1995ರಲ್ಲಿ ಸೂಪರ್ ಹಿಟ್ ಆಗಿದ್ದ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ನಿರ್ದೇಶಿಸಿ ನಟಿಸಿದ್ದ ಪುಟ್ನಂಜ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಪುಟ್ನಂಜದಲ್ಲಿ ಪುಟ್ನಂಜಿಯ ಪಾತ್ರದಲ್ಲಿ ನಟಿ ಉಮಾಶ್ರೀ ಮಿಂಚು ಹರಿಸಿದ್ದನ್ನ ಯಾರೂ ಮರೆಯೋಕೆ ಸಾಧ್ಯನೇ ಇಲ್ಲ.

ನಟಿ ಮೀನಾ, ನಟ ಲೋಕೇಶ್​, ಉಮಾಶ್ರೀ ಪಾತ್ರಗಳು ಇವತ್ತಿಗೂ ಎವರ್​ಗ್ರೀನ್​. ಅಂತಹ ಐತಿಹಾಸಿಕ ಜೋಡಿಯನ್ನು ಇವತ್ತು ಕಿರುತೆರೆ ಮೇಲೆ ನೋಡುವ ಅವಕಾಶ ಕನ್ನಡಿಗರಿಗೆ ಒಲಿದುಬಂದಿದೆ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿರೋ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಪುಟ್ನಂಜಿ ಜೊತೆ ಪುಟ್ನಂಜ ಕಾಣಿಸಿಕೊಂಡಿದ್ದಾರೆ.

PUTTAKKANA MAKKALU (1)

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಮುಖ್ಯ ಪಾತ್ರವಾದ ‘ಪುಟ್ಟಕ್ಕ’ನ ಪಾತ್ರವನ್ನು ಕನ್ನಡದ ಖ್ಯಾತ ನಟಿ ಉಮಾಶ್ರೀ ಅವರು ಮಾಡುತ್ತಿದ್ದಾರೆ. ‘ಪುಟ್ಟಕ್ಕ’ನಿಗೆ ಜೊತೆಯಾಗಿ ನಿಂತವರು ಮಗಳು ಸಹನಾ, ಸ್ನೇಹಾ, ಸುಮಾ, ಗೆಳತಿ ಬಂಗಾರಮ್ಮ. ಅಳಿಯ ಕಂಠಿ ಮತ್ತಿತರ ಪಾತ್ರಗಳು. ಇದೀಗ ಈ ಧಾರಾವಾಹಿ ಮಹತ್ತರ ಘಟ್ಟದಲ್ಲಿ ಬಂದು ನಿಂತಿದೆ. ತನ್ನ ಆಸೆ, ಕನಸಿನಂತೆ ಜಿಲ್ಲಾಧಿಕಾರಿ ಆಗಿದ್ದ ಸ್ನೇಹಾ, ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದಳು. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಆಗಿದ್ದ ಅವಳ ಮೇಲೆ ನಿಧನದ ಬಳಿಕವೂ ಅವ್ಯವಹಾರದ ಆರೋಪ ಬಂದಿದ್ದು, ಮಗಳ ಪರವಾಗಿ ‘ಪುಟ್ಟಕ್ಕ’ ಹೋರಾಟಕ್ಕೆ ಮುಂದಾಗಿದ್ದಾಳೆ.

PUTTAKKANA MAKKALU (3)

ಮಗಳು ಸ್ನೇಹಾ ಮೇಲಿನ ಸುಳ್ಳು ಆರೋಪಕ್ಕೆ ಪ್ರತಿಯಾಗಿ ಪಾದಯಾತ್ರೆ ಮಾಡುತ್ತಿದ್ದು, ನ್ಯಾಯಕ್ಕಾಗಿ ಹಂಬಲಿಸುತ್ತಿದ್ದಾಳೆ. ಮಗಳಿಗೆ ಅಂಟಿದ ಕಳಂಕ ತೊಳೆಯುವ ಈ ಕಾರ್ಯಕ್ಕೆ ಯಾರಿಂದಲೂ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ಹೀಗೆ ಬೇಸತ್ತಿರುವ ಪುಟ್ಟಕ್ಕನಿಗೆ ಸಾಥ್ ಕೊಡಲು 'ಕ್ರೇಜಿ ಸ್ಟಾರ್ ರವಿಚಂದ್ರನ್' ಮುಂದಾಗಿದ್ದಾರೆ. ಜಸ್ಟಿಸ್ ಫಾರ್ ಸ್ನೇಹಾ ಹೋರಾಟಕ್ಕೆ ಪುಟ್ನಂಜ ಕೈ ಜೋಡಿಸಿದ್ದಾರೆ.

PUTTAKKANA MAKKALU (4)

‘ಪುಟ್ಟಕ್ಕ.. ಇನ್ಮುಂದೆ ಚಿಂತೆ ಬೇಡ.. ಹೆದರಬೇಡ.. ನಾನು ಬಂದಿದ್ದೇನೆ. ನ್ಯಾಯ ಸಿಗೋವರೆಗೂ ನಾನು ಹೋರಾಟದಲ್ಲಿ ಪಾಲ್ಗೊಳ್ಳುತ್ತೇನೆ’ ಅಂತಾ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ, ಪುಟ್ಟಕ್ಕನನ್ನ ರಸ್ತೆಯಲ್ಲೇ ಧರಣಿಗೆ ಕೂರಿಸಿ ತಾವೂ ಕೂಡ ಅಲ್ಲೇ ಕುಳಿತು ‘ಜಸ್ಟಿಸ್ ಫಾರ್ ಸ್ನೇಹಾ’ ಅಂತಾ ಘೋಷಣೆ ಕೂಗುತ್ತಿದ್ದಾರೆ.

PUTTAKKANA MAKKALU (6)

'ಹೆಣ್ಣು ಮಕ್ಕಳ ಹೆತ್ತೋರು ಎಲ್ಲ ದೇವರಿಗು ದೊಡ್ಡೋರು' ಅನ್ನುವ ಈ ಧಾರಾವಾಹಿಯ ಹಾಡಿನ ಸಾಲು ಪುಟ್ಟಕ್ಕನ ಕತೆಯ ಸಾರವನ್ನು ತೋರಿಸುತ್ತದೆ. ಗಂಡು ಮಗು ಆಗಿಲ್ಲ ಅನ್ನುವ ಕಾರಣಕ್ಕೆ ಗಂಡ ಗೋಪಾಲ ಪುಟ್ಟಕ್ಕನನ್ನು ಬಿಟ್ಟು ಹೋಗುತ್ತಾನೆ. ತಂದೆ ಇಲ್ಲದೆ ತಬ್ಬಲಿಯಾದ ಮೂರು ಹೆಣ್ಣು ಮಕ್ಕಳನ್ನು ಹೆಗಲಿಗೆ ಕಟ್ಟಿಕೊಂಡು, ಅವರಿಗೆ ಬದುಕಿನ ದಾರಿ ತೋರಿಸಲು ಹೋರಾಡುವ ದಿಟ್ಟ ಮಹಿಳೆಯ ಕಥೆಯೇ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ.

PUTTAKKANA MAKKALU (5)

ಕನ್ನಡಿಗರ ಅಚ್ಚುಮೆಚ್ಚಿನ ಝೀ ಕನ್ನಡ ವಾಹಿನಿಯಲ್ಲಿ ಸಂಜೆ 6-30 ಕ್ಕೆ ಪ್ರಸಾರವಾಗುವ ಅತ್ಯಂತ ಯಶಸ್ವಿ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು'. ಪ್ರಸಾರದ ಮೊದಲ ವಾರದಲ್ಲಿ ಅತೀ ಹೆಚ್ಚು, ಅಂದರೆ 13.5 ಟಿ.ಆರ್.ಪಿ ಪಡೆದು ಕನ್ನಡಿಗರ ಮನಸುಗಳನ್ನ ಗೆದ್ದ ಖ್ಯಾತಿ ಈ ಧಾರಾವಾಹಿಯದ್ದು. ಇದೀಗ 900 ಸಂಚಿಕೆಗಳನ್ನು ಪೂರೈಸಿ ಸಾವಿರ ಸಂಚಿಕೆಗಳತ್ತ ಹೆಜ್ಜೆ ಇಡುತ್ತಿದ್ದರೂ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳದೆ ಮುನ್ನುಗ್ಗುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ