ಬಂತಿದೋ ಆಲಿಯಾ ಕಾಲ

ರಣಬೀರ್‌ ಕಪೂರ್‌ಗೆ ಕೊರೋನಾ ಆದಾಗಿನಿಂದ, ದುಃಖತಪ್ತೆ ಆಲಿಯಾ, ನಕ್ಕಿದ್ದೇ ಕಡಿಮೆ. ಈಗ ಸಣ್ಣ ಅವಕಾಶ ಸಿಕ್ಕಿದೆ, ಅದೇನಂತೀರಾ? ಅವಳ ಇತ್ತೀಚಿನ `ಗಂಗೂಬಾಯಿ' ಚಿತ್ರದ ಟ್ರೇಲರ್‌ ಔಟಾದದ್ದೇ ಬಹಳ ಜನ ಅದನ್ನು ಮೆಚ್ಚಿ ಹೊಗಳಿದ್ದಾರೆ! ಇದೀಗ ಇವಳ ಮತ್ತೊಂದು ಹೊಸ ಚಿತ್ರದ ಫ್ರೆಶ್‌ ಲುಕ್ಸ್ ರಿಲೀಸ್‌ ಆಗಿ, ಅದು ಎಲ್ಲರ ವಾಹ್‌! ವಾಹ್‌! ಗಿಟ್ಟಿಸಿದೆ. ಇದೀಗ ಇವಳ ಒಂದಲ್ಲ 2 ಚಿತ್ರಗಳು ರಿಲೀಸ್‌ಗೆ ರೆಡಿ! ಅದರ ನಿರ್ದೇಶಕರ ತಾಕತ್ತು ಗಮನಿಸಿದರೆ 2021ರಲ್ಲಿ ಆಲಿಯಾ ಗೆದ್ದಳೆಂದೇ ಲೆಕ್ಕ!

ಸೋನಾಕ್ಷಿಗೆ ದಕ್ಕಿದ OTT ಆಸರೆ

sonakshi1

ಪಾಪ, ಸೋನಾ ಬೇಬಿ ಕೇವಲ ಬಾಲಿವುಡ್‌ನ ಬೆಳ್ಳಿ ತೆರೆಯಿಂದ ಮಾತ್ರವಲ್ಲ, ಸ್ವಾರಸ್ಯಕರ ಗಾಸಿಪ್‌ಗಳಿಲ್ಲದೆ ಜನರ ನೆನಪಿನಿಂದಲೂ ದೂರ ಸರಿದಿದ್ದಳು. ಈ ಮಧ್ಯೆ ಆಕಸ್ಮಿಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿ ಸೋನಾ ಮಿಂಚಿದ್ದೂ ಮಿಂಚಿದ್ದೆ! ತಕ್ಷಣ ಸುದ್ದಿಗಾರರು ಇದರ ಮೂಲ ಅರಸುತ್ತಾ ಹೊರಟರು. ಅದರಿಂದ ತಿಳಿದದ್ದು ಎಂದರೆ, ಸೋನಾ ಇತ್ತಿಚೆಗೆಗೆ OTTಗಾಗಿ ಹೊಸ ಪ್ರಾಜೆಕ್ಟ್ ಶುರು ಮಾಡಿದ್ದಾಳಂತೆ! ಇದು ಅದರದೇ ಲುಕ್‌. ಪಾಲಿಗೆ ಬಂದದ್ದೇ ಪಂಚಾಮೃತ, ಹಿರಿತೆರೆ ಇಲ್ಲದ್ದಿದರೇನಂತೆ..... ಸೋನಾಗೆ OTT ಕೃಪಾಕಟಾಕ್ಷವಾದರೂ ಸಿಕ್ಕಿತಲ್ಲ ಜನರನ್ನು ಮನೆಯಲ್ಲೇ ತಲುಪಲು......

ವಿಚ್ಛೇದನ ತಪ್ಪಿಸಲು ಟ್ವಿಂಕಲ್ ಹೇಳಿದ ಉಪಾಯ

akshye_or_twinkale1

ಬಾಲಿವುಡ್‌ನಲ್ಲಿ ಏನೋ ಒಂದು ಕಾರಣಕ್ಕೆ ಜಗಳವಾಡಿ ಬೇರಾಗದ ಜೋಡಿ ಅಪರೂಪವೆಂದೇ ಹೇಳಬೇಕು. ಅಂಥ ಒಂದು ಅಪೂರ್ವ ಸುಖೀ ಜೋಡಿ ಎಂದರೆ ಅಕ್ಷಯ್‌ ಟ್ವಿಂಕಲ್ ಖನ್ನಾರದು. ಇತ್ತೀಚೆಗೆ ಟ್ವಿಂಕಲ್ ಸೋಶಿಯಲ್ ಮೀಡಿಯಾದಲ್ಲಿ, ಗಂಡನ ಜೊತೆ ತನ್ನ ಫೋಟೋ ಶೇರ್‌ ಮಾಡುತ್ತಾ, ಎಲ್ಲಾ ಜೋಡಿಗಳೂ ಇದೇ ತರಹ ನಿಜ ಜೀವನದಲ್ಲೂ ಸದಾ ನಸುನಗುತ್ತಿದ್ದರೆ, ಅಂದ್ರೆ ಪ್ರತಿ ಸಲ ಫೋಟೋಗೆ ಪೋಸ್‌ ಕೊಡುವಾಗ ನಗುವಂತೆ, ಆಗ ಮಾತ್ರ ಹೆಚ್ಚುತ್ತಿರುವ ವಿಚ್ಛೇದನಗಳ ಸಂಖ್ಯೆ ತಗ್ಗಬಹುದು ಎಂದಿದ್ದಾಳೆ. ಮಾತೇನೋ ಸರಿ, ಆದರೆ ಇಂಥ ಸಲಹೆಗಳನ್ನು ಈವರೆಗೂ ಅದೆಷ್ಟು ಲಕ್ಷಾಂತರ ಜನ ಕೊಟ್ಟಿದ್ದಾರೋ.....? ನಮ್ಮ ಜನ ಕಿವಿಗೊಡುತ್ತಾರೆಯೇ?

ಬೆಂಗಾಡಿನ ಬಾಲಿವುಡ್‌ನಲ್ಲಿ ಚಿಮ್ಮಿದ ಓಯಸಿಸ್‌ ರೂಹಿ

roohi1

ಕೊರೋನಾ ಕಾರಣದಿಂದ ಎಲ್ಲಾ ಉದ್ಯಮಗಳೂ ಬೆಂಗಾಡಾಗಿರುವಂತೆ ಬಾಲಿವುಡ್‌ನಲ್ಲೂ ಸಹ ಇತ್ತೀಚೆಗೆ ಬಿಡುಗಡೆಯಾದ `ರೂಹಿ' ಚಿತ್ರ ಓಯಸಿಸ್‌ ಎಂದೇ ನಿರೂಪಿತವಾಗಿದೆ! ರಿಲೀಸ್‌ ಆದ ಮೊದಲ ವಾರಾಂತ್ಯದಲ್ಲೇ ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ 13 ಕೋಟಿಗೂ ಹೆಚ್ಚಿನ ಹಣ ಬಾಚಿದೆ. ಮುಂದಿನ ದಿನಗಳೂ ಹೀಗೇ ಇದ್ದರೆ, ಈ ಚಿತ್ರ 20-25 ಕೋಟಿ ಗಳಿಸುವುದರಲ್ಲಿ 2 ಮಾತಿಲ್ಲ. ಹೀಗಾಗಿ ಚಿತ್ರದ ತಾರಾ ಬಳಗಾದ ರಾಜ್‌ಕುಮಾರ್‌ ರಾವ್‌, ಜಾಹ್ನವಿ ಕಪೂರ್‌, ಹಿಮಾಂಶುರಿಗೆ ಅಚ್ಛೇ ದಿನ್‌ ಬಂತೆಂದೇ ಲೆಕ್ಕ. ರಾಜಕುಮಾರ್‌ ಹಿಟ್‌ ನೀಡುತ್ತಲೇ ಇದ್ದಾನೆ, ಆದರೆ ಮುಳುಗುವ ದೋಣಿ ಏರಿದ್ದ ಜಾಹ್ನವಿ (ಶ್ರೀದೇವಿ ಮಗಳು), ಹಿಮಾಂಶು ಸಹ ಕೆರಿಯರ್‌ನ ದಡ ಕಾಣುವಂತಾಗಿದೆ.

ಹೃತಿಕ್V/S ಪ್ರಭಾಸ್‌

retik1

ಅ...ಯ್ಯ....ಯ್ಯೋ ! ಇವರಿಬ್ಬರ ಮಧ್ಯೆ ಏನಪ್ಪ ಜಗಳ ಅಂದುಕೊಳ್ಳಬೇಡಿ. ಅಸಲಿಗೆ ಟೈಗರ್‌ನ ಸೂಪರ್‌ ಹಿಟ್‌ ಚಿತ್ರ `ವಾರ್‌' ಇದೀಗ `ವಾರ್‌' ಆಗಿ ಶುರುವಾಗಲಿದೆ. ಇದನ್ನು ಮೊದಲಿನ ಚಿತ್ರಕ್ಕಿಂತ ಹೆಚ್ಚು ರೋಮಾಂಚಿತಗೊಳಿಸಲು, ಅಂದ್ರೆ ಮೊದಲಿಗಿಂತಲೂ ಹೆಚ್ಚು ಮಾರಾಮಾರಿ ತುಂಬಿಸಲು, ಘಟಾನುಘಟಿಗಳೇ ಬೇಕಲ್ಲವೇ? ಹೀಗಾಗಿ ಬಾಹುಬಲಿ ಪ್ರಭಾಸ್‌ನನ್ನು ಚಿತ್ರದ ಹೀರೋ ಹೃತಿಕ್‌ ಜೊತೆ ಹಣಾಹಣಿಗೆ ಇಳಿಸಲಾಗಿದೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ