂಗಸ್ಥಳದ ಕಥೆಯನ್ನು ಸ್ವಲ್ಪ ಬದಲಿಸಿ ಸಿನಿಮಾ ಆಗಿ ಬದಲಿಸಲಾಗಿದೆ. ವಿ.ಎಫ್.ಎಕ್ಸ್. ಬಳಸಿ  ಹೊಸ ಪ್ರಪಂಚಕ್ಕೆ ರವಿ ನಿಮ್ಮನ್ನು ಕರೆದೊಯ್ಯುತ್ತಾರೆ.
ತೆಂಕು, ಬಡಗಿನ ಯಕ್ಷಗಾನ ಪದಗಳು. ವೇಷ ಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಯಕ್ಷಗಾನ ಕ್ಷೇತ್ರದ ಮಹತ್ವದ ಭಾಗವತರುಗಳಾದ ಪಟ್ಲ ಸತೀಶ್ ಶೆಟ್ಟಿ, ರಾಘವೇಂದ್ರ ಆಚಾರ್ಯ ಜನ್ಸಾಲೆ ಸೇರಿ ಹಲವಾರ ಕಂಠದಿಂದ ಯಕ್ಷ ಪದಗಳು ಕೇಳಲು ಇಲ್ಲಿ ಅವಕಾಶವಿದೆ. ಅದೊಂದು ವಿಶೇಷ ಪದವನ್ನು ಯಕ್ಷಗಾನದ ಸಿರಿಕಂಠ ಕಾಳಿಂಗ ನಾವುಡರ ಕಂಠದಲ್ಲಿಯೂ ಕೇಳುವ ಅಪರೂಪದ ಅವಕಾಶ ಒದಗುತ್ತದೆ.  ಚಿತ್ರದ ಕೊನೆಯ ಕ್ಷಣದವರೆಗೆ ಕುತೂಹಲ ಕಾದಿರಿಸುವಷ್ಟರ ಮಟ್ಟಿಗೆ ಚಿತ್ರಕಥೆ ಮನಸ್ಸು ಮುಟ್ಟುತ್ತದೆ., ಅಯರ್ ಬೈಲ್ ನವೀನ ಶೆಟ್ರ ಅಭಿನಯ ಚಿತ್ರದ ದಿಕ್ಕನ್ನು ಎಲ್ಲಿಗೋ ಕೊಂಡು ಹೋಗುತ್ತದೆ,
ಆದರೆ ಸಿನಿಮಾದಲ್ಲಿ ಯಕ್ಷಗಾನದ ಪ್ರಮುಖ ಅಂಗ, ಪ್ರಸಂಗದ ಅಲಂಕಾರ ಎನಿಸಿಕೊಂಡ ಕುಣಿತಗಳಿಗೆ ಅವಕಾಶ ಕೊಡದಿರುವುದು ಒಂದು ಕೊರತೆ ಎನ್ನಬಹುದು.ಇದು ಚಿತ್ರದ ಅವಧಿಯ ಕಾರಣ ಬೇಕಿಲ್ಲ ಎನಿಸಿದ್ದರೂ  ರವಿ ಬಸ್ರೂರು ಯಕ್ಷಗಾನವನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನ ಈ ಚಿತ್ರ ಎಂದು ಸಂದರ್ಶನವೊಂಡರಲ್ಲಿ ಹೇಳಿದ್ದರು. ಹಾಗಾಗಿ ಯಕ್ಷಗಾನದ ಪ್ರಮುಖ ಭಾಗವಾಗಿ ಕುಣಿತ ಬರುವುದರಿಂದ ಈ ಸಿನಿಮಾದಲ್ಲಿ ಕುಣಿತ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಿಕೊಳ್ಲಲಾಗಿದೆ.  ಇದರ ಹೊರತಾಗಿ ಚಿತ್ರದಲ್ಲಿ ಹಾಸ್ಯಕ್ಕೆ ಹೆಚ್ಚು ಮಹತ್ವ ನೀಡಿರುವುದು,  ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ,  ಕಥೆಯ ನಡುವೆ ಹಾಸ್ಯ ದೃಶ್ಯಗಳು ಇರುವುದರಿಂದ ಚಿತ್ರ ನೋಡಿಸಿಕೊಂಡು ಹೋಗುತ್ತದೆ.ಆದರೆ ಚಂದ್ರಹಾಸನ ಮದುವೆಯಂತಹಾ ಸನ್ನಿವೇಶ ಮತ್ತು ಇನ್ನು ಕೆಲವು ದೃಶ್ಯಗಳು ತುಸು ಎಳೆದಂತೆ ಭಾಸವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ