ಉ. ಭಾರತದ ರಾಜಾಸ್ಥಾನ್‌ ರಾಜ್ಯದ ಒಂದು ಕುಗ್ರಾಮದಲ್ಲಿ ಹುಟ್ಟಿ ಬೆಳೆದ ರಿಚಾ ಮೀನಾ, 2012ರಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡು, ಒಂದಾದ ಮೇಲೊಂದರಂತೆ ಯಶಸ್ವೀ ಚಿತ್ರಗಳನ್ನು ನೀಡತೊಡಗಿದಳು. ಆಕೆ ಇದುವರೆಗೂ `ರನಿಂಗ್‌ ಶಾದಿ ಡಾಟ್‌ ಕಾಂ, ಮರ್ದಾನಿ-2, ಡ್ಯಾಡಿ' ತರಹದ ದೊಡ್ಡ ಬಜೆಟ್‌ ಚಿತ್ರಗಳಲ್ಲಿ ಮಿಂಚಿದ್ದಾಳೆ. ಇತ್ತೀಚೆಗೆ ಇವಳ `ಕಸಾಯಿ' ಹೆಚ್ಚು ಚರ್ಚೆಯಲ್ಲಿದೆ. ಇಷ್ಟು ಸಾಲದೆಂಬಂತೆ ಈ ಚಿಕ್ಕ ಅವಧಿಯಲ್ಲೇ ಇವಳು ನಟಿ, ನಿರ್ಮಾಪಕಿ, ಸಹನಿರ್ದೇಶಕಿಯಾಗಿ `ಘಮಂತು' ಕಿರುಚಿತ್ರದಲ್ಲಿ ತೊಡಗಿಕೊಂಡಿದ್ದಾಳೆ, ಎಲ್ಲರ ಶಭಾಷ್‌ಗಿರಿ ಗಿಟ್ಟಿಸಿದ್ದಾಳೆ. ಅವಳೊಂದಿಗೆ ಗೃಹಶೋಭಾ ನಡೆಸಿದ ಮಾತುಕಥೆ :

2012ರಲ್ಲಿ ಬಾಲಿವುಡ್‌ನಲ್ಲಿ ನಿನ್ನ ಎಂಟ್ರಿ ಆಗಿದ್ದರೂ ಇದುವರೆಗೂ ಕೇವಲ 4-5 ಪ್ರಮುಖ ಚಿತ್ರದಲ್ಲಿ ಮಾತ್ರ ಕಾಣಿಸಿಕೊಂಡಿದ್ದೀಯಾ..... 

ನಾನು ಇದುವವರೆಗೂ ಬೇಕಾದಷ್ಟು ಕೆಲಸ ಮಾಡಿದ್ದೇನೆ. ನಾನು ನ್ಯಾಷನಲ್ ಜ್ಯಾಗ್ರಫಿಕ್‌ ಚ್ಯಾನೆಲ್‌ಗಾಗಿ `ಸೀಕ್ರೆಟ್ಸ್ ಆಫ್‌ ತಾಜ್‌ಮಹಲ್' ಎಂಬ ಒಂದು ಡಾಕ್ಯುಮೆಂಟರಿ ಸಹ ಮಾಡಿದ್ದೆ. ಇರಲ್ಲಿ ಮೊದಲ ಸಲ ಕ್ಯಾಮೆರಾ ಮುಂದೆ ನಿಂತು ಮುಮ್ತಾಜ್‌ ಆಗಿ ನಟಿಸಿದ್ದೆ. ಅದಾದ ನಂತರ ಇದೇ ಚ್ಯಾನೆಲ್‌ಗಾಗಿ `ಕಿಂಗ್ಸ್ : ಮಹಾರಾಜ ಆಫ್‌ ಇಂಡಿಯಾ' ಶಾರ್ಟ್‌ ಫಿಲ್ಮ್ ತಯಾರಿಸಿದ್ದೆ. ಇದರಲ್ಲಿ ನಾನು ನೂರ್‌ ಜಹಾನ್‌ ಆಗಿದ್ದೆ. 3 ವರ್ಷಗಳ ಕಾಲ ಒಂದು ಪ್ರೊಡಕ್ಷನ್‌ ಹೌಸ್‌ನಲ್ಲಿ ವರ್ಕ್‌ ಮಾಡುತ್ತಾ ನಾನು ಎಡಿಟಿಂಗ್‌ನಲ್ಲಿ ಚೆನ್ನಾಗಿ ಪಳಗಿದೆ, ಸಹ ನಿರ್ದೇಶಕಿಯೂ ಆದೆ. ಹಲವು ಟಿವಿ ಧಾರಾವಾಹಿಗಳಿಗೆ ಕಾಸ್ಟಿಂಗ್‌ ಸಹ ಮಾಡಿದ್ದೇನೆ. 4 ಫೀಚರ್‌ ಫಿಲ್ಮ್ ಸಹ ಮಾಡಿದೆ. ನನ್ನ ಏಕಮಾತ್ರ ಉದ್ದೇಶವೆಂದರೆ, ಸದಾ ಉತ್ತಮ ಕ್ರಿಯೇಟಿವ್ ‌ಕೆಲಸ ಮಾಡುತ್ತಿರಬೇಕೆಂಬುದು. ನನಗೆ ಧಾರಾವಾಹಿಗಳ ನಾಯಕಿಯಾಗುವ ಆಸೆಯಿಲ್ಲ. ಇದಕ್ಕಾಗಿ ನನಗೆ ಹಲವು ಆಫರ್ಸ್‌ ಬಂದಿದ್ದವು, ನಾನೇ ಒಪ್ಪಲಿಲ್ಲ. ನಾನು ಹಲವು ಜಾಹೀರಾತುಗಳಲ್ಲಿ ಮಾಡೆಲ್ ‌ಆಗಿಯೂ ನಟಿಸಿರುವೆ. ನಾನು ಎಲ್ಲಿ ಸೂಟ್‌ ಆಗುವೆ, ಎಲ್ಲಿಲ್ಲ ಎಂಬುದು ನನಗೆ ಗೊತ್ತಿದೆ.

ಬಾಲಿವುಡ್‌ ಹೆಸರಾಗಿರುವುದೇ ಅಂಗಾಂಗ ಪ್ರದರ್ಶನಕ್ಕೆ.... ನೀನು ಇದಕ್ಕೆ ಒಪ್ಪದ ಕಾರಣ ಚಿತ್ರಗಳು ಕೈಬಿಟ್ಟು ಹೋದವೇ?

6

ಮಧ್ಯಮ ವರ್ಗದ ಹುಡುಗಿಯಾದ ನಾನು ನನಗಾಗಿ ಕೆಲವು ಲಿಮಿಟ್ಸ್ ಫಿಕ್ಸ್ ಮಾಡಿಕೊಂಡಿದ್ದೇನೆ, ಆ ಲಕ್ಷ್ಮಣರೇಖೆ ನಾನು ದಾಟಲಾರೆ! ಬಿಚ್ಚಮ್ಮನಾಗಿದ್ದರೆ ಮಾತ್ರ ಅವಕಾಶ ಅಂದರೆ ನನಗೆ ಅಂಥ ಚಿತ್ರಗಳೇ ಬೇಡ..... ಸೆಕ್ಸಿ ಗ್ಲಾಮರ್‌ ಪೋಸ್‌ಗಳ ಬದಲು ನನ್ನಲ್ಲಿನ ನೈಜ ನಟನೆಯ ಪ್ರತಿಭೆಯಿಂದ ನನಗೆ ಮುಂದೆ ಚಿತ್ರಗಳು ಸಿಗಬೇಕೆಂದು ಬಯಸುತ್ತೇನೆ. ಆ ಮೂಲಕ ಏನಾದರೂ ಸಾಧಿಸಲು ಇಷ್ಟಪಡುತ್ತೇನೆ. ನಾನೊಬ್ಬ ಅಪ್ಪಟ ಕಲಾವಿದೆ, ನಟಿಯೊಬ್ಬಳು ತನ್ನ ದೇಹ ಪ್ರದರ್ಶನದಿಂದ ಯಶಸ್ವಿ ಆಗುತ್ತಾಳೆ ಎಂದು ಎಲ್ಲರಿಗೂ ಗೊತ್ತು. ಆದರೆ ಆಗ ಯಾರೂ ಅವಳ ನಟನೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಅವಳಿರುವುದೇ ಬಿಚ್ಚಮ್ಮನಾಗಿ ಎಂದಾಗಿಬಿಡುತ್ತದೆ. ನನ್ನ ಪ್ರಕಾರ, ಒಬ್ಬ ನಟಿ ತನ್ನ ಅಭಿನಯ ಪ್ರತಿಭೆಯಿಂದ ಮುಂದೆ ಬರಬೇಕೇ ಹೊರತು ಈ ರೀತಿಯ ಸೆಕ್ಸಿ ಪೋಸ್‌ಗಳಿಂದಲ್ಲ. ಇನ್ನೊಂದು ವಿಷಯ, ರಿಲೀಸ್‌ ಆಗುವ ಬಹುತೇಕ ಚಿತ್ರಗಳಲ್ಲಿ ನಟಿ ಕಾಣಿಸಿಕೊಳ್ಳಲೇಬೇಕು ಅಂತೇನಿಲ್ಲ. ಅವಳಿಗೆ ಒಪ್ಪುವಂಥ ಪಾತ್ರವಾದರೆ ಸರಿ. ಅದೇ ರೀತಿ, ಒಂದು ಚಿತ್ರ, ಆ ಪಾತ್ರಕ್ಕೆ ನಾನು ಒಪ್ಪುವಂತಿದ್ದು, ಅದರಲ್ಲಿ ಕಥೆಗೆ ತಕ್ಕಂತೆ ಎಕ್ಸ್ ಪೋಶರ್‌ ಅತಿ ಅನಿವಾರ್ಯವಾದರೆ, ಅದನ್ನು ನಿರ್ದೇಶಕರು ಕಲಾತ್ಮಕವಾಗಿ ಹೇಗೆ ತೋರಿಸುತ್ತಾರೆ ಎನ್ನುವುದರ ಮೇಲೆ ಆ ಚಿತ್ರ ಒಪ್ಪಿಕೊಳ್ಳುತ್ತೇನೆ. ಹೀಗಾಗಿ ಪ್ರತಿ ಚಿತ್ರದಲ್ಲಿ ದೇಹ ಪ್ರದರ್ಶನಕ್ಕೆ ಖಂಡಿತಾ ಒಪ್ಪುದಿಲ್ಲ. ಯಾವ ನಿರ್ದೇಶಕರ ಮೇಲೆ ನಂಬಿಕೆ ಇಲ್ಲವೋ ಅಂಥವರ ಜೊತೆ ಖಂಡಿತಾ ನಟಿಸಲಾರೆ. ಗುಂಪಲ್ಲಿ ಕುರಿ ಮಂದೆಯಾಗಿ ಬೆರೆತು ಹೋಗಲು ನನಗೆ ಇಷ್ಟವಿಲ್ಲ. ಸತ್ಯದ ಕಥೆ ಆಧಾರಿತ `ಕಸಾಯಿ' ಚಿತ್ರದಲ್ಲಿ ನಾನು ಹೊಲಗದ್ದೆಗಳ ಮಧ್ಯೆ ರೊಮಾನ್ಸ್ ಮಾಡುವುದನ್ನು ಗಮನಿಸುವಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ