ಸೂಪರ್‌ಸ್ಟಾರ್ ರಜನಿಕಾಂತ್ ತಮ್ಮ ಸಹ ನಟ ಕಮಲ್ ಹಾಸನ್ ಅವರೊಂದಿಗೆ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಆ ಯೋಜನೆಗಾಗಿ ಮಾತುಕತೆ ನಡೆಸುತ್ತಿರುವುದಾಗಿ ದೃಢಪಡಿಸಿದ್ದಾರೆ.

ಚೆನ್ನೈ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಯೋಜನೆಯನ್ನು ಕಮಲ್ ಹಾಸನ್ ಅವರ ಬ್ಯಾನರ್ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಮತ್ತು ರೆಡ್ ಜೈಂಟ್ ಮೂವೀಸ್ ಜಂಟಿಯಾಗಿ ನಿರ್ಮಿಸಲಿವೆ. ಸದ್ಯಕ್ಕೆ ನಿರ್ದೇಶಕರು ಮತ್ತು ಸ್ಕ್ರಿಪ್ಟ್ ಇನ್ನೂ ಅಂತಿಮಗೊಂಡಿಲ್ಲ ಎಂದು ಹೇಳಿದ್ದಾರೆ.

'ನಾವು ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಮತ್ತು ರೆಡ್ ಜೈಂಟ್ ಮೂವೀಸ್ ಜೊತೆ ಚಿತ್ರ ಮಾಡಲಿದ್ದೇವೆ. ನಿರ್ದೇಶಕರು ಯಾರೆಂದು ಇನ್ನೂ ನಿರ್ಧರಿಸಿಲ್ಲ. ಕಮಲ್ ಮತ್ತು ನಾನು ಒಟ್ಟಿಗೆ ಚಿತ್ರ ಮಾಡಲು ಬಯಸುತ್ತೇವೆ. ನಮಗೆ ಉತ್ತಮ ಕಥೆ ಮತ್ತು ಪಾತ್ರ ಸಿಕ್ಕರೆ, ನಟಿಸುತ್ತೇವೆ' ಎಂದು ತಲೈವ ಹೇಳಿದ್ದಾರೆ.

ಈ ಮೂಲಕ ಸುಮಾರು 46 ವರ್ಷಗಳ ನಂತರ ಇಬ್ಬರು ತಮಿಳು ಸಿನಿಮಾ ದಂತಕಥೆಗಳು ತೆರೆಯ ಮೇಲೆ ಮತ್ತೆ ಒಂದಾಗುತ್ತಿರುವುದನ್ನು ಕಾಣಬಹುದು.. ರಜಿನಿಕಾಂತ್ ಮತ್ತು ಕಮಲ್ ಹಾಸನ್ ಕೊನೆಯ ಬಾರಿಗೆ 1979ರ ಫ್ಯಾಂಟಸಿ ಚಿತ್ರ 'ಅಲಾವುದ್ದಿನಂ ಅಥ್ಬುತ ವಿಲಕ್ಕುಂ'ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ರಜಿನಿಕಾಂತ್ ಮುಂದಿನ 'ಜೈಲರ್ 2'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರ 2023ರ ಹಿಟ್ ಚಿತ್ರ 'ಜೈಲರ್'ನ ಮುಂದುವರಿದ ಭಾಗ. ಈ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿದ್ದಾರೆ. ಅವರು ಇತ್ತೀಚೆಗೆ ಆಗಸ್ಟ್‌ನಲ್ಲಿ ಬಿಡುಗಡೆಯಾದ 'ಕೂಲಿ' ಚಿತ್ರದಲ್ಲಿ ಅವರೊಂದಿಗೆ ಕೆಲಸ ಮಾಡಿದ್ದರು.

ಕಮಲ್ ಹಾಸನ್ ಇತ್ತೀಚೆಗೆ ಖ್ಯಾತ ಚಲನಚಿತ್ರ ನಿರ್ಮಾಪಕ ಮಣಿರತ್ನಂ ನಿರ್ದೇಶನದ 'ಥಗ್ ಲೈಫ್'ನಲ್ಲಿ ನಟಿಸಿದ್ದರು. ಈ ಚಿತ್ರ ಜೂನ್‌ನಲ್ಲಿ ಬಿಡುಗಡೆಯಾಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ