ಎಲ್ಲಿದ್ದಾಳೆ ಕೃತಿ?

ಬಹುಶಃ ಕೃತಿ ಈಗ ಅಗತ್ಯಕ್ಕಿಂತಲೂ ಹೆಚ್ಚಿನ ಸೇಫ್‌ ಝೋನ್‌ಗೆ ಹೋಗಿಬಿಟ್ಟಿದ್ದಾಳೆ ಅನ್ಸುತ್ತೆ. ಒಮ್ಮೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಮುಖ ತೋರಿಸುವುದುಂಟು, ಆದರೆ ಸುದ್ದಿಗಾರರ ಕ್ಯಾಮೆರಾದಿಂದ ಮೈಲುಗಟ್ಟಲೇ ದೂರ ಉಳಿದಿದ್ದಾಳೆ. ಹೋಗಲಿಬಿಡಿ, ಅವಳ ಅಭಿಮಾನಿಗಳಿಗಾಗಿ ಅಂತೂ ಒಂದು ಗುಡ್‌ ನ್ಯೂಸ್‌ ಇದೆ, ಅಂದ್ರೆ ಇದೇ ವರ್ಷ ಕೃತಿಯ 5 ಚಿತ್ರಗಳು ಶೂಟಿಂಗ್‌ ಅರಂಭಿಸಲಿವೆಯಂತೆ! ಸುದ್ದಿಗಾರರ ಪ್ರಕಾರ, ಕೃತಿ ಈಗ ಹೀರೋ ರಾಜ್‌ಕುಮಾರ್‌ ರಾವ್ ‌ಜೊತೆ ಪಂಜಾಬಿನ ಚಂಡೀಗಢದ ಒಂದು ಚಿತ್ರಕ್ಕಾಗಿ ಶೂಟಿಂಗ್‌ನಲ್ಲಿ ತೊಡಗಿದ್ದಾಳೆ. ಅಂದಹಾಗೆ ಕೃತಿ ಅಕ್ಷಯ್‌ ಕುಮಾರ್‌ ಜೊತೆ `ಬಚ್ಚನ್‌ ಪಾಂಡೆ' ಚಿತ್ರದಲ್ಲೂ ಕಾಣಿಸಲಿದ್ದಾಳೆ. ಆಗಾಗ ಬೆಳ್ಳಿತೆರೆಯಲ್ಲಿ ನಿನ್ನ ಮುಖ ತೋರಿಸುತ್ತಿರಮ್ಮ ಕೃತಿ ಇಲ್ಲದಿದ್ದರೆ ಜನ `ಎಲ್ಲಿದ್ದಾಳೆ ಕೃತಿ?' ಅಂತ ಕೇಳಿದರೆ ಆಶ್ಚರ್ಯವೇನಿಲ್ಲ, ಎನ್ನುತ್ತಾರೆ ಹಿತೈಷಿಗಳು.

ನೂರಾಳಿಗೀಗ ಸೆಲೆಬ್ರೇಶನ್ಮೂಡ್

noora_1

ಬಾಲಿವುಡ್‌ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳು ಹಾಗೂ ಮ್ಯೂಸಿಕ್‌ ವಿಡಿಯೋಗಳ ಮುಖಾಂತರ ನೂರಾ ಫತೇಹಿ ತನ್ನ ಫ್ಯಾನ್ಸ್ ಮನದಲ್ಲಿ ಭದ್ರ ಸ್ಥಾನ ಪಡೆದಿದ್ದಾಳೆ. ನೂರಾ ಇತ್ತೀಚೆಗೆ ಮೊರೆಕ್ಕೋದ ಮರುಭೂಮಿಯಲ್ಲಿ  ಹಾಲಿಡೇ ಎಂಜಾಯ್‌ಮಾಡುತ್ತಿದ್ದಾಳೆ. ಅಲ್ಲಿಂದಲೇ ಅವಳು ತನ್ನ ಫ್ಯಾನ್ಸ್ ಗಾಗಿ ಒಂದು ಗುಡ್‌ ನ್ಯೂಸ್‌ ಶೇರ್‌ ಮಾಡಿದ್ದಾಳೆ. ಅದೇನಂದ್ರೆ, ಸೋಶಿಯಲ್ ಮೀಡಿಯಾದ ಅವಳ ಒಂದು ಅಕೌಂಟ್‌ನಲ್ಲಿ ಫಾಲೋಯರ್ಸ್‌ ಸಂಖ್ಯೆ 20 ಮಿಲಿಯನ್‌ ಮೀರಿದೆಯಂತೆ! ಆಹಾ, ಇದಂತೂ ಸೆಲೆಬ್ರೇಶನ್‌ ಟೈಂ ಅಲ್ಲವೇ ನೂರಾ? ಎನ್ನುತ್ತಿದ್ದಾರೆ ಹಿತೈಷಿಗಳು.

ಕಾರ್ತಿಕ್‌ ಮಾಡಲಿದ್ದಾನೆ ಧಮಾಕಾ 

kartik_1

ಕೊರೋನಾ ಕಾರಣ ಬಹಳ ದಿನಗಳಿಂದ ಮನೆಯಲ್ಲೇ ಬಂಧಿಯಾಗಿರುವ ಕಾರ್ತಿಕ್‌ ಆರ್ಯನ್‌ ಇದೀಗ ಧಮಾಕಾ ಮಾಡುವ ಮೂಡ್‌ನಲ್ಲಿದ್ದಾನೆ. ಅಯ್ಯೋ..... ಇದು ಅವನ ರಿಯಲ್ ಧಮಾಕಾ, ಸ್ಟಾರ್‌ ಗಿರಿ ಏರಿಬಿಟ್ಟಿತೇ ಅಂತಲ್ಲ ಅಂದುಕೊಳ್ಳಬೇಡಿ. ಈತನ ಮುಂದಿನ ಚಿತ್ರ `ಧಮಾಕಾ' ಅಷ್ಟೆ, ಅದರಲ್ಲಿ ನಟಿಸಲಿದ್ದಾನೆ! ತನ್ನ ಬರ್ತ್‌ಡೇ ದಿನ FB‌ನಲ್ಲಿ ಈ ಚಿತ್ರದ ಪೋಸ್ಟರ್‌ ಶೇರ್ ಮಾಡುತ್ತಾ ಕಾರ್ತಿಕ್‌ ಈ ವಿಷಯ ತಿಳಿಸಿದ್ದಾನೆ. ಇವನ ಪಾಲಿಗಂತೂ ಈ ಚಿತ್ರ ಬಲು ವಿಶೇಷ. ಏಕೆಂದರೆ ಇವನ ಡ್ರೀಂ ಲೇಡಿ ಯಾಮಿನಿ ಗೌತಮ್ ಈ ಚಿತ್ರದ ನಾಯಕಿ. ಈ ಮಹಾನ್‌ ಧಮಾಕಾದ ಶೂಟಿಂಗ್‌ ಈ ಹೊಸ ವರ್ಷ ಆರಂಭ!

ಭಯ ಪಡಲೇಬೇಕು ಕಣಮ್ಮ ಸಾರಾ!

sara_1

ಸಾರಾ ಅಲಿಖಾನ್‌ ಮತ್ತು ವರುಣ್‌ ಧವನ್‌ರ ಜೋಡಿಯ `ಕೂಲಿ ನಂ1' ಚಿತ್ರ ಕಳೆದ ಷಾಂತ್ಯದ OTTಯಲ್ಲಿ ಬಿಡುಗಡೆ ಆಗಿತ್ತು. ಚಿತ್ರದ ಟ್ರೇಲರ್‌ ರಿಲೀಸ್‌ ಆದಂತೆ ಟ್ರೋಲಿಗರು ವ್ಯಂಗ್ಯದ ವಾಗ್ಬಾಣಕ್ಕೆ ತೊಡಗಿದರು. ಇದೇ ಸಾರಾ, ಸುಶಾಂತ್‌ನ ಸಾವಿಗೆ ತುಟಿ ಪಿಟಕ್‌ ಎನ್ನಲಿಲ್ಲ, ಜೊತೆಗೆ ನಶೆಯ ಮೂಡ್‌ನಲ್ಲಿರುತ್ತಾಳೆ ಎಂದು ಟೀಕಿಸಿದರು. ಈ ಚಿತ್ರದ ಟ್ರೇಲರ್‌ಗಂತೂ ರಾಶಿ ರಾಶಿ ಡಿಸ್‌ ಲೈಕ್‌ ಬಂದು ಅದೇ ದೊಡ್ಡ ರೆಕಾರ್ಡ್‌ ಆಗಲಿದೆ ಎಂದು ಕುಟುಕಿದ್ದಾರೆ. ಸುದ್ದಿಗಾರರ ಪ್ರಕಾರ ಈ ಎಲ್ಲಾ ಟ್ರೋಲಿಗರಿಂದ ಸಾರಾ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದಾಳಂತೆ. ಇದೇ ರೀತಿ ಮುಂದುವರಿದರೆ ತನ್ನ ಕೆರಿಯರ್‌ನ ಗತಿ ಗೋವಿಂದಾನೇ ಎಂದು ಭಯಪಡುತ್ತಿದ್ದಾಳೆ, ಭಯ ಪಡಬೇಕಾದ್ದೇ ಬಿಡಮ್ಮ ಎನ್ನುತ್ತಿದ್ದಾರೆ ಹಿತೈಷಿಗಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ