ಹುಮಾ ಆದಳು ರಾಬಡೀ

ಹುಮಾ ಇದೀಗ ಒಂದು ವೆಬ್‌ ಸೀರೀಸ್‌ನಲ್ಲಿ `ಮಹಾರಾಣಿ' ಆಗಿ ಮಿಂಚುತ್ತಿದ್ದಾಳೆ. ಇದರಲ್ಲಿ ಇವಳು ಅಪ್ಪಟ ದೇಸೀ ಲುಕ್ಸ್ ನೊಂದಿಗೆ ರಾಬಡೀ ದೇವಿ ತರಹ ಕಾಣಿಸುತ್ತಿದ್ದಾಳೆ. ಬಲ್ಲ ಮೂಲಗಳು ಈ ಚಿತ್ರ, ಬಿಹಾರದ ಮಾಜಿ ಮುಖ್ಯ ಮಂತ್ರಿ ಲಾಲೂ ಪ್ರಸಾದ್‌ ಯಾದವ್ ರ ಪತ್ನಿ ರಾಬಡೀ ದೇವಿ (ಈಕೆಯೂ ಮಾಜಿ ಮುಖ್ಯಮಂತ್ರಿಯೇ!) ಬಯೋಪಿಕ್‌ ಎಂದೇ ಹೇಳುತ್ತಿವೆ. ಆದರೆ ಕೋರ್ಟ್‌ ‌ಪ್ರಕಾರ ಯಾವುದೇ ರಾಜಕೀಯ ಧುರೀಣರ ಕಥೆ ಯಥಾವತ್‌ ಹೇಳುವಂತಿಲ್ಲ. ಆದ್ದರಿಂದ ಈಕೆಗೆ ಈ ಚಿತ್ರದಲ್ಲಿ ಹುಮಾಳ ಪಾತ್ರದ ಹೆಸರು ರಾಣಿ ಭಾರತಿ ದೇವಿ ಅಂತಿದೆ. ಅದೇನೇ ಇರಲಿ, ಹುಮಾ ಅಂತೂ ರಾಬಡೀ ದೇವಿಯನ್ನು ತನ್ನ ಪಾತ್ರದಲ್ಲಿ ಆವಾಹಿಸಿಕೊಂಡುಬಿಟ್ಟಿದ್ದಾಳೆ! ಇವಳ ನಟನೆ ಹೇಗೆ ಎಂಬದನ್ನು ಈ ಚಿತ್ರದ ಯಶಸ್ಸು ಹೇಳಬೇಕಷ್ಟೆ.

ಜ್ಯಾಸ್ಮಿನ್‌ ಹೊರಟಳು ದುಬೈ ಟೂರಿಗೆ

jasmin

ಹಿಂದಿಯ `ಬಿಗ್‌ ಬಾಸ್‌' ಸೀರೀಸ್‌ನ ಭಾಗವಾಗಿದ್ದ ಜ್ಯಾಸ್ಮಿನ್‌ ಭಸೀನ್‌ ಇತ್ತೀಚೆಗೆ ತನ್ನ ಬಾಯ್ ಫ್ರೆಂಡ್‌ ಅಲೀ ಗೋವಿ ಜೊತೆ ದುಬೈನ ಮರುಭೂಮಿಯಲ್ಲಿ ಮರಳಿನಲ್ಲಿ ಚಿನ್ನಾಟವಾಡುತ್ತಿದ್ದಾಳೆ. ಅಸಲಿ ವಿಷಯ ಈ ಅಲಿಜ್ಯಾಸ್ಮಿನ್‌ ಇಬ್ಬರ ಬಳಿಯೂ ಹೇಳಿಕೊಳ್ಳುವಂಥ ಚಿತ್ರಗಳಿಲ್ಲ. ಇದರ ಮೇಲೆ ಕೊರೋನಾ ಮಾರಿಯ ಕಾಟ..... ಇಡೀ ಬಾಲಿವುಡ್‌ ಕಂಗೆಟ್ಟಿದೆ. ಇಂಥ ಕಷ್ಟಕಾಲದಲ್ಲಿ ಇವರು ಕೆರಿಯರ್‌ ಕಡೆ ಗಮನಹರಿಸದೆ ಲವ್ವಿಡವ್ವಿಯಾಗಿ ಮರಳಾಟ ಆಡುತ್ತಿದ್ದರೆ, ಮರುಭೂಮಿಯಲ್ಲಿ ಓಯಸಿಸ್ ಕಾಣಿಸುವಷ್ಟೇ ಕಷ್ಟ ಇವರಿಗೆ ಮುಂದಿನ ಚಿತ್ರ ಸಿಗುವುದು. ಸಮಯ ಇರುವಾಗಲೇ ಎಚ್ಚೆತ್ತುಕೊಂಡರೆ ಬದುಕಿಕೊಂಡಾರು!

sunil

ಕೆರಿಯರ್‌ ಭದ್ರಪಡಿಸಿಕೊಂಡ ಸುನೀಲ್ ‌ದಿ. ಜಸ್‌ ಪಾಲ್ ‌ಭಟ್ಟಿಯವರ ಜೊತೆ ತನ್ನ ಕೆರಿಯರ್‌ ಪ್ರಾರಂಭಿಸಿದ ಡಾ. ಗುಲಾಟಿ ಅಂದ್ರೆ ಸುನೀಲ್ ಗ್ರೋವರ್‌ಗೆ ಇಂಡಸ್ಟ್ರಿಯಲ್ಲಿ ಸ್ಥಾನ ಸುಭದ್ರವಾಗಿದೆ, ಆದರೆ ಈ ಮಟ್ಟಕ್ಕೇರಲು ಆತ ಪಟ್ಟ ಪಾಡು ಅಷ್ಟಿಷ್ಟಲ್ಲ.

ದಬಂಗ್‌ ಖಾನ್‌

akshay-khanna

ಅಕ್ಷಯ್‌ ಕುಮಾರ್‌ರಂಥ ದಿಗ್ಗಿಜರ ಜೊತೆ ಕೆಲಸ ನಿರ್ವಹಿಸಿರುವ ಸುನೀಲ್‌, `ತಾಂಡ್‌' ಚಿತ್ರದ ನಂತರ OTTಯಲ್ಲಿ ಶೈನ್‌ಆಗ್ತಿದ್ದಾನೆ. ಇತ್ತೀಚೆಗೆ ಈತನ `ಸನ್‌ ಫ್ಲವರ್‌' ವೆಬ್‌ ಸೀರೀಸ್‌ ಚಿತ್ರದ ಟೀಸರ್‌ಪ್ರಚಂಡ ಯಶಸ್ಸು ಗಳಿಸಿದೆ. ಸುದ್ದಿಗಾರರ ಪ್ರಕಾರ ಈ ಚಿತ್ರದಲ್ಲಿ  ಸುನೀಲ್ ಪಾತ್ರ ಬಹಳ ರೊಮ್ಯಾಂಟಿಕ್‌ ಅಂತೆ. ಇಲ್ಲಿ ಈತನ ಜೊತೆ ರಣವೀರ್‌ ಶೌರಿ, ಆಶಿಶ್‌ ವಿದ್ಯಾರ್ಥಿಗಳಂಥ ನುರಿತ ಕಲಾವಿದರ ದಂಡೇ ಇದೆ. ಈತನ ಪ್ರಗತಿಪರ ಕೆರಿಯರ್‌ ಕಂಡು ಈ ಕಿರುತೆರೆಯ ನಟನ ಸ್ಥಾನ ಬಾಲಿವುಡ್‌ನಲ್ಲಿ ಸುಭದ್ರ ಎಂದೇ ಹೇಳಬಹುದು.

ಶ್ರದ್ಧಾಳ ಮನದಾಸೆ ಏನು?

shradha

ಕೆಲವು ದಿನಗಳ ಹಿಂದೆ ಪ್ರಸಿದ್ಧ ಟಿವಿ ನಟಿ ಶ್ರದ್ಧಾ ಆರ್ಯಾ, ಸೋಶಿಯಲ್ ಮೀಡಿಯಾಗೆ ತನ್ನ ಬ್ಲ್ಯಾಕ್‌ ಬಿಕಿನಿಯ ಫೋಟೋಗಳನ್ನು ಬಿಟ್ಟಿದ್ದೇ ತಡ, ಪಡ್ಡೆಗಳ ವಲಯದಲ್ಲಿ ಕೋಲಾಹಲ ಉಂಟಾಗಿದೆ! ಹಿಂದೆ ಮಾಡಿದ್ದಂತೆಯೇ ಮತ್ತೊಮ್ಮೆ ಗ್ಲಾಮರ್‌ನಿಂದ ಎಲ್ಲರ ಕಣ್ಣು ಕುಕ್ಕುವಂತೆ ಮಿಂಚುತ್ತಿದ್ದಾಳೆ. ಈಗಂತೂ ಇವಳ ಫ್ಯಾನ್ಸ್ ಗೆ, ಶ್ರದ್ಧಾಳ ಮನದಾಸೆ ಏನು? ಎಂಬ ಕನ್‌ಫ್ಯೂಶನ್‌ ಉಂಟಾಗಿದೆ. ಸುದ್ದಿಗಾರರ ಪ್ರಕಾರ ಪ್ರೀತಾ ಮೂಲ ಹೆಸರಿನ ಈ ಶ್ರದ್ಧಾ ಹೀಗೆ ಮಾಡಿ ಬಾಲಿವುಡ್‌ನ ಬಿಗ್‌ನಿರ್ಮಾಪಕರ ಗಮನ ಸೆಳೆಯಲು ಸರ್ಕಸ್‌ ನಡೆಸಿದ್ದಾಳಂತೆ. ಅದೇ ನಿಜವಾಗಿದ್ದರೆ, ಈ ಕೊರೋನಾ ಸಂದರ್ಭದಲ್ಲಿ ಹೀಗಾಡುವುದು ಸರಿಯಲ್ಲ. ನಿರ್ಮಾಪಕರು ಸಿನಿಮಾಗೆ ದುಡ್ಡು ಸುರಿಯೋಣ ಎಂದು ನಿರ್ಧರಿಸುವ ಕಾಲ ಬರುವವರೆಗೂ ಶ್ರದ್ಧಾಳಂಥವರು ಕಾಯದೇ ವಿಧಿ ಇಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ