ಸಾಂಗ್ ಬಿಡುಗಡೆ
ಒಂದು ಸಿನಿಮಾ ಗೆಲ್ಲಬೇಕೆಂದರೆ ಅದರ ಗಟ್ಟಿ ಕಥೆ, ಕಲಾವಿದರ ಅಭಿನಯ, ಮೇಕಿಂಗ್ ಜತೆಗೆ ಹಾಡುಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಮಳೆ, ಧೈರ್ಯಂ, ದಿಲ್ ಪಸಂದ್ ಚಿತ್ರಗಳ ನಂತರ ನಿರ್ದೇಶಕ ಶಿವತೇಜಸ್ ಆಕ್ಷನ್ ಕಟ್ ಹೇಳಿರುವ ಚಿತ್ರ ಪಾರ್ಟ್ನರ್ ವಿಶೇಷ ಹಾಡಿನ ಮೂಲಕ ಪ್ರೇಕ್ಷರನ್ನು ಆಕರ್ಷಿಸುತ್ತಿದೆ. ಬೃಂದಾ ಆಚಾರ್ಯ, ಕೃಷ್ಣ ಅಜಯ್ ರಾವ್ ನಾಯಕ, ನಾಯಕಿಯಾಗಿ ನಟಿಸಿರುವ ಈಗಿನ ಜಂಝಿ ಲವ್, ಬ್ರೇಕಪ್, ಲಿವಿಂಗ್ ಟುಗೆದರ್ ನಂಥ ಕಂಟೆಂಟ್ ಇಟ್ಟುಕೊಂಡು ಜೀವನ ಎಂದರೆ ಇದಲ್ಲ, ಅದು ಬೇರೇನೇ ಇದೆ ಎಂದು ನಿರ್ದೇಶಕ ಶಿವತೇಜಸ್ ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ.

ಇತ್ತೀಚೆಗಷ್ಟೇ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದ್ದ ಚಿತ್ರ ತಂಡ ಇದೀಗ ಚಿತ್ರದ ಮೊದಲ ಹಾಡನ್ನು ಹೊರತಂದಿದೆ. ನಾಗಾರ್ಜುನ ಶರ್ಮಾ ರಚನೆಯ ಅಮೋರಾ ಎಂಬ ಹಾಡಿಗೆ ಕುನಾಲ್ ಗಂಜಾವಾಲಾ ದನಿಯಾಗಿದ್ದಾರೆ. ನಕುಲ್ ಅಭಯಂಕರ್ ಅವರ ಸಂಗೀತ ಸಂಯೋಜನೆಯ ಈ ಹಾಡಿನ ಬಿಡುಗಡೆ ಸಮಾರಂಭ ನಡೆಯಿತು. ವೇದಿಕೆಯಲ್ಲಿ ನಿರ್ಮಾಪಕ ಹರೀಶ್ ದೇವಿತಂದ್ರೆ ಅವರಿಗೆ ಪಾಠ ಹೇಳಿಕೊಟ್ಟ ಗುರುಗಳಾದ ನಾಗಭೂಷಣ್ ದಂಪತಿ ಈ ಹಾಡನ್ನು ರಿಲೀಸ್ ಮಾಡಿದರು.
ಈವೇಳೆ ನಟ ಅಜಯ್ ರಾವ್ ಮಾತನಾಡುತ್ತ ನನ್ನ ಮನಸಿಗೆ ತುಂಬಾ ಹತ್ತಿರವಾದ ಚಿತ್ರವಿದು. ನನ್ನ ಹೃದಯದ ಒಂದು ಭಾಗವನ್ನೇ ಇದರಲ್ಲಿ ಹಾಕಿದ್ದೇನೆ, ಕೆಲ ಸಿನಿಮಾಗಳು ಆರಂಭದಿಂದಲೇ ಏನೋ ಒಂದು ಮ್ಯಾಜಿಕ್ ಮಾಡುತ್ತೆ ಅನಿಸುತ್ತೆ. ಅಂಥಾ ಚಿತ್ರವಿದು. ಈ ಚಿತ್ರದ ಮೇಲೆ ನನಗೆ ತುಂಬಾ ಕಾನ್ಫಿಡೆಂಟ್ ಇದೆ. ಹ್ಯೂಮನ್ ವ್ಯಾಲ್ಯೂಸ್, ಎಮೋಷನ್ಸ್ ತುಂಬಾ ಚೆನ್ನಾಗಿ ಹೇಳಿದ್ದಾರೆ. ನನ್ನ ಜಾನರ್ ಸಿನಿಮಾದ ಎಮೋಷನ್ ಈ ಚಿತ್ರದಲ್ಲಿದೆ ಎಂದರು.

ನಿರ್ದೇಶಕ ಶಿವತೇಜಸ್ ಮಾತನಾಡುತ್ತ ದಿಲ್ ಪಸಂದ್ ಚಿತ್ರದಿಂದ ನನ್ನ ಹರೀಶ್ (ನಿರ್ಮಾಪಕ) ಸ್ನೇಹ ಆರಂಭವಾಯ್ತು. ಎಲ್ಲರಿಗೂ ಒಬ್ಬ ಪರ್ಟ್ನರ್ ಅಂತ ಇರ್ತಾರೆ. ಅದನ್ನೇ ಇಟ್ಟುಕೊಂಡು, ಜಂಜೀ ಕಂಟೆಂಟ್ ಮೇಲೆ ಈ ಸಿನಿಮಾ ಮಾಡಿದ್ದೇನೆ.
ಈ ಸಾಂಗ್ ಕೂಡ ಜಂಜಿಗಳಿಗಾಗೇ ಮಾಡಿರೋದು ಎಂದರು. ನಿರ್ಮಾಪಕ ಹರೀಶ್ ಮಾತನಾಡಿ ನಾನಿಲ್ಲಿ ನಿಂತಿದ್ದೇನೆ ಅಂದ್ರೆ ಅದಕ್ಕೆ ನನ್ನ ತಾಯಿ, ಪತ್ನಿ ಕಾರಣ. ಯಾವುದೇ ಮುಜುಗರ ಇಲ್ಲದೆ ಕುಟುಂಬ ಸಮೇತ ಕೂತು ನೋಡುವಂಥ ಸಿನಿಮಾ ನಿರ್ಮಿಸಿದ್ದೇವೆ.

ಅಜಯ್ ಚಿತ್ರದ ಸ್ಯಾಟಲೈಟ್ ಗೆ ಸಿಗೋ ಮೊತ್ತದ 50% ಹಣವನ್ನು ಆನಂದ್ ಆಡಿಯೋ ನಮ್ಮ ಆಡಿಯೋಗೆ ಕೊಟ್ಟಿದೆ ಎಂದರು. ನಾಯಕಿ ಬೃಂದಾ ಆಚಾರ್ಯ ಮಾತನಾಡಿ ನನ್ನ ಸಿನಿಮಾ ಕಲೆಕ್ಷನ್ ನಲ್ಲಿ ಅಮೋರಾ ದ ಬೆಸ್ಟ್ ಸಾಂಗ್. ಒಂದೊಳ್ಳೆ ಟೀಮ್ ಜತೆ ಕೆಲಸ ಮಾಡಿದ್ದೇನೆ ಎಂದು ಹೇಳಿದರು. ಸಂಗೀತ ನಿರ್ದೇಶಕ ನಕುಲ್ ಅಭ್ಯಂಕರ್, ಸಾಹಿತಿ ನಾಗಾರ್ಜುನ ಶರ್ಮ, ಕೊರಿಯಾಗ್ರಾಫರ್ ಮುರಳಿ, ನಟ ಅರವಿಂದರಾವ್ ಈ ಚಿತ್ರದಲ್ಲಿ ಕೆಲಸ ಮಾಡಿದ ತಮ್ಮ ಅನುಭವಗಳನ್ನು ಹಂಚಿಕೊಂಡರು.





