ಬಾಲಿವುಡ್ಒಂದೇ ಅಲ್ಲದೆ, ಎಲ್ಲಾ ಭಾರತೀಯ ಚಿತ್ರಗಳಲ್ಲೂ ಹಿಂದಿನ ಪ್ರೇಮದ ವ್ಯಾಖ್ಯಾನ ಖಂಡಿತಾ ಅದೇ ರೀತಿ ಉಳಿದಿಲ್ಲ. ಇಂದಿನ ಆಧುನಿಕ ಕಾಲದವರ ಪರಿಯ ವ್ಯತ್ಯಾಸಕ್ಕೆ ಕಾರಣವಾದರೂ ಏನು......?

ಚಿತ್ರಗಳು ಸಮಾಜದ ಕೈಗನ್ನಡಿ ಎನಿಸುತ್ತವೆ. ಸಮಾಜದಲ್ಲಿ ನಡೆಯುತ್ತಿರುವ ಪ್ರತ್ಯಕ್ಷ ಘಟನೆಗಳೇ ಬೆಳ್ಳಿ ಪರದೆಯಲ್ಲಿ ಸಿನಿಮಾ ಆಗುತ್ತವೆ. ಅದು ಪ್ರೀತಿಪ್ರೇಮ, ತಕರಾರು, ಅಪರಾಧ, ಇಂದಿನ ಆಧುನಿಕ ಕಾಲದರ ಲವ್ ಸ್ಟೈಲ್‌...... ಏನೇ ಇರಬಹುದು.

ಹಿಂದಿನ ಕಾಲದಲ್ಲಿ ಪ್ರೇಮವೆಂದರೆ ಅದು ಅಮರ ಎಂದಾಗಿತ್ತು. ಲೈಲಾ ಮಜ್ನು, ಹೀರ್‌ ರಾಂಝ, ಸೋನಿ ಮಹಿವಾಲ್‌, ಮಾಲತಿ ಮಾಧವ, ಅಂಬಿಕಾಪತಿ ಅಮರಾವತಿ ಮುಂತಾದವರ ಪ್ರೇಮ ಕಥೆಗಳೇ ಆಗಿದ್ದವು. ಕಾಲಕ್ರಮೇಣ ಜನರ ಆಧುನಿಕ ಮನೋಭಾವಕ್ಕೆ ತಕ್ಕಂತೆ ಎಲ್ಲ ಬದಲಾಗ ತೊಡಗಿತು. ಕುಚ್‌ ಕುಚ್‌ ಹೋತಾ ಹೈ, ಹಂ ಆಪ್‌ಕೆ ಹೈ ಕೌನ್‌, ಮೈನೆ ಪ್ಯಾರ್‌ಕಿಯಾ..... ಮುಂತಾದ ಚಿತ್ರಗಳು ಸಾಲು ಸಾಲಾಗಿ ಬಂದವು. ಇವುಗಳಲ್ಲಿ ಪ್ರೇಮದ ಪರಿಯೂ ವಿಭಿನ್ನ, ಮದುವೆಯ ವ್ಯಾಖ್ಯಾನ ಡಿಫರೆಂಟ್‌. ಒಂದೇ ವಿಷಯ ಕಾಮನ್‌ ಎಂದರೆ, ಇಂದಿನ ಆಧುನಿಕ ಹುಡುಗಿಯರು ಇಂಥ ಸಿನಿಮಾಗಳ ಹೀರೋ ತರಹವೇ ತನ್ನ ಪ್ರೇಮಿ, ಮದುವೆ ಆಗಲಿರುವ ವರ ಇರಬೇಕೆಂದು ಕನಸು ಕಾಣತೊಡಗಿದರು.

ಮದುವೆ ಆದ ನಂತರ ಪತಿಯಲ್ಲಿ ಇಂಥ ಹೀರೋ ಕಾಣಲು ಯತ್ನಿಸುತ್ತಿದ್ದರು. ಮುಂದೆ ಕಾಲಕ್ರಮೇಣ ಜನರ ಯೋಚನಾಧಾಟಿ ಬದಲಾದಂತೆ, ಪ್ರೇಮ ಮದುವೆ ಬಗ್ಗೆ ಸಹ ಜನರ ದೃಷ್ಟಿಕೋನ ಬದಲಾಗ ತೊಡಗಿತು.

ಪ್ರೇಮವೆಂದರೆ.... `ಅಲೌಕಿಕ..... ಅದ್ಭುತ.... ಅದರಲ್ಲಿ ಕೊಚ್ಚಿಹೋದ ಮೇಲೆ ಮಳೆ ಏನು ಬಿಸಿಲೇನು....' ಎಂಬಂಥ ಹುಚ್ಚುಚ್ಚು ಕಲ್ಪನೆಗಳು ರಾರಾಜಿಸುತ್ತಿವೆ. ಇಂದಿನ ಫಿಲ್ಮಿ ಪ್ರೇಮಿಗಳು, ದಂಪತಿ ಹಿಂದಿನವರಂತೆ ಪ್ರೇಮದಲ್ಲಿ ಕುರುಡಲ್ಲ. ಬದಲಿಗೆ ಸಂಗಾತಿ ಕುರಿತಾಗಿ, ಮುಖ್ಯವಾಗಿ ಆರ್ಥಿಕ ಸ್ಥಿತಿ ಸದೃಢ ತಾನೇ ಎಂದು ಹಲವು ಸಲ ಚಿಂತಿಸಿ, ಸ್ವತಂತ್ರ ಧೋರಣೆ ತಾಳುತ್ತಾರೆ.

ಇದರ ಅರ್ಥ ಇಂದಿನ ಕಾಲದಲ್ಲಿ ಪ್ರೇಮ ಸತ್ತೇ ಹೋಗಿದೆ ಅಂತಲ್ಲ ಅಥವಾ ಜನರಿಗೆ ಪ್ರೇಮದ ಕುರಿತು ವಿಶ್ವಾಸವೇ ಇಲ್ಲ ಅಂತಲೂ ಅಲ್ಲ. ಬದಲಿಗೆ ಇಂದಿಗೂ ಸಹ ಪ್ರೇಮಿ ಅಥವಾ ದಂಪತಿಗಳಲ್ಲಿ, ಸಂಗಾತಿ ಕುರಿತು ಹಿಂದಿನಂತೆಯೇ ಮನದಾಳದ ಪ್ರೀತಿ ತುಂಬಿದೆ ಎನ್ನಬಹುದು. ಹಾಗಾದರೆ ವ್ಯತ್ಯಾಸ ಏನು? ಇಂದಿನ ಜನ ಪ್ರೇಮ, ಮದುವೆಗಳ ಕುರಿತಾಗಿ ಬಲು ಪ್ರಾಕ್ಟಿಕಲ್ ಆಗಿ ಚಿಂತಿಸುತ್ತಾರೆ. ಜೀವನವಿಡೀ ನಿಭಾಯಿಸಬೇಕಾದ ನಂಟಾದ್ದರಿಂದ ಬಲು ಎಚ್ಚರಿಕೆ ವಹಿಸುತ್ತಾರೆ.

ಲವ್ ಅದೇ ವಿಚಾರ ಬೇರೆ

ಇಂದಿನ ಕಾಲದವರಿಗೆ ಪ್ರೀತಿಪ್ರೇಮ ಅದೇ ಆದರೂ, ಅವರ ಯೋಚನಾಧಾಟಿ, ವಿಚಾರಲಹರಿ ಮಾತ್ರ ಖಂಡಿತಾ ಬೇರೆ! ಅದನ್ನೇ ಇಂದಿನ ರೊಮಾಂಟಿಕ್‌ ಚಿತ್ರಗಳಲ್ಲಿ ತೋರಿಸಲಾಗುತ್ತಿದೆ. ಈ ಕುರಿತಾಗಿ ಆಧುನಿಕ ಸಿನಿಮಾಗಳ ಕೆಲವು ದೃಶ್ಯಗಳ ಬಗ್ಗೆ ಗಮನಿಸೋಣ.

ಇತ್ತೀಚೆಗೆ ಬಿಡುಗಡೆಯಾದ ಕರಣ್‌ ಜೋಹರ್‌ ನಿರ್ದೇಶನದ, ಆಲಿಯಾ ರಣವೀರ್‌ ನಟಿಸಿದ್ದ `ರಾಕಿರಾನಿ ಕೀ ಪ್ರೇಂ ಕಹಾನಿ' ಚಿತ್ರದಲ್ಲಿ ಇಂಥದ್ದೇ ವಿಭಿನ್ನ ಪಾತ್ರಗಳಿವೆ. ಆಲಿಯಾ ರಣವೀರ್‌ ಮಧ್ಯೆ ಪ್ರೇಮಾಂಕುರ ಆಗುತ್ತದೆ. ಆದರೆ ಇಬ್ಬರೂ ಪರಸ್ಪರ ವಿಭಿನ್ನ ಧ್ರುವಗಳಂಥ ಸ್ವಭಾವದವರು. ಇವರು ಮಾತ್ರವಲ್ಲ, ಇವರ ಕುಟುಂಬಗಳೂ ಪರಸ್ಪರ ಬಲು ವಿರುದ್ಧ ಸಂಸ್ಕೃತಿಯವರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ