ಚಿತ್ರ: ಯುದ್ಧಕಾಂಡ.
ನಿರ್ಮಾಣ: ಅಜಯ್ ರಾವ್.
ನಿರ್ದೇಶನ: ಪವನ್ ಭಟ್.
ತಾರಾಂಗಣ: ಅಜಯ್ ರಾವ್, ಪ್ರಕಾಶ್ ಬೆಳವಾಡಿ, ಅರ್ಚನಾ ಜೋಯಿಸ್, ರಾಧ್ನ್ಯಾ ಮುಂತಾದವರು.
ರೇಟಿಂಗ್: 3/5
ರಾಘವೇಂದ್ರ ಅಡಿಗ ಎಚ್ಚೆನ್.

ಅಜಯ್ ರಾವ್ ನಿರ್ಮಿಸಿ, ನಟಿಸಿರುವ ಸಿನಿಮಾ ಕೋರ್ಟ್ ಡ್ರಾಮಾ ಸಿನಿಮಾ ‘ಯುದ್ಧಕಾಂಡ’ ಚಾಪ್ಟರ್-2 ರಾಜ್ಯಂದ್ಯಂತೆ ತೆರೆಗೆ ಬಂದಿದೆ. ಪವನ್ ಭಟ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಮಾಜದಲ್ಲಿ ಪ್ರತಿನಿತ್ಯ ನಡೆಯುವ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳಿಗೆ ತಡೆ ಇಲ್ಲದಂತಾಗಿವೆ. ಈ ಸಿನಿಮಾ ಅಂತಹುದೇ ವಿಷಯವನ್ನು ಹೈಲೈಟ್ ಆಗಿಟ್ಟುಕೊಂಡು ಬಂದಿದೆ.
ನಿವೇದಿತಾ (ಅರ್ಚನಾ ಜೋಯಿಸ್) ಎಂಬ ಮಹಿಳೆ ಕೋರ್ಟ್ ಆವರಣದಲ್ಲೇ ಶಾಸಕನ ತಮ್ಮನನ್ನು ಗುಂಡಿಟ್ಟು ಹತ್ಯೆ ಮಾಡುತ್ತಾಳೆ. ಎರಡು ಬುಲೆಟ್‌ಗಳು ಎದೆಗೆ ಇಳಿದರೆ, ಒಂದು ಸೀದಾ ಹಣೆಯಿಂದ ತೂರಿಕೊಂಡು ಹೋಗಿರುತ್ತದೆ. ಹೀಗೆ ಸಾರ್ವಜನಿಕವಾಗಿ ನಡೆದ ಈ ಹತ್ಯೆ ಕೇಸ್‌ನಲ್ಲಿ ನಿವೇದಿತಾ ಅರೆಸ್ಟ್ ಆಗುತ್ತಾಳೆ. ‘ಇವಳ ಪರವಾಗಿ ವಾದಿಸಲು ಯಾವ ಲಾಯರ್ ಸಹ ಒಪ್ಪಲಿಲ್ಲ. ಆಗ ಲಾಯರ್ ಭರತ್ (ಅಜಯ್ ರಾವ್) ಈ ಕೇಸನ್ನು ಕೈಗೆತ್ತಿಕೊಂಡು ನಿವೇದಿತಾಳನ್ನು ಈ ಮರ್ಡರ್ ಕೇಸ್‌ನಿಂದ ಬಚಾವ್ ಮಾಡುವುದಕ್ಕೆ ಮುಂದಾಗುತ್ತಾನೆ. ಹಾಗಾದರೆ, ಭರತ್ ಈ  ಪ್ರಕರಣವನ್ನು ಹೇಗೆ ಗೆಲ್ಲುತ್ತಾನಾ? ಹೇಗೆ ಗೆಲ್ಲುತ್ತಾನೆ? ತಿಳಿಯಲು ನೀವು ಚಿತ್ರಮಂದಿರದಲ್ಲಿ “ಯುದ್ಧಕಾಂಡ” ನೋಡಬೇಕು.

ಚಿತ್ರದ ಬಹುತೇಕ ಕೋರ್ಟ್ ನಲ್ಲೇ ನಡೆದರೂ ಕೆಲವಷ್ಟು ದೃಶ್ಯಗಳಲ್ಲಿ ಬಾವುಕತೆಯ ಸ್ಪರ್ಷವಿದೆ ಆ ಮಟ್ಟಿಗೆ ಚಿತ್ರಕಥೆ ಗಟ್ಟಿಯಾಗಿದೆ. ಅಲ್ಲದೆ ಚಿತ್ರದ ಪಾತ್ರಧಾರಿಗಳ ಅಭಿನಯ ಗಮನ ಸೆಳೆಯುತ್ತದೆ. ಸಿನಿಮಾದ ಆರಂಭದಲ್ಲಿ ತುಸು ಕಾಮಿಡಿ ಬೆರೆಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಅಲ್ಲದೇ, ಪ್ರೀತಿ ಪ್ರೇಮದ ದೃಶ್ಯಗಳಿದೆ. ಆದರೆ ಅದಾವುದೂ ಕಥೆಗೆ ಪ್ರಮುಖ ಎನಿಸುವುದಿಲ್ಲ.

ವಕೀಲನ ಪಾತ್ರದಲ್ಲಿ ಅಜಯ್ ರಾವ್ ಮೆಚ್ಚುಗೆ ಗಳಿಸುತ್ತಾರೆ. ನಿವೇದಿತಾ ಪಾತ್ರದಲ್ಲಿ ಅರ್ಚನಾ ಜೋಯಿಸ್ ಅಭಿನಯ ಹೆಚ್ಚು ಅಂಕ ಗಿಟ್ಟಿಸುತ್ತಾರೆ. ಪ್ರಕಾಶ್ ಬೆಳವಾಡಿ ಸಹ ಗಮನ ಸೆಳೆಯುವ ಅಭಿನಯ ಕೊಟ್ಟಿದ್ದಾರೆ. ಇದು ಹೊರತಾಗಿ ಹೆಚ್ಚಿನ ಪಾತ್ರಗಳಿಲ್ಲ. ಹಾಡು ಅಷ್ಟೇನು ಸದ್ದು ಮಾಡಲ್ಲ. ಬಿಜಿಎಂ ಚಿತ್ರಕ್ಕೆ ಪೂರಕವಾಗಿದೆ. ಇಲ್ಲಿ ನಟ, ನಿರ್ಮಾಪಕ ಅಜಯ್ ರಾವ್ ಮನರಂಜನೆಗಿಂತಲೂ ಹೆಚ್ಚಾಗಿ, ಒಂದು ಗಂಭೀರ ವಿಷಯವನ್ನು ಪ್ರೇಕ್ಷಕರಿಗೆ ತಿಳಿಸಲು ಈ ಸಿನಿಮಾ ತಯಾರಿಸಿದ್ದಾರೆ ಎನ್ನಬಹುದು.

ಕ್ಲೈಮ್ಯಾಕ್ಸ್ ನಲ್ಲಿ ಬರುವ ಕೆಲವು ಸನ್ನಿವೇಶಗಳು ಸಾಮಾನ್ಯ ಕೋರ್ಟ್ ನಲ್ಲಿ ನಡೆಯುವುದಕ್ಕೆ ಅಸಾಧ್ಯ ಎಂಬಂತಿದೆ, ಅತ್ಯಾಚಾರಕ್ಕೊಳಗಾಗಿ ಮಗು ಕೋಮಾದಲ್ಲಿದ್ದಾಗಲೂ ಜೈಲಿನಲ್ಲಿದ್ದ ಅವಳ ತಾಯಿ ಮನಸು ಮಿಡಿಯದಿರುವುದು ಇಂತಹಾ ಕೆಲವು ನ್ಯೂನತೆಗಳಿದ್ದೂ ಒಟ್ಟಾರೆ ಚಿತ್ರ ಒಂದು ಬಾರಿ ವೀಕ್ಷಿಸಬಹುದಾದ ಚಿತ್ರ ಎನ್ನಲಡ್ಡಿಯಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ