ಕಮಲ್ ಮಗಳಿಗೂ ಹಣಕಾಸಿನ ಸಮಸ್ಯೆಯೇ?
ಇತ್ತೀಚೆಗೆ ಕಮಲ್ ಮಗಳು ಶೃತಿ ಹಾಸನ್, ಸಂದರ್ಶನ್‌ಒಂದರಲ್ಲಿ ತಾನು ಈ ಕೊರೋನಾ ಮಹಾಮಾರಿಯ ಮಧ್ಯೆಯೂ ರಿಸ್ಕ್ ತೆಗೆದುಕೊಂಡು ನಟಿಸಲು ಕಾರಣ, ತೀವ್ರ ಹಣಕಾಸಿನ ಮುಗ್ಗಟ್ಟು ಎಂದಾಗ ಮೀಡಿಯಾ ಮಂದಿ ಸುಸ್ತಾದರು. ಕಮಲ್ ರಂಥ ಶ್ರೀಮಂತ ದಿಗ್ಗಜರ ಮಗಳಾಗಿ ಈಕೆ ಹೀಗೆ ಹೇಳಿದರೆ ಸಣ್ಣಪುಟ್ಟ ಕಲಾವಿದರ ಪಾಡೇನು ಎಂದು ಎಲ್ಲರೂ ಬೆರಗಾದರು. ಅಸಲಿಗೆ, ಶೃತಿ ಹಣಕಾಸಿಗಾಗಿ ಎಂದೂ ತಂದೆಯನ್ನು ಅವಲಂಬಿಸಿದವಳಲ್ಲ. ಲಿವ್ ಇನ್ ಕಾರಣ ತಂದೆ ಮಗಳು ಪರಸ್ಪರ ವೈಯಕ್ತಿಕ ವಿಷಯಗಳಲ್ಲಿ ತೊಡಗಿಕೊಳ್ಳಲಾರದಷ್ಟು ದೂರವಾಗಿದ್ದಾರೆ. ಆದರೆ ಶೃತಿ ಸ್ವತಂತ್ರಳಾಗಿ, ತನ್ನ ಗಳಿಕೆಯಿಂದ ಬದುಕುವಂಥ ಸ್ವಾವಲಂಬಿ ಎದೆಗಾತಿ!
ಬಾಡಿ ಶೇಮಿಂಗ್ ನಾನು ಸಹಿಸಿದ್ದೇನೆ!
ಈ ಪುರುಷ ಪ್ರಧಾನ ಸಮಾಜದ ಅತಿ ಕೀಳು ಆಲೋಚನೆ ಎಂದರೆ, ತಾವೆಷ್ಟೇ ಕುರೂಪಿ ಆಗಿದ್ದರೂ, ಹೆಣ್ಣಿನಲ್ಲಿ ತುಸು ಕೊರತೆ ಕಾಣಿಸಿದರೆ ಅದನ್ನು ದೊಡ್ಡದಾಗಿ ಮೀಡಿಯಾ ಪೂರ್ತಿ ಬೊಬ್ಬೆ ಹೊಡೆಯುತ್ತಾರೆ. ಇಂಥ ಅಡ್ಡ ಹೆಸರು ಇಡುವ ಕ್ರಮವನ್ನೇ ಬಾಡಿ ಶೇಮಿಂಗ್ ಎನ್ನುತ್ತಾರೆ. ಹಿಂದೆಲ್ಲ ಸಾಮಾನ್ಯ ಮಹಿಳೆಯರು ಇದಕ್ಕೆ ಬಲಿಯಾಗುತ್ತಿದ್ದರು, ಇದೀಗ ಸೆಲೆಬ್ರಿಟಿಗಳೂ ಇದರಿಂದ ಹೊರತಲ್ಲ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಜರೀನ್ ಖಾನ್ ಈ ಬಗ್ಗೆ ಹೇಳಿಕೊಂಡಿದ್ದಾಳೆ, ಬಹು ದಿನಗಳ ಕಾಲ ಬಾಲಿವುಡ್
ನಲ್ಲಿ ಆಕೆ ಇಂಥ ಹೀನಾಯ ಬಾಡಿ ಶೇಮಿಂಗ್ ಸಹಿಸಬೇಕಾಯಿತಂತೆ! ಕತ್ರಿನಾಳಂತೆಯೇ ಕಂಡುಬರುವ ಈಕೆ, ಅವಳ ದೇಹತೂಕದ ಕಾರಣ ಫ್ಯಾಟ್ರೀನಾ ಎಂದು ಟೀಕಿಸುತ್ತಿದ್ದರಂತೆ. ಹಾಗೆ ಹೇಳುವವರಿಗೆ ಇದು ತಮಾಷೆ ಇರಬಹುದು, ಆದರೆ ಅದರಿಂದ ಜರೀನಾಳಂಥೆ ಅದರ ನೋವು ಅನುಭವಿಸದರಿಗೆ ಮಾತ್ರ ಗೊತ್ತಾಗುವುದು.
ಈ ಶೋ ನಿಜಕ್ಕೂ ಐಡಲ್ ಅಂತೀರಾ?
ಇತ್ತೀಚೆಗೆ ಅಮಿತ್ ಕುಮಾರ್ ಸೋನಿ ಟಿವಿಯ `ಇಂಡಿಯನ್ ಐಡಲ್' ಸಿಂಗಿಂಗ್ ಶೋಗೆ ಅತಿಥಿಯಲ್ಲದೆ ಹಾಗೇ ಹೋಗಿದ್ದಾಗ, ಅಲ್ಲಿ ಸ್ಪರ್ಧಿಗಳೆಲ್ಲ ಸೇರಿ ಅವರ ತಂದೆ ದಿ. ಕಿಶೋರ್ ಕುಮಾರ್‌ರಿಗೆ ಗೌರಾವರ್ಪಣೆ ಕಾರ್ಯಕ್ರಮ ನಡೆಸಿಕೊಟ್ಟರು. ಆದರೆ ಶೋ ಮುಗಿದ ತಕ್ಷಣವೇ ಅಮಿತ್ ಕುಮಾರ್ ಫೇಸ್ ಬುಕ್ ಮೂಲಕ, ಇದೊಂದು ಯೂಸ್ ಲೆಸ್, ಅನ್ ಫಿಟ್ ಕಾರ್ಯಕ್ರಮ ಎಂದು ಈ ಶೋ ಮಾನ ಹರಾಜಿಗೆ ಹಾಕಿದರು. ಇದಕ್ಕೆ ಸಂಬಂಧಿಸಿದ ಜನ ಶೋ ಮಾನ ಉಳಿಸಲು ತಕ್ಷಣ ಪ್ರತಿಕ್ರಿಯಿಸಿದರು. ಆದರೆ ಅದು ತಡವಾಗಿತ್ತು. ಟ್ರೋಲಿಗರು ನಾನಾ ರೀತಿಯಲ್ಲಿ ಈ ಶೋವನ್ನು ತೀವ್ಕವಾಗಿ ಖಂಡಿಸಲಾರಂಭಿಸಿದ್ದರು. ಕೆಲವರು ಈ ಶೋ ಪೂರ್ವ ನಿಯೋಜಿತ, ಚಾನೆಲ್ ಹೇಳಿದಂತೆ ಎಲ್ಲರೂ ಗಿಳಿಪಾಠ ಒಪ್ಪಿಸುತ್ತಾರೆ ಎಂದು ಟೀಕಿಸಿದರೆ, ಉಳಿದವರು ಈ ಚಾನೆಲ್ ತನ್ನ ಇಮೇಜ್ ಹೆಚ್ಚಿಸಿಕೊಳ್ಳಲು ಬಡ ಅಭ್ಯರ್ಥಿಗಳನ್ನು ಚೀಪ್ ಆಗಿ ಬಳಸಿಕೊಳ್ಳುತ್ತದೆ ಎಂದು ಖಂಡಿಸಿದರು. ಇಷ್ಟೆಲ್ಲ ಆದ ಮೇಲೆ ಈ ಶೋ ನಿಜಕ್ಕೂ ಐಡಲ್ ಅಂತೀರಾ ಎಂದು ಎಲ್ಲರೂ ಮೂಗು ಮುರಿಯುತ್ತಿದ್ದಾರೆ.
ಹೃತಿಕ್ ಈಗ ಬಯಸುತ್ತಿರುವುದೇನು?
ತಮಿಳು ಮೂಲದ `ವಿಕ್ರಂ ಬೇತಾಳ' ಸೂಪರ್ ಹಿಟ್ ಚಿತ್ರ ಹಿಂದಿಯಲ್ಲಿ ರೀಮೇಕ್ ಆಗಲಿದೆ ಎಂದಾಗ ನಾಯಕನಾಗಲು ಒಪ್ಪಿದ್ದ ಹೃತಿಕ್, ಏನಾಯಿತೋ ಏನೋ.... ಇದಕ್ಕಿದ್ದಂತೆ ಈ ಚಿತ್ರಕ್ಕೆ ಬೆನ್ನು ತೋರಿಸಿದ! ಸುದ್ದಿಗಾರರ ಪ್ರಕಾರ, ಹೃತಿಕ್ ಈ ಕುರಿತಾಗಿ ಅಸಮಂಜಸನಾಗಿದ್ದನಂತೆ. ಏಕೆಂದರೆ ಇದೇ ಸಂದರ್ಭದಲ್ಲಿ ಈತ ತನ್ನ ಡಿಜಿಟಲ್ ಡೆಬ್ಯೂ ಬಗ್ಗೆ ಸಹ ಯೋಚಿಸುತ್ತಿದ್ದ. ಈ ಚಿತ್ರದ ಡೇಟ್ಸ್ ಈತನ OTT ಪ್ರಾಜೆಕ್ಟಿಗೆ ಕ್ಲಾಶ್ ಆಗತೊಡಗಿತು. ಹಾಗಿರುವಾಗ ಹೃತಿಕ್ ಆ ಚಿತ್ರ ಬಿಟ್ಟು ಈ OTT ಗೆ ಮಣೆ ಹಾಕಿದ್ದೇಕೆ? ಏಕೆಂದರೆ ಆತನಿಗೆ ಚೆನ್ನಾಗಿ ಅರಿವಾಗಿದೆ, ಈ ಕೊರೋನಾ ಇಷ್ಟರಲ್ಲಿ ಬಿಟ್ಟು ಹೋಗುವುದಂತ! ಹಾಗಾಗಿ ವಿಧಿಯಿಲ್ಲದೆ OTT ಪ್ರೇಕ್ಷಕ ಪ್ರಭುವಿಗೆ ಶರಣಾಗಿ, ಬರುತ್ತಿರುವ ಸಂಪಾದನೆಗೆ ಮುಳುವಾಗದಂತೆ ಎಚ್ಚರ ವಹಿಸಿದ್ದಾನೆ, ಗುಡ್ ಲಕ್ ಹೃತಿಕ್!