ಭಾರತೀಯ ಚಿತ್ರರಂಗ ಕಂಡ ಅಪರೂಪದ ಕಲಾವಿದೆ ಈ ಸಾಯಿ ಪಲ್ಲವಿ. ಈಕೆಯ ಸಿನಿಮಾಗಳ ಆಯ್ಕೆ, ಪಾತ್ರಗಳು, ಅವುಗಳಿಗೆ ತೊಡುವ ಉಡುಗೆಗಳು, ನಡೆ, ನುಡಿ, ಸಂಸ್ಕಾರ, ಆಕೆಯ ಸಿದ್ದಾಂತಗಳು ಹೀಗೆ ಹತ್ತು ಹಲವು ಕಾರಣಗಳಿಂದ ಪ್ರೇಕ್ಷಕರಿಗೆ ಈಕೆ ಹಾರ್ಟ್ ಫೇವರಿಟ್. ಎಲ್ಲಕ್ಕಿಂತ ಮಿಗಿಲಾಗಿ ಈಕೆ ಅದ್ಭುತ ಡ್ಯಾನ್ಸರ್.
ಬಾಲನಟಿಯಾಗಿಯೇ ಬಣ್ಣ ಹಚ್ಚಿದ್ದ ಸಾಯಿ ಪಲ್ಲವಿ, 2015ರಲ್ಲಿ ಪ್ರೇಮಂ ಚಿತ್ರದಿಂದ ಬಣ್ಣದಲೋಕಕ್ಕೆ ನಾಯಕನಟಿಯಾಗಿ ಪಾದಾರ್ಪಣೆ ಮಾಡಿದ್ರು. ಅಲ್ಲಿಂದ ಒಂದು ದಶಕದಲ್ಲಿ ಈಕೆ ಹಿಂದಿರುಗಿ ನೋಡಿದ ನಿದರ್ಶನವೇ ಇಲ್ಲ. ಹೌದು.. ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ವೆರೈಟಿ ಆಫ್ ಜಾನರ್ ಸಿನಿಮಾಗಳು ಹಾಗೂ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.
ಇತ್ತೀಚೆಗೆ ಸಾಯಿ ಪಲ್ಲವಿ ನಟಿಸಿದ ಅಮರನ್ ಹಾಗೂ ತಂಡೆಲ್ ಸಿನಿಮಾಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಅಲ್ಲದೆ, ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ಕಮಾಯಿ ಕೂಡ ಮಾಡಿದವು. ಅಂದಹಾಗೆ ಸಾಯಿ ಪಲ್ಲವಿ ಎಲ್ಲರಂತಲ್ಲ. ಆಕೆಯಂತೆ ಆಕೆಯ ಪಾತ್ರಕ್ಕೂ ಮನ್ನಣೆ ಸಿಗಬೇಕು, ಹಾಗಿದ್ದಲ್ಲಿ ಮಾತ್ರ ಸಿನಿಮಾಗೆ ಓಕೆ ಅಂತಾರೆ.
ಸಕ್ಸಸ್ನ ಉತ್ತುಂಗದಲ್ಲಿರೋ ಸಾಯಿ ಪಲ್ಲವಿ, ಸದ್ಯ ಬಾಲಿವುಡ್ ಅಂಗಳದಲ್ಲಿ ತಯಾರಾಗ್ತಿರೋ ರಾಮಾಯಣ ಸಿನಿಮಾದಲ್ಲಿ ರಣ್ಬೀರ್, ಯಶ್ ಜೊತೆ ಸೀತೆ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಹೀಗೆ ಬ್ಯಾಕ್ ಟು ಬ್ಯಾಕ್ ಸಂಭ್ರಮದಲ್ಲಿರೋ ಚೆಲುವೆಗೆ ಮದುವೆ ಅನ್ನೋ ಸುದ್ದಿ ಜೋರಾಗಿ ಹರಿದಾಡ್ತಿದೆ. ಕಳೆದ ಆರು ತಿಂಗಳಿಂದ ಅದು ಅಂತೆ ಕಂತೆಯಾಗಿ ಓಡಾಡ್ತಿದ್ರೂ, ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
ಕೊಯಂಬತ್ತೂರು ಬಳಿಯ ಬಡಗ ಸಮುದಾಯದಲ್ಲಿ ಜನಿಸಿರೋ ಈಕೆ, ಅಂತರ್ಜಾತಿ ವಿವಾಹದ ಬಗ್ಗೆ ಒಮ್ಮೆ ಮಾತನಾಡಿದ್ರು. ತಮ್ಮ ಸಮುದಾಯದಲ್ಲೇ ಮದುವೆ ಆಗ್ಬೇಕು ಎಂದಿದ್ದ ಒಬ್ಬ ವ್ಯಕ್ತಿ, ಬೇರೆ ಸಮುದಾಯದಲ್ಲಿ ಮದುವೆ ಆಗಿ ಸೆಟಲ್ ಆಗಿರೋ ಬಗ್ಗೆ ಅಸಮಾಧಾನ ಹೊರಹಾಕಿದ್ರು. ಅಲ್ಲದೆ, ಬೇರೆ ಸಮುದಾಯದವರ ಜೊತೆ ಮದುವೆ ಆದ್ರೆ ಯಾವುದೇ ಸಮಾರಂಭಗಳಿಗೆ ಎಂಟ್ರಿ ಇರಲ್ಲ. ಸಾವುಗಳಿಗೂ ಕರೆಯಲ್ಲ ಎಂದಿದ್ದರು. ಅದೀಗ ಮತ್ತೆ ವೈರಲ್ ಆಗ್ತಿದೆ.
ಇದರ ಅರ್ಥ ಸಾಯಿ ಪಲ್ಲವಿ ಸಮುದಾಯವನ್ನು ದಾಟಿ, ಹೊರ ಬಂದು, ಒಂದು ಎಕ್ಸಾಂಪಲ್ ಸೆಟ್ ಮಾಡ್ತಾರೆ ಅನ್ನೋದು. ಈಕೆ ಮದ್ವೆ ಆದ್ರೆ ಅಂತರ್ಜಾತಿ ವಿವಾಹವೇ ಆಗ್ತಾರೆ ಅನ್ನೋದು ಪಕ್ಕಾ ಆಗಿದೆ. ಹುಡುಗ ಕೂಡ ಸಂಪ್ರದಾಯಸ್ಥ ಕುಟುಂಬದವರಾಗಬೇಕಿದ್ದು, ಸಂಸ್ಕೃತಿಯನ್ನ ಗೌರವಿಸಬೇಕು, ಮಿಗಿಲಾಗಿ ಹೆಣ್ಣನ್ನು ಹೆಚ್ಚು ಗೌರವಿಸೋ ವ್ಯಕ್ತಿಯಾಗಿರಬೇಕು ಎಂಬುದಾಗಿದೆ.