ಬಿಕಿನಿಯಲ್ಲಿ ಪೂಜಾ ಹೆಗಡೆ

ಪೂಜಾ ಹೆಗಡೆಯ ಹಾಟ್‌ ಫೋಟೋಗಳನ್ನು ನೋಡಿ ನೀವು ದಂಗಾದಿರಾ? ಅಸಲಿಗೆ ಆಕೆ ಇತ್ತೀಚೆಗೆ ಬ್ಯಾಂಕಾಕ್‌ ನಲ್ಲಿ ಬ್ಯೂಟಿಫುಲ್ ಲೋಕೇಶನ್‌ ಗೆ ಹೋಗಿ ಹಾಲಿಡೇ ಎಂಜಾಯ್‌ ಮಾಡುತ್ತಿದ್ದಾಳೆ. ಈ ಫೋಟೋದಲ್ಲಿ ಆಕೆಯ ವೈಟ್‌ ಬಿಕಿನಿ ಮೇಲೆ ಟ್ರಾನ್ಸ್ ಪರೆಂಟ್‌ ಶ್ರಗ್‌ ಮತ್ತು ಓಪನ್‌ ಹೇರ್ಸ್ ನೋಡಲು ಲಾಯಕ್ಕಾಗಿದೆ. ಆಕೆ ಈ ಫೋಟೋ ಅಪ್‌ ಲೋಡ್‌ ಮಾಡಿದ ತಕ್ಷಣ ಲಕ್ಷಾಂತರ ಲೈಕ್ಸ್ ದಕ್ಕಿದವು.

ರಾಖಿ ಸಾವಂತ್ಈಗ ಪ್ರೆಗ್ನೆಂಟ್

ಈ ಶೀರ್ಷಿಕೆ ಓದಿ ಶಾಕ್‌ ಆಯ್ತಾ? ಅಸಲಿಗೆ ಈಕೆ ಸುದ್ದಿಗಾರರೊಂದಿಗೆ ಹೀಗೊಂದು ನಾಟಕ ಆಡಿದಳು, ಅಲ್ಲಿ ಬೇಕೆಂದೇ ಅವಳು ಬೆಲೂನ್‌ ನ್ನು ತನ್ನ ಹೊಟ್ಟೆಗೆ ಸುತ್ತಿಕೊಂಡು ತಾನು ಪ್ರೆಗ್ನೆಂಟ್‌ ಎಂದು ಹೇಳಿಕೊಂಡಳು, ತನಗೆ ಬಾಹುಬಲಿಯೇ ಹುಟ್ಟುತ್ತಾನೆ ಎನ್ನುತ್ತಾಳೆ. ಅವಳ ಈ ಹುಚ್ಚುಖೋಡಿತನ ಕಂಡು ಸುದ್ದಿಗಾರರು ನಕ್ಕಿದ್ದೇ ನಕ್ಕಿದ್ದು. ಅವಳ ಈ ವಿಡಿಯೋ ಎಷ್ಟು ವೈರಲ್ ಆಯಿತೆಂದರೆ ಒಬ್ಬರಿಂದ ಒಬ್ಬರಿಗೆ ಸುದ್ದಿ ಹರಡಿ ಎಲ್ಲರೂ ಇದನ್ನು ನೋಡಿದ್ದೇ ನೋಡಿದ್ದು. ರಾಖಿಯ ಇಂತಹ ಹುಚ್ಚುಖೋಡಿತನ ಬಾಲಿವುಡ್‌ ಗೆ ಇದೇನು ಹೊಸತಲ್ಲ.

ರಣವೀರ್ದೀಪಿಕಾರ ಲಗ್ಶುರಿ ಅಪಾರ್ಟ್ಮೆಂಟ್

ಬಾಲಿವುಡ್‌ ನ ಪವರ್‌ ಫುಲ್ ಕಪಲ್ ರಣವೀರ್‌ ದೀಪಿಕಾ ತಮ್ಮ ಅಭಿಮಾನಿಗಳ ಹೃದಯಗಳಲ್ಲಿ ತುಂಬಿ ಹೋಗಿದ್ದಾರೆ. ಇವರ ಜೊತೆ ಒಂದು ಸೆಲ್ಛಿಗಾಗಿ ಜನ ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಇತ್ತೀಚೆಗೆ ಇವರು ಚರ್ಚೆಯಲ್ಲಿರುವುದು ತಮ್ಮ ಅದ್ಭುತ ದುಬಾರಿ ಅಪಾರ್ಟ್‌ ಮೆಂಟ್‌ ನಿಂದಾಗಿ. ಅದೂ ಶಾರೂಖ್‌ ಖಾನ್‌, ಸಲ್ಮಾನ್ ‌ಖಾನ್‌ ಮನೆ ಬಳಿಯಲ್ಲೇ. ಈ ಅಪಾರ್ಟ್‌ ಮೆಂಟ್‌ ನ್ನು ಇವರು ಖರೀದಿಸಿರುವುದು ಮುಂಬೈ ಬಾಂದ್ರಾದ ಒಂದು ಸಸ್ಯಶ್ಯಾಮಲ ರೆಸಿಡೆನ್ಶಿಯಲ್ ಏರಿಯಾದಲ್ಲಿ. ಇದರ ಬೆಲೆ ಕೇವಲ 119 ಕೋಟಿ.

ಮೀಕಾಗೆ ಸಿಕ್ಕಿದಳು ಅವನ ನವವಧು

ತನ್ನ ಸಂಗಾತಿಯನ್ನು ಹುಡುಕುವುದಕ್ಕಾಗಿ ಬಾಲಿವುಡ್‌ ನ ಖ್ಯಾತ ಗಾಯಕ ಮೀಕಾ ಸಿಂಗ್‌ ಕಿರುತೆರೆ ಮೂಲಕ ಸ್ವಯಂವರ ಹೂಡಿದ್ದ. ಇದಕ್ಕಾಗಿ ದೇಶಾದ್ಯಂತ ಹುಡುಗಿಯರು ಬಂದು ಭಾಗಹಿಸಿದ್ದರು, ತಮ್ಮದೇ ವಿಧಾನದಲ್ಲಿ ಮೀಕಾನನ್ನು ಇಂಪ್ರೆಸ್‌ಮಾಡಿದರು. ಆದರೆ ಸ್ವಯಂವರ ಮುಗಿಯುವ ಮೊದಲೇ ಯಾರೋ ಮೀಕಾನ ಹೃದಯ ಗೆದ್ದಿದ್ದರು. ಈಕೆ ಯಾರೆಂದು ನಿಮಗೆ ಗೊತ್ತೆ? ಅವಳು ಬೇರಾರೂ ಅಲ್ಲ, ಚಂಡೀಗಢ ರಾಜ್ಯದ ನೀತ್‌ ಮಹಲ್. ನೀತ್‌ ತನ್ನ ಅಡುಗೆ ಕಿಯಿಂದ ಮೀಕಾನ ಮನಗೆದ್ದಿದ್ದಳು. ಆಕೆ ವೃತ್ತಿಯಿಂದ ಮಾಡೆಲ್, ಗಾಯಕಿ ಸಹ. ಒಳ್ಳೆಯದೇ ಆಯಿತು ಮೀಕಾನ ಮನಗೆದ್ದ ನಧು ಸಿಕ್ಕಿಯೇಬಿಟ್ಟಳು!

ಹೃತಿಕ್ಗೆ ಆರೋಪಿಸಲಾದ ಕೋಟ್ಯಂತರ ದಾವೆ

Ritik_Roshan

ಹೃತಿಕ್‌ ರೋಷನ್‌ ತನ್ನ ಚಿತ್ರಗಳು ಮತ್ತು ವೈಯಕ್ತಿಕ ಜೀವನದಿಂದ ಸದಾ ಚರ್ಚೆಯಲ್ಲಿರುತ್ತಾನೆ.  `ಕಹೋನಾ ಪ್ಯಾರ್‌ ಹೈ' ಚಿತ್ರದಿಂದ ತನ್ನ ಕೆರಿಯರ್‌ ಆರಂಭಿಸಿದ ಹೃತಿಕ್‌ ಹಿಟ್‌ ಮೇಲೆ ಹಿಟ್‌ ಕೊಡುತ್ತಾ ಹೋದ. ಇತ್ತೀಚೆಗೆ ಈತ 4 ಚಿತ್ರಗಳಲ್ಲಿ ಒಟ್ಟೊಟ್ಟಿಗೆ ನಟಿಸುತ್ತಿದ್ದಾನೆ. ಅದರ ಒಟ್ಟಾರೆ ಬಜೆಟ್‌ 850 ಕೋಟಿ! ಅವು ಕ್ರಮವಾಗಿ, `ವಿಕ್ರಂ ಬೇತಾಳ್‌, ಫೈಟರ್‌, ವಾರ್‌, ಕೃಷ್.' ಇವನ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತುರತೆಯಿಂದ ಕಾಯುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ