- ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: 'ಲ್ಯಾಂಡ್ ಲಾರ್ಡ್‌
ನಿರ್ಮಾಣ: ಕೆ.ವಿ. ಸತ್ಯಪ್ರಕಾಶ್, ಹೇಮಂತ್ ಗೌಡ ಕೆ.ಎಸ್.
ನಿರ್ದೇಶನ: ಜಡೇಶ್ ಕೆ. ಹಂಪಿ
ತಾರಾಂಗಣ: ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ. ಶೆಟ್ಟಿ, ರಿತನ್ಯಾ ವಿಜಯ್, ಶಿಶಿರ್ ಬೈಕಾಡಿ, ಉಮಾಶ್ರೀ ಮುಂತಾದವರು
ರೇಟಿಂಗ್:  3.5/5

ಜಮೀನ್ದಾರ ಹಾಗೂ ಕೂಲಿ ಕಾರ್ಮಿಕರ ನಡುವಿನ ಸಂಘರ್ಷದ ಕಥೆ ಹೊತ್ತು ಬಂದ ಚಿತ್ರ 'ಲ್ಯಾಂಡ್ ಲಾರ್ಡ್‌'. ಹಾಗಂತ ಇಲ್ಲಿ ಬರಿ ಹೋರಾಟದ ಕತೆಯಷ್ಟೇ ಇಲ್ಲ. ಶಿಕ್ಷಣ, ಸಮಾನತೆ, ಕಾನೂನಿನ ಅರಿವು ಮೂಡಿಸಿವ ಅಂಶಗಳಿವೆ. ಮಣ್ಣಿನ ಕಥೆಗಳನ್ನು ಹೆಕ್ಕಿ ಸಿನಿಮಾ ಮಾಡುತ್ತಾ ಬರುತ್ತಿರುವ ನಿರ್ದೇಶಕ ಜಡೇಶ್ ಕೆ ಹಂಪಿ ಇದರಲ್ಲೂ ನಮ್ಮ ಮಣ್ಣಿನ ಕಥೆಯನ್ನು ಹೇಳುತ್ತಿದ್ದಾರೆ. ಬಡವ ಶ್ರೀಮಂತ ಎಂಬ ಬೇದಭಾವದಲ್ಲಿ ಹೇಗೆ ಒಂದು ಕುಟುಂಬ ಹೋರಾಡಿ ತನ್ನ ಅಸ್ಥಿತ್ವ ಉಳಿಸಿಕೊಂಡು, ಹಳ್ಳಿಯ ಜನರೊಂದಿಗೆ ನಿಲ್ಲುತ್ತದೆ ಎಂಬುದು ಈ ಸಿನಿಮಾದಲ್ಲಿ ನೋಡಬಹುದು.

ರಾಮದುರ್ಗ ಎಂಬ ಹಳ್ಳಿಯ ಜಮೀನ್ದಾರ (ಶರತ್ ಲೋಹಿತಾಶ್ವ) ತನ್ನ ಮನೆಯ ಜೀತದಾಳಾಗಿದ್ದ ರಾಚಯ್ಯನ ತಂದೆಗೆ ಎರಡು ಎಕರೆ ಜಾಗ ಕೊಡುವುದಾಗಿ ಹೇಳಿರುತ್ತಾನೆ. ಆ ಆಳು ಹಲವು ವರ್ಷ ಜಮೀನ್ದಾರ ಮನೆಯಲ್ಲಿ ದುಡಿದು ಸತ್ತರು ಜಮೀನು ಕೊಡುವುದಿಲ್ಲ. ಹೆಣದ ಸಮೇತ ಜಮೀನು ಕೇಳಲು ರಾಚಯ್ಯ (ದುನಿಯಾ ವಿಜಯ್) ತಾಯಿ (ಉಮಾಶ್ರೀ) ಬಂದಾಗ, ಜಮೀನ್ದಾರ 'ನಿಮ್ಮಂತ ಕೂಲಿಗಳಿಗೆ ಭೂಮಿ ಯಾಕೆ ನೀವು ಆಳಾಗಿಯೇ ಉಳಿಯಬೇಕು ನಮ್ಮ ಜೊತೆ ಕುಳಿತುಕೊಳ್ಳಬಾರದು' ಎಂದು ತಾಯಿ-ಮಗನನ್ನು ಹೊರ ಹಾಕುತ್ತಾನೆ. ಆಗ ರಾಚಯ್ಯನ ತಾಯಿ ಮಗನಿಗೆ 'ನೀನು ಸ್ವಂತ ಜಮೀನು ಮಾಡಿ, ನಾನು ತುತ್ತು ನೀಡಬೇಕು. ಅಲ್ಲಿಯವರೆಗೂ ನಿನ್ನ ಜೊತೆ ನಾನು ಮಾತನಾಡಲ್ಲ' ಎಂದು ಶಪಥ ಮಾಡುತ್ತಾಳೆ. ಅಲ್ಲಿಂದ ರಾಚಯ್ಯನ ಜಮೀನು ಪಡೆಯುವ ಹೋರಾಟ ಶುರು. ರಾಚಯ್ಯ ಜಮೀನು ಗಳಿಸುತ್ತಾನಾ? ತಾಯಿ-ಮಗ ಮಾತಾಡುತ್ತಾರಾ? ಏನೆಲ್ಲಾ ಆಗುತ್ತೆ ಎಂಬುದಕ್ಕೆ ಸಿನಿಮಾ ನೋಡಲೇ ಬೇಕು.

image

'ಲ್ಯಾಂಡ್ ಲಾರ್ಡ್‌' ಒಂದು ಅಚ್ಚುಕಟ್ಟಾದ ನಿರೂಪಣೆ ಇರುವ ನಮ್ಮ ಮಣ್ಣಿನ ಕಥೆಯ ಚಿತ್ರ. ಇದರಲ್ಲಿ ಬರಿ ಸಂಘರ್ಷದ ಕಥೆಯಷ್ಟೇ ಅಲ್ಲ. ಶ್ರೀಮಂತರ ದರ‍್, ಬಡವರ ಹಸಿವು, ಪೊಲೀಸ್ ವ್ಯವಸ್ಥೆ, ರಾಜಕೀಯ ಎಲ್ಲ ಅಂಶಗಳಿವೆ. ಮೇಲ ನೋಟಕ್ಕೆ ಇದೊಂದು ಆಕ್ಷನ್ ಸಿನಿಮಾ ಎನಿಸಿದರೂ ಭಾವನಾತ್ಮಕವಾಗಿ ಸಿನಿಮಾ ಜನರಿಗೆ ಇಷ್ಟವಾಗುತ್ತದೆ. ಅದರಲ್ಲೂ ಕಲಾವಿದರ ನಟನೆಗೆ ಹೆಚ್ಚಿನ ಅಂಕ ನೀಡಬೇಕು. ಮುಖ್ಯ ಪಾತ್ರಗಳಲ್ಲಿ ವಿಜಯ್ ಕುಮಾರ್, ರಚಿತಾ ರಾಮ್ ಅಭಿನಯ ಸೂಪರ್‌. ಅಲ್ಲದೆ ಜಮೀನ್ದಾರನಾಗಿ ರಾಜ್ ಬಿ. ಶೆಟ್ಟಿ ಅಭಿನಯ ಮತ್ತೊಂದು ಹಂತದಲ್ಲಿದೆ. ರಾಚಯ್ಯ, ನಿಂಗವ್ವ (ರಚಿತಾ ರಾಮ್)ರ ಮಗಳಾಗಿ ರಿತನ್ಯಾ ವಿಜಯ್ ಮೊದಲ ಚಿತ್ರವಾದರೂ ಸುಂದರ ಅಭಿನಯ ಮಾಡಿದ್ದಾರೆ.

ಆ ಮೂಲಕ ರಿತನ್ಯ ಅಭಿನಯದಲ್ಲಿ ತಂದೆಯನ್ನೆ ಮಿರಿಸಬಲ್ಲಳು ಎನ್ನಬಹುದು. ಉಳಿದ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಈ ಸಿನಿಮಾದ ಕಥೆಗೆ ತಕ್ಕಂತೆ ಬಹುಕೋಟಿ ಬಂಡವಾಳ ಹಾಕಿದ ನಿರ್ಮಾಪಕ ಸತ್ಯಪ್ರಕಾಶ್ ಹಾಗೂ ಹೇಮಂತ್ ಗೌಡ ಚಿತ್ರ ನಿರ್ಮಾಣದಲ್ಲಿ ಸಾರಥಿ ನಂತರ ಮತ್ತೊಮ್ಮೆ ಭೆಷ್ ಎನಿಸಿಕೊಳ್ಳುತ್ತಾರೆ. ಇನ್ನು ಚಿತ್ರದಲ್ಲಿ ಸಂಗೀತ, ಛಾಯಾಗ್ರಹಣ ಪ್ರಮುಖ ಪಾತ್ರವಾಗಿವೆ. ಪ್ರಾರಂಭದಲ್ಲಿ ಚಿತ್ರ ನಿರೂಪಣೆ ಸ್ವಲ್ಪ ಸ್ಲೋ ಎನಿಸಿದರೂ, ವಿಜಯ್ ಪಾತ್ರ ಎಂಟ್ರಿಯಾದ ಮೇಲೆ ವೇಗ ಪಡೆಯುತ್ತದೆ. ಮೊದಲ ಭಾಗದಲ್ಲಿ ಮುಗ್ದನಾಗಿ ಗಮನ ಸೇಳೆವ ರಾಚಯ್ಯ ಎರಡನೇ ಭಾಗದಲ್ಲಿ ರಕ್ತವನ್ನೆ ಹರಿಸಿದ್ದಾನೆ. ಒಟ್ಟಿನಲ್ಲಿ 'ಲ್ಯಾಂಡ್ ಲಾರ್ಡ್‌' ಒಂದು ಒಳ್ಳೆಯ ಕಥೆ, ಸುಂದರ ನಿರೂಪಣೆ ಇರುವ ಸಿನಿಮಾ ಎನ್ನಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ