ಹಿರಿಯ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ
ನಟ , ನಿರ್ಮಾಪಕ, ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ್ದ ರಘು ಅವರು 'ಮಿಸ್ ಲೀಲಾವತಿ' ಚಿತ್ರದ ಮುಖಾಂತರ ನಟನೆ ಮತ್ತು ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಎಂ.ಆರ್. ವಿಠ್ಠಲ್ . ಬಿ. ವಿಠ್ಠಲಾಚಾರ್ಯ , ವೈ.ಆರ್.ಸ್ವಾಮಿ ಅವರೊಂದಿಗೆ ಸಹ ನಿರ್ದೇಶಕರಾಗಿ ನಂತರ ಸ್ವತಂತ್ರ ನಿರ್ದೇಶಕರಾಗಿ ಅಂಬರೀಶ್ ಅವರಿಗೆ ಅತಿಹೆಚ್ಚು ಚಿತ್ರ ನಿರ್ದೇಶನ ಮಾಡಿದ್ದರು. ಪೋಷಕ ನಟರಾಗಿ ಶಿವಸೈನ್ಯ ಚಿತ್ರ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು.
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಕೊಡವ ಸಮಾಜದವರಾದ ರಘು ಅವರು ಹಲವಾರು ಕೊಡವ ಧಾರಾವಾಹಿ ಮತ್ತು ಸಾಕ್ಷ್ಯಚಿತ್ರ ನಿರ್ಮಿಸಿದ್ದರು.
ಆರ್.ಎನ್.ಜಯಗೋಪಾಲ್ ಅವರೊಂದಿಗೆ ಕನ್ನಡ ಸರಣಿಯಾದ
ರಾಮಾಯಣ ಧಾರಾವಾಹಿ ನಿರ್ದೇಶನ ಮಾಡಿದ್ದವರು.
ನಟ, ನಿರ್ಮಾಪಕ, ನಿರ್ದೇಶಕರಾಗಿದ್ದ ರಘು ರವರು 55 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡುವ ಮೂಲಕ, ಕನ್ನಡ, ಹಿಂದಿ, ಮಲೆಯಾಳಂ ಭಾಷೆಯ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ.
1980ರಲ್ಲಿ ಬಿಡುಗಡೆ ಆದ ‘ನ್ಯಾಯ ನೀತಿ ಧರ್ಮ’ ಅವರ ನಿರ್ದೇಶನದ ಮೊದಲ ಸಿನಿಮಾ. ಅಂಬರೀಷ್, ಆರತಿ, ದ್ವಾರಕೀಶ್ ಅವರ ತಾರಾಗಣವಿತ್ತು.
ಮಂಡ್ಯದ ಗಂಡು, ಮಿಡಿದ ಹೃದಯಗಳು, ಜೈಲರ್ ಜಗನ್ನಾಥ್, ಬೇಟೆಗಾರ, ಧರ್ಮ ಯುದ್ಧ, ನ್ಯಾಯ ನೀತಿ ಧರ್ಮ.. ಸೇರಿದಂತೆ ಇನ್ನಿತರ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ನಿರ್ದೇಶಕ ರಘು ಅವರಿಗೆ 76 ವರ್ಷ ವಯಸ್ಸಾಗಿತ್ತು,