ರಕುಲ್ ಗೆ ಕೋಪ ಬರುವುದೇಕೆ?

ರಕುಲ್ ‌ಪ್ರೀತ್‌ ಗೆ ಇತ್ತೀಚೆಗೆ ಬಹಳ ಕೋಪ ಬಂದಿದೆ. ಅದಕ್ಕೆ ಕಾರಣ ದೇಶದೆಲ್ಲೆಡೆ ಕೇಳಿಬರುತ್ತಿರುವ ಅತ್ಯಾಚಾರ ಪ್ರಕರಣಗಳು. ಈಕೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ಕೋಪವನ್ನು ಕಾರುತ್ತಾ, ಒಂದು ಕಡೆ ದೇಶ ಕೊರೋನಾ ಮಹಾಮಾರಿಯೊಂದಿಗೆ ಹೋರಾಡುತ್ತಿದ್ದರೆ, ಎಷ್ಟೋ ಜನ ವಾರಿಯರ್ಸ್‌ ಆಗಿ ರೋಗಿಗಳ ಸೇವೆಗೆ ಟೊಂಕ ಕಟ್ಟಿದ್ದಾರೆ. ಇನ್ನೊಂದು ಕಡೆ ರೇಪ್‌ ನಂಥ ಅಮಾನವೀಯ ಕುಕೃತ್ಯವೆಸಗುವ ನೀಚರಿದ್ದಾರೆ. ಕೊರೋನಾಗೆ ಬಲಿಯಾದ ಹೆಂಗಸರನ್ನೂ ಬಿಡದೆ ಅವರನ್ನು ಆಕ್ರಮಿಸಿದವರಿಗೆ ಗಲ್ಲು ಶಿಕ್ಷೆಯೂ ಕಡಿಮೆಯೇ! ಇವಳ ಕೋಪವೇನೋ ಸರಿ, ಆದರೆ ನಮ್ಮ ಕಾನೂನು ಕ್ರಮ ಇನ್ನಷ್ಟು ಬಿಗಿಗೊಳ್ಳದ ಹೊರತು ಸಂತ್ರಸ್ತ ಹೆಣ್ಣಿಗೆ ನ್ಯಾಯವೆಲ್ಲಿ?

ಪಲಕ್‌ ಳನ್ನು ಕಂಡವರು ಬೇರೇನು ಕಂಡಾರು?

palak1

ಇವಳಾರು ಅಂತೀರಾ? ಶ್ವೇತಾ ತಿವಾರಿಯ ಮಗಳು ಪಲಕ್‌ ತಿವಾರಿ. ಇನ್ನೂ ಬೆಳ್ಳಿ ತೆರೆ ಮೇಲೆ ಮಿಂಚಿಲ್ಲ, ಆದರೆ ಇವಳ ಫೋಟೋ ಶೂಟ್‌ ವೈರಲ್ ಆಗುತ್ತಿರುವ ಪರಿ ಕಂಡರೆ, ಇಷ್ಟರಲ್ಲಿ ಯಾವುದಾದರೂ ಸಿನಿಮಾ, OTT ಸೀರೀಸ್‌ ನಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ. ನಟನೆಗೆ ಇಳಿಯುವ ಮಂಚೆಯೇ ಇವಳ ಅಭಿಮಾನಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ತಾಯಿಯಂತೆ ಮಗಳು ಎಂಬುದಕ್ಕೆ ಅನ್ವರ್ಥವಾಗಿ ಪಲಕ್‌ ಪರ್ಫೆಕ್ಟ್ ಫಿಟ್‌, ಬ್ಯೂಟಿಫುಲ್ ಎನಿಸಿದ್ದಾಳೆ. ಶ್ವೇತಾಳ ಕೆರಿಯರ್‌ಪರ್ಸನಲ್ ಲೈಫ್‌ ಹೆಚ್ಚು ಏರಿಳಿತ ಕಂಡಿದೆ, ಆದರೆ ಸಿಂಗಲ್ ಮದರ್‌ ಆಗಿ ಆಕೆ ಪಲಕ್‌ ಳನ್ನು ಬೆಳೆಸಿರುವ ಪರಿ ಅದ್ಭುತ! ಆಲ್ ದಿ ಬೆಸ್ಟ್ ಪಲಕ್‌!

ಅಡಕತ್ತರಿಯಲ್ಲಿ ಕತ್ರೀನಾ!

sunil_1

ಕತ್ರೀನಾ ಇತ್ತೀಚೆಗಂತೂ ಹಿರಿಕಿರಿ ತೆರೆ ಇರಲಿ, ಸೋಶಿಯಲ್ ಮೀಡಿಯಾದಿಂದಲೂ ನಾಪತ್ತೆ ಆಗಿದ್ದಾಳೆ! ಮತ್ತೆ ಇವಳ ಪ್ರಸ್ತಾಪವೇಕೆ ಅಂತೀರಾ? ಇವಳನ್ನು ಮತ್ತೆ ಚರ್ಚೆಗೆ ತರಲಿದ್ದಾನೆ ಸ್ಟಾರ್‌ ಕಿಡ್‌, ಅನಿಲ್ ‌ಕಪೂರ್‌ ಮಗ ಹರ್ಷವರ್ಧನ್‌ ಕಪೂರ್‌. ಅವನು ಕತ್ರೀನಾ ವಿಕ್ಕಿ ಕುರಿತು ಖಚಿತಪಡಿಸಿದ ಸಂಗತಿ, ಸುದ್ದಿಗಾರರು ಇವಳ ಬೆನ್ನು ಬೀಳುವಂತಾಗಿದೆ. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಅಲ್ಲವೇ? ಕತ್ರೀನಾ ವಿಕ್ಕಿ ವಿಷಯದಲ್ಲಿ ಹೇಳಿಕೊಳ್ಳುವಂಥ ಹೊಗೆಯೂ ಕಾಣುತ್ತಿಲ್ಲ. ಇವಳ ಅತಿ ನಿಕಟವರ್ತಿ (ಇನ್ನೇನು ತಾನೇ ಹೇಳಲಾದೀತು?) ಸಲ್ಮಾನ್‌ ಸಹ, ಇವರಿಬ್ಬರೂ ಕೈಕೈ ಹಿಡಿದು ಓಡಾಡಿದ್ದು ನೋಡಿ ಏನೂ ಹೇಳಲಿಲ್ಲವಂತೆ! ವಿಕ್ಕಿ ಜೊತೆ ಎಂಥ ಕೌಶಲ ತೋರಿಸಲಿದ್ದಾಳೋ ಈ ಕತ್ರೀನಾ!

ನಾನು ಕೇವಲ ಕಮೆಡಿಯನ್‌ ಅಲ್ಲ!

sunil_grover_1

ಕಿರುತೆರೆ ಖ್ಯಾತಿಯ ಸುನೀಲ್ ‌ಗ್ರೋವರ್‌ ಕಪಿಲ್ ‌ಶರ್ಮ ಜೊತೆ ಮತ್ತೆ ಕೆಲಸ ಮಾಡಲು ಬಹುಶಃ ಅದೇಕೋ ಹಿಂಜರಿಯುತ್ತಿರುವಂತಿದೆ. ಇತ್ತೀಚೆಗೆ ಒಬ್ಬ ಆ್ಯಂಕರ್‌ ಇವನನ್ನು ಇದೇ ಪ್ರಶ್ನೆ ಕೇಳಿದಾಗ, ಆತ ಹೇಳಿದ ಉತ್ತರವೆಂದರೆ, ಭವಿಷ್ಯದಲ್ಲಿ ಯಾವುದಾದರೂ ಉತ್ತಮ ಪ್ರಾಜೆಕ್ಟ್ ದೊರಕಿದರೆ, ಕಪಿಲ್ ‌ಜೊತೆ ನಟಿಸುವೆ. ಆದರೆ ಅದಕ್ಕೂ ಮೊದಲು, ನನ್ನೊಳಗೆ ಅಡಗಿರುವ ಕಲಾವಿದ ಹೊರಬರಲು ಅವಕಾಶ ಕೊಡಿ. ನಾನು ಕೇವಲ ಟಿಪಿಕಲ್ ಕಮೆಡಿಯನ್‌ ಮಾತ್ರವಲ್ಲ, ಕಲಾವಿದ ಕೂಡ ಹೌದು. ಹೊಸ ವೆಬ್‌ ಸೀರೀಸ್‌ `ಸನ್‌ ಫ್ಲವರ್‌' ಮೂಲಕ ಈತ ಇದನ್ನು ನಿಜವೆಂದು ನಿರೂಪಿಸಿದ್ದಾನೆ. OTT ಪ್ರೇಕ್ಷಕರು ಈತನ ನಟನೆ ಕಂಡು ಬೆರಗಾಗಿದ್ದಾರೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ