OTT ಗೆ ಮರಳಿದ ರಾಧಿಕಾ

ಒಂದು ಕಾಲದಲ್ಲಿ ವೆಬ್‌ ಸೀರೀಸ್‌ ಅಂದ್ರೆ ರಾಧಿಕಾ ಆಸ್ಮಿಗೆ ಆಲ್ ಇನ್‌ ಆಲ್ ಆಗಿತ್ತು. ರಾಧಿಕಾಳ ಶೂಟಿಂಗ್‌ ಡೇಟ್ಸ್ ನಿಶ್ಚಿತಗೊಳಿಸಿಕೊಂಡ ನಂತರವೇ ವೆಬ್‌ ಸೀರೀಸ್‌ನ ಚಿತ್ರದ ಇತರ ಕೆಲಸ ಶುರುವಾಗುತ್ತಿತ್ತು. ಅದೇನಾಯ್ತೋ ಏನೋ.... ಕ್ರಮೇಣ ರಾಧಿಕಾ OTT ಯಿಂದ ದೂರ ಸರಿದಳು. ಈಗ ಅವಳ ಫ್ಯಾನ್ಸ್ ಗೆ ಒಂದು ಗುಡ್‌ ನ್ಯೂಸ್‌ ಎಂದರೆ, ಅವಳು `ಘೋಲ್‌' ಚಿತ್ರದಲ್ಲೂ ನಾಯಕಿ ಆಗಿರುತ್ತಾಳೆ ಅಂತ. ಈ ಹೊಸ ಚಿತ್ರದ ಪೋಸ್ಟರ್‌ನಲ್ಲೇನೋ ರಾಧಿಕಾ ಜಬರ್ದಸ್ತ್ ಆಗಿದ್ದಾಳೆ, ಆದರೆ ಈ ಸೀರಿಸ್‌ನ ಕಥೆ ಎಷ್ಟು ಗಟ್ಟಿ ಎಂದು ಕಾದು ನೋಡಬೇಕಷ್ಟೆ.

ದೇಸಿ ಗರ್ಲ್ ನ್ನು ಮುತ್ತಿದವರಾರು?

pc_1

ಪ್ರಿಯಾಂಕಾ ಹಾಲಿವುಡ್‌ಗೆ ಹಾರಿ ಎಲ್ಲೇ ಹೋಗಲಿ, ನಮ್ಮ ದೇಶದ ಮೀಡಿಯಾದಲ್ಲಿ ಸದಾ ಚರ್ಚೆಯಲ್ಲುಳಿಯುತ್ತಾಳೆ. ಈ ಹೊಸ ಪ್ರಕರಣ ರೈತರ ಆಂದೋಲಕ್ಕೆ ಸಂಬಂಧಿಸಿದ್ದು. ಇದೀಗ ಸೋಶಿಯಲ್ ಮೀಡಿಯಾ ಹೆಸರಲ್ಲಿ ಖ್ಯಾತ ಸೆಲೆಬ್ರಿಟಿಗಳು ಇದರೊಂದಿಗೆ ತಳುಕು ಹಾಕಿಕೊಂಡಿದ್ದಾರೆ. ಅಡಲ್ಟ್ ಚಿತ್ರಗಳ ಮಿಯಾ ಖಲೀಫಾ ಸಹ ಅದರಲ್ಲೊಬ್ಬಳು. ಮಿಯಾ ಪ್ರಿಯಾಂಕಾಳ ಕುರಿತು ಏನೆಂದು ಕಿಚಾಯಿಸಿದ್ದಾಳೆ ರೈತರ ಆಂದೋಲನದ ಕುರಿತಾಗಿ ಇಷ್ಟೆಲ್ಲ ರಾದ್ಧಾಂತ ನಡೆಯುತ್ತಿದ್ದರೆ ಪ್ರಿಯಾಂಕಾ ಮೌನವಾಗಿರುವುದು ಎಂದರೆ, ಬೈರೂತ್‌ನಲ್ಲಿ ಶಕೀರಾ ನಡೆದ ಅನ್ಯಾಯದ ವಿರುದ್ಧ ತೆಪ್ಪಗಿದ್ದಂತೆ! ಅಂದಹಾಗೆ ಮಿಯಾ ಸಹ ಬಾಲಿವುಡ್‌ ಚಿತ್ರಗಳಲ್ಲಿ ನಟಿಸಿ, ಮತ್ತೊಬ್ಬ ಸನ್ನೀ ಆಗ ಬಯಸುತ್ತಿದ್ದಾಳಂತೆ, ಆದರೆ ಬಾಲಿವುಡ್‌ ಪಂಡಿತರು, ಇದೆಲ್ಲ ಅವಳ ಸ್ಟಂಟ್‌ ಅಷ್ಟೇ ಎಂದು ಖಂಡಿಸುತ್ತಾರೆ.

ಶಿಲ್ಪಾಳ ಗುಟ್ಟು ಇದೀಗ ರಟ್ಟು!

shilpa1

ಅಯ್ಯೋ..... ಇದು ಅವಳ ಖಾಸಗಿ ಜೀವನದ ಕುರಿತಾದುದಲ್ಲ, ಅವಳ ಪತಿ ರಾಜ್‌ ಕುಂದ್ರಾ ಕುರಿತಾದುದು. ಮಾಡೆಲ್ ‌ಸಾಗರಿಕಾ ಶೋನಾ ಸುಮನ್‌ ರಾಜ್‌ಕುಂದ್ರಾ ಕುರಿತು, ಆತ ಒಂದು ಅಡೆಲ್ಟ್ ವೀಡಿಯೋ ರಾಕೆಟ್‌ನ ಭಾಗ ಎಂದು ಆರೋಪಿಸಿದ್ದಾಳೆ. ಬಾಲಿವುಡ್‌ನಲ್ಲಿ ಇತ್ತೀಚೆಗೆ ಪೋರ್ನ್‌ ಚಿತ್ರಗಳ ಅವಾಂತರ ಹೆಚ್ಚಾಗಿದೆ. ಇದೇ ಪ್ರಕರಣದಲ್ಲಿ ನಟಿ ಗಮನಾ ಸಿಷ್ಟಾಳನ್ನು ಬಂಧಿಸಲಾಗಿದೆ. ಆದರೆ ಈ ಕೊಚ್ಚೆಯಿಂದ ರಾಜ್‌ ಹೊರಬರುವುದು ಹೇಗೆ ಅಥವಾ ಆತ ನಿಜಕ್ಕೂ ತಪ್ಪಿತಸ್ಥನೇ ಎಂಬುದು ಇದರ ಸಂಪೂರ್ಣ ಪರಿಶೀಲನೆ ಆಗುವವರೆಗೂ ತಿಳಿಯುವುದಿಲ್ಲ. ಇಂಥ ಸೆಲೆಬ್ರಿಟಿಗಳು ಇದರಲ್ಲಿ ಸಿಲುಕಬೇಕೇಕೆ?

ಮನೋಜ್‌ ಈಗ ಇತಿಹಾಸ ತಿಳಿಸುತ್ತಾರಾ?

manoj_1

ತನ್ನ ಅದ್ಭುತ ನಟನೆಯಿಂದ ಖ್ಯಾತಿವೆತ್ತ ಮನೋಜ್‌ ಬಾಜಪೈ, ಇನ್ನಷ್ಟು ಸಾಧನೆಗೆ ತೊಡಗಿದ್ದಾರೆ. ಇದೀಗ ಮನೋಜ್ ಕಿರುತೆರೆಯಲ್ಲಿ ಒಂದು ಹೊಸ ಶೋ ಹೋಸ್ಟ್ ಮಾಡಲಿದ್ದಾರೆ. ಡಿಸ್ಕವರಿ ಪ್ಲಸ್‌ನ `ಸೀಕ್ರೆಟ್ಸ್ ಆಫ್‌ ಸಿನೋಲಿ' ಎಂಬ ಇದರಲ್ಲಿ ಇತಿಹಾಸದ ಪುಟಗಳ ವಿಶ್ಲೇಷಣೆ ಆಗಲಿದೆಯಂತೆ. ಇದನ್ನು ವಿವರಿಸಲು ವೀಕ್ಷಕರೆದುರು ಮನೋಜ್‌ಬರಲಿದ್ದಾರೆ. ಮತ್ತೊಂದು ಸುದ್ದಿ ಎಂದರೆ, ಇದಕ್ಕಾಗಿ ಆತ 1 ತಿಂಗಳು ಅಂಡರ್‌ ಗ್ರೌಂಡ್‌ ಆಗಿದ್ದರಂತೆ. ಆದರೆ ಅದಕ್ಕೂ ಈ ಶೋಗೂ ಏನೂ ಸಂಬಂಧ ಇಲ್ಲವಂತೆ. ಅದನ್ನು ಆತ ಮುಂದಿನ ಚಿತ್ರದ ತಯಾರಿಗಾಗಿ ಮಾಡಿಕೊಂಡಿದ್ದಂತೆ. ಪ್ರತಿಭಾವಂತರೆಂದರೆ ಹೀಗೆ, ಪರ್ಫೆಕ್ಟ್ ತಯಾರಿ ಇಲ್ಲದೆ ವೇದಿಕೆ ಏರುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ