– ರಾಘವೇಂದ್ರ ಅಡಿಗ ಎಚ್ಚೆನ್.
ಹಿರಿಯ ವಿದ್ವಾಂಸರಾದ ಪ್ರೊ ಎಸ್ ಆರ್ ಲೀಲಾ ಅವರು ಕಮಲ ಪುಷ್ಪವನ್ನು ಕುರಿತಾಗಿ ಪದ್ಮಗಂಧಿ. ಚಲನಚಿತ್ರವನ್ನು ನಿರ್ಮಾಣ ಮಾಡಿದ್ದು ಚಿತ್ರದ ಟ್ರೈಲರ್(ಕಥಾ ನಿಕ್ಷೇಪ ) ಬಿಡುಗಡೆ ಕಾರ್ಯಕ್ರಮ ಪೇಜಾವರ ಪೇಜಾವರ ಮದಧೋಕ್ಷಜತೀರ್ಥ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು,ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿದೆ. ಸುಚೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರವಿದಾಗಿದ್ದು ಪದ್ಮಪುಷ್ಪದ ವೈಶಿಷ್ಟ್ಯತೆ ಹಾಗೂ ಅಖಂಡತೆಯನ್ನು ಪ್ರಾಚೀನತೆಯಿಂದ ಅರ್ವಾಚೀನದವರೆವಿಗೂ ದಾಖಲಿಸಿ ಮುಂದಾಟಿಸುವ ಶೋಧಾತ್ಮಕ ಅಡಕವುಳ್ಳ ತ್ರಿಭಾಷಾ (ಸಂಸ್ಕೃತ, ಕನ್ನಡ, ಹಿಂದಿ) ಚಿತ್ರ ಸಾಹಸವೇ ಪದ್ಮಗಂಧಿ.
ರ್‍ಎಐಲರ್ ಬಿಡುಗಡೆ ಸಮಾರಂಭದಲ್ಲಿ ಪೂಜ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ಅದರೊಂದಿಗೆ ಪ್ರೊ ಎಸ್ ಆರ್ ಲೀಲಾ, ಸುಚೀಂದ್ರ ಪ್ರಸಾದ್ ಸೇರಿ ಇಡೀ ಚಿತ್ರತಂಡ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದೆ.
ಕೆಲವು ಚಲನಚಿತ್ರಗಳು ಕಾದಂಬರಿಯ ಕಾರಣಕ್ಕೆ ಖ್ಯಾತಿ ಪಡೆಯುತ್ತವೆ. ಕೆಲವು ಕಾದಂಬರಿಗಳು ಚಲನಚಿತ್ರವಾದ ಮೇಲೆ ಖ್ಯಾತಿ ಪಡೆಯುತ್ತವೆ. ಇವರೆಡಕ್ಕಿಂತ ಭಿನ್ನವಾಗಿರುವ ‘ಪದ್ಮಗಂಧಿ’ ವೀಕ್ಷಕರಲ್ಲಿ ಧನ್ಯತೆಯ ಭಾವ ಮೂಡಿಸುತ್ತಲೇ ಭಾರತದ ಆಸ್ಮಿತೆಯ ರಾಷ್ಟ್ರಪುಷ್ಪ ಕಮಲದ ಬಗ್ಗೆ ಮತ್ತಷ್ಟು ತಿಳಿಯುವ ಕುತೂಹಲ ಹುಟ್ಟಿಸುತ್ತದೆ.
ಪುರಾಣ-ಇತಿಹಾಸದಿಂದ ಮೊದಲ್ಗೊಂಡು ವರ್ತಮಾನದವರೆಗೂ ‘ಪದ್ಮ ಪುರಾಣ’ ಎಂಬುದು ಅಗೆದಷ್ಟೂ, ಬಗೆದಷ್ಟೂ, ಮೊಗೆದಷ್ಟೂ ಇಂಗದ ಜ್ಞಾನಭಂಡಾರ ಎಂಬುದು ಅರ್ಥವಾಗಬೇಕೆಂದರೆ ‘ಪದ್ಮಗಂಧಿ’ಯನ್ನು ನೋಡಬೇಕು ಎನ್ನುವುದು ಚಿತ್ರತಂಡದವರ ಮಾತು.
ಪದ್ಮಗ೦ಧಿಯಲ್ಲಿ ತ್ರಿಮೂರ್ತಿ-ತ್ರಿದೇವಿಯರ ಸಹಿತ ಪುರಾಣವಿದೆ, ಸನಾತನ-ಜೈನ-ಬೌದ್ಧ ಪರಂಪರೆಯ ಇತಿಹಾಸವಿದೆ, ಸ್ವಾತಂತ್ರ್ಯಸಂಗ್ರಾಮದ ಕಿಚ್ಚಿದೆ, ಚತುರ್ವೇದಗಳ ಸಹಿತ ಆಯುರ್ವೇದವಿದೆ. ವಿಜ್ಞಾನದ ಸಂಶೋಧನೆಯಿದೆ, ಗಣಿತದ ಲೆಕ್ಕಾಚಾರವಿದೆ. ಅನ್ನದಾತನ ಕೃಷಿಯಿದೆ. ವ್ಯಾಕರಣ- ಛಂದಸ್ಸು-ಅಲಂಕಾರಭರಿತ ಶ್ರೀಮಂತವಾದ ಸಾಹಿತ್ಯ-ಸಂಗೀತ ಸಂಭಾಷಣೆಯಿದೆ, ಕ್ರೀಡೆಯಿದೆ. ಶಿಲ್ಪಶಾಸ್ತ್ರ, ಲೋಹಶಾಸ್ತ್ರವೂ ಇದೆ. ಜಲಸಂಪನ್ಮೂಲ ಸಹಿತ ಪರಿಸರ ಸಂರಕ್ಷಣೆಯ ಪಾಠವಿದೆ. ಸಂಸ್ಕೃತಿ-ಪರಂಪರೆಯ ವಾರಸುದಾರರಿಗೆ ಕರಗದಷ್ಟು ಬೌದ್ಧಿಕ ಸಂಪತ್ತಿದೆ. ದಶಕದ ಪರ್ಯಂತ, ತಳಸ್ಪರ್ಶಿ ಅಧ್ಯಯನ ನಡೆಸಿ, ಪರಿಕಲ್ಪನೆ ಹಾಗೂ ನಿರ್ಮಾಣ ಕೈಂಕರ್ಯಕೆ ಮುಂದಾಗಿರುವವರು, ವಿದುಷಿ *ಡಾ ಎಸ್ ಆರ್ ಲೀಲಾ* (ಮಾಜಿ ವಿಧಾನ ಪರಿಷತ್ ಸದಸ್ಯರು) ಚಿತ್ರಕಥೆ ಹಾಗೂ ದಿಗ್ಧರ್ಶನದ ಹೊಣೆ *ಕ. ಸುಚೇಂದ್ರ ಪ್ರಸಾದ* ಇವರದಾಗಿದ್ದು *’ವಾಯ್ಸಿಂಗ್ ಸೈಲೆನ್ಸ್'” ಅಂತಾರಾಷ್ಟ್ರೀಯ ಸದಭಿರುಚಿ ಚಲನಚಿತ್ರ ವೇದಿಕೆ ಅಡಿಯಲಿ “ಪದ್ಮಗಂದಿ” ಪ್ರೇಷಿತ. ‘ಶುಭಂ ಕರೋತಿ ಮೈತ್ರೇಯಿ ಬಾಲಕಿಯರ ಗುರುಕುಲ’ವನ್ನು ಹಿನ್ನೆಲೆಯಾಗಿರಿಸಿಕೊಂಡು ನಡೆವ ಚಿತ್ರೀಕರಣವು ಪುರಾಣೋಕ್ತ, ಸಸ್ಯ ವಿಜ್ಞಾನ, ದರ್ಶನಶಾಸ್ತ್ರ, ವೇದ ವೇದಾಂತ, ಆಯುರ್ವೇದ, ಯೋಗ ಹಾಗೂ ಸಮಕಾಲೀನದಲ್ಲೆಲ್ಲಾ ವ್ಯಾಪಕ ಹರಡಿರುವ ‘ಪದ್ಮಪುಷ್ಪ’ ಕುರಿತಾದ ವಿಚಾರಬದ್ಧ ಮಥನವು ಚಿತ್ರದ ಅಡಕವಾಗಿರಲಿದೆ.
ಚಿತ್ರಕ್ಕೆ *ಮನು ಯಾಪ್ಲಾರ್ ಹಾಗೂ ನಾಗರಾಜ ಅದವಾನಿ* ಛಾಯಾಗ್ರಹಣವಿದ್ದು ಡಾ. ದೀಪಕ್ ಪರಮಶಿವನ್ ಸಂಗೀತ, ಎನ್. ನಾಗೇಶ್ ನಾರಾಯಣಪ್ಪ ಸಂಕಲನ,ವಿದ್ದು ಮುಖ್ಯಭೂಮಿಕೆಯಲ್ಲಿ ಬಾಲಕಿ *ಮಹಾಪದ್ಮ, ಪರಿಪೂರ್ಣ ಚಂದ್ರಶೇಖರ್, ಸಿತಾರ, ಡಾ ದೀಪಕ್ ಪರಮಶಿವನ್, ಹೇಮಂತ ಕುಮಾರ ಜಿ, ಅಮೃತಾ ನಾಯ್ಡು, ಶ್ರೀ ಪ್ರಮೋದ್ ಕಾಮತ್, ಮೃತ್ಯುಂಜಯ ಶಾಸ್ತ್ರಿ, ಪಂಡಿತ ಪ್ರಸನ್ನ ವೈದ್ಯ* ಹಾಗೂ ಚಿತ್ರರಂಗದ ಬಹುಮಾನ್ಯ ಕಲಾವಿದರು ಇದ್ದಾರೆ.