ಹಣದ ಹಿಂದೆ ಬಿದ್ದ ಸ್ಟಾರ್​ಗಳಿಗೀಗ ಸಂಕಷ್ಟ ಶುರುವಾಗಿದೆ. ಸಮಾಜದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತೆ ಅನ್ನೋದನ್ನ ಯೋಚನೆ ಮಾಡದೇ ಪ್ರಚಾರದಲ್ಲಿ ಭಾಗಿಯಾಗಿ ಬಿಂದಾಸ್ ಲೈಫ್​ಗೆ ಬೇಕಾದಷ್ಟು ಹಣ ಅಂತಸ್ತು ಗಳಿಸುತ್ತಿದ್ದ ಸ್ಟಾರ್​ಗಳಿಗೀಗ ನಡುಕ ಆರಂಭವಾಗಿದೆ. ಟಾಲಿವುಡ್​​ನಲ್ಲಿ 25ಕ್ಕೂ ಹೆಚ್ಚು ನಟ ಹಾಗೂ ನಟಿಯರಿಗೆ ಬೆಟ್ಟಿಂಗ್ ಌಪ್​ ಪ್ರಚಾರವೇ ಉರುಳಾಗೋ ಸಾಧ್ಯತೆಗಳು ಹೆಚ್ಚಿವೆ. ಯಾಕಂದ್ರೆ, ಈ ಸ್ಟಾರ್ಸ್​ ವಿರುದ್ಧ ಪೊಲೀಸರು ಕೇಸ್ ಜಡಿದಿದ್ದಾರೆ.

ಸಾಮಾಜಿಕ ಹೋರಾಟಗಾರ ಫಣೀಂದ್ರ ಶರ್ಮಾ ಅನ್ನೋರು ಕೊಟ್ಟ ದೂರಿನ ಮೇಲೆ ಹೈದ್ರಾಬಾದ್​​ನ ಮಿಯಾಪುರ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದ್ದು, ಹಿರಿಯ ನಟ ಪ್ರಕಾಶ್ ರಾಜ್, ವಿಜಯ್​ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿದಂತೆ ಹಲವರ ವಿರುದ್ಧ ಕೇಸ್ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತನ್ನು ನೀಡುವ ಮೂಲಕ ಬೆಟ್ಟಿಂಗ್ ಌಪ್​ನ್ನು ಪ್ರಚಾರ ಮಾಡುತ್ತಿದ್ದರು. ಹೀಗಾಗಿ ಇವರ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ.

25 ನಟ, ನಟಿಯರ ಮೇಲೆ ಕೇಸ್​​:

ನಟರಾದ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಪ್ರಣೀತಾ, ಲಕ್ಷ್ಮಿ ಮಂಚು ಮತ್ತು ನಿಧಿ ಅಗರ್ವಾಲ್, ಅನನ್ಯ ನಾಗೆಲ್ಲ, ಸಿರಿ ಹನುಮಂತು, ಶ್ರೀಮುಖಿ, ವರ್ಷಿಣಿ ಸೌಂದರರಾಜನ್, ವಸಂತಿ ಕೃಷ್ಣನ್, ಶೋಬಾ ಪಟ್ಟಾನಿ, ಪವನ್ ಪಟ್ಟಾನಿ, ಪವನ್ ಶೆಟ್ಟಿ ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣು ಪ್ರಿಯಾ, ಹರ್ಷ ಸಾಯಿ, ಬಯ್ಯ ಸನ್ನಿ ಯಾದವ್, ಶ್ಯಾಮಲಾ, ಟೇಸ್ಟಿ ತೇಜಾ, ರಿತು ಚೌಧರಿ ಮತ್ತು ಬಂಡಾರು ಶೇಷಾಯನಿ ಸುಪ್ರಿತಾ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ತೆಲಂಗಾಣ ಗೇಮಿಂಗ್ ಕಾಯ್ದೆಯ ಸೆಕ್ಷನ್ 3, 3(ಎ), ಮತ್ತು 4, ಬಿಎನ್‌ಎಸ್‌ನ ಸೆಕ್ಷನ್ 49, ಸೆಕ್ಷನ್ 318(4) ಮತ್ತು 112 ಮತ್ತು ಐಟಿ ಕಾಯ್ದೆಯ ಸೆಕ್ಷನ್ 66-ಡಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆಘಾತಕಾರಿ ಸುದ್ದಿ ಅಂದ್ರೆ, ಈ ಆನ್​ಲೈನ್​ ಬೆಟ್ಟಿಂಗ್ ದಂಧೆಯಿಂದ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಹಣ ಕಳೆದುಕೊಂಡ ಹಲವು ಯುವಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈಗಾಗಲೇ ತೆಲಂಗಾಣ ಸರ್ಕಾರ ಬೆಟ್ಟಿಂಗ್ ಌಪ್​​ಗಳಿಗೆ ನಿಷೇಧ ಹೇರಿದೆ. ಆದ್ರೂ ಕೂಡ ಈ ನಟ, ನಟಿಯರು ಪ್ರಚಾರ ಮಾಡುತ್ತಿದ್ದರಿಂದ ಕೇಸ್ ಹಾಕಲಾಗಿದೆ. ಇವರು ಪ್ರಚಾರ ಮಾಡುತ್ತಿದ್ದರಿಂದ ಯುವಕರು ಹೆಚ್ಚು ಸಾಲ ಮಾಡಿ ಬೆಟ್ಟಿಂಗ್​ನಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಳ್ಳುತ್ತಿದ್ದರು.

ಸ್ಯಾಂಡಲ್​ವುಡ್​​ ಸ್ಟಾರ್ಸ್​​ಗೂ ಕಂಟಕ..!? :

ಇನ್ನು ಸ್ಯಾಂಡಲ್​ವುಡ್​​ನಲ್ಲೂ ಇದೇ ರೀತಿಯ ಆನ್​ಲೈನ್ ಬೆಟ್ಟಿಂಗ್ ದಂಧೆಗೆ ಪ್ರೋತ್ಸಾಹ ನೀಡುತ್ತಿರುವ ಅರ್ಥಾತ್ ಪ್ರಚಾರ ಮಾಡುತ್ತಿರುವ ನಟ, ನಟಿಯರಿಗೂ ಕಂಟಕ ಎದುರಾಗಲಿದೆ. ದೊಡ್ಡ ಸ್ಟಾರ್​ಗಳು ಸೇರಿದಂತೆ ಹಲವರ ವಿರುದ್ಧ ಸದ್ಯದಲ್ಲೇ ದೂರು ದಾಖಲಾಗುವ ಸಾಧ್ಯತೆಗಳು ಹೆಚ್ಚಿವೆ. ಇದಕ್ಕೆ ಸಂಬಂಧಪಟ್ಟಂತೆ ಪೊಲೀಸರು ಈಗಾಗಲೇ ಯಾವ್ಯಾವ ಸ್ಟಾರ್​ಗಳು ಯಾವ್ಯಾವ ಆನ್​ಲೈನ್ ಬೆಟ್ಟಿಂಗ್ ಌಪ್​ಗಳ ಕುರಿತಂತೆ ಪ್ರಚಾರ ಮಾಡುತ್ತಿದ್ದಾರೆ ಅನ್ನೋ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ