ಕಾಂತಾರ ಚಾಪ್ಟರ್-1 ಬಳಿಕ ಕನ್ನಡ ಚೆಲುವೆ ರುಕ್ಮಿಣಿ ವಸಂತ್ ನಸೀಬು ಕಂಪ್ಲೀಟ್ ಆಗಿ ಬದಲಾಗಿ ಹೋಯ್ತು. ಯೆಸ್.. ಕಾಂತಾರ ಕ್ವೀನ್ ಸದ್ಯ ಜೂನಿಯರ್ ಎನ್‌ಟಿಆರ್ ಜೊತೆಗಿನ ಡ್ರ್ಯಾಗನ್ ಹಾಗೂ ಯಶ್ ನಟನೆಯ ಟಾಕ್ಸಿಕ್ ಚಿತ್ರಗಳಲ್ಲಿ ನಟಿಸ್ತಿದ್ದಾರೆ. ಇದೀಗ ಮತ್ತೊಂದು ಮೆಗಾ ಪ್ರಾಜೆಕ್ಟ್‌ ರುಕ್ಮಿಣಿ ಪಾಲಿಗೆ ಒಲಿದಿದೆ ಎನ್ನಲಾಗುತ್ತಿದೆ.

ರಜನಿಕಾಂತ್ ನಟನೆಯ ತಲೈವಾರ್-173 ಸಿನಿಮಾ ಧರ್ಮನ್‌‌ಗೆ ಕಾಂತಾರಾ ಕ್ವೀನ್​ ರುಕ್ಮಿಣಿ ವಸಂತ್ ನಾಯಕನಟಿ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈಗಾಗಲೇ ಹಿರಿಯನಟಿ ಸಿಮ್ರಾನ್ ಹಾಗೂ ರಾಶಿ ಖನ್ನಾ ಚಿತ್ರದ ತಾರಾಗಣದಲ್ಲಿದ್ದು, ರುಕ್ಮಿಣಿ ವಸಂತ್​ ಹೊಸ ಎಂಟ್ರಿ ಎನ್ನಲಾಗುತ್ತಿದೆ.ಧರ್ಮನ್ ಚಿತ್ರದಲ್ಲಿ ಮೊದಲ ಬಾರಿಗೆ ಡಾಕ್ಟರ್ ರೋಲ್‌ ಮಾಡುತ್ತಿರುವ ರಜನಿಗೆ ಅಶ್ವತ್ ಮಾರಿಮುತ್ತು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಮಲ್ ಹಾಸನ್ ತಮ್ಮ ಪ್ರೊಡಕ್ಷನ್ ಬ್ಯಾನರ್‌‌ನಡಿ ಬಂಡವಾಳ ಹೂಡುತ್ತಿದ್ದಾರೆ. ಇತ್ತೀಚೆಗೆ ರಜನಿ-ಕಮಲ್ ಇಬ್ಬರೂ ತಮ್ಮ ಡೈರೆಕ್ಟರ್ ಜೊತೆ ಫಸ್ಟ್‌ಲುಕ್ ಲಾಂಚ್ ಮಾಡಿ, ಸುದ್ದಿಗೋಷ್ಠಿ ನಡೆಸಿದ್ದರು.

ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಆರೇಳು ವರ್ಷಗಳಲ್ಲೇ ರುಕ್ಮಿಣಿ ಪಾಲಾಗುತ್ತಿರುವುದು ಸಂತಸ ತಂದಿದೆ. ಆದರೆ ರಜನಿ ಜೊತೆ ರುಕ್ಕಿಣಿ ಅನ್ನೋ ಸುದ್ದಿ  ಮಾತ್ರ ಅಫಿಶಿಯಲಿ ಎಲ್ಲೂ ಅನೌನ್ಸ್ ಆಗಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ