ಜಾಗೀರ್ದಾರ್*
ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ
“ಕೊರಗಜ್ಜ” ಚಿತ್ರದಲ್ಲಿ, ಕೊರಗಜ್ಜನ ಸಾಕುತಾಯಿ ‘ಬೈರಕ್ಕೆ’ ಯ ವಿಶೇಷ ರೀತಿಯ ಪಾತ್ರ ನಿರ್ವಹಿಸಿರುವ ನಟಿ ಶ್ರತಿ ಯವರ 50ನೆಯ ಜನ್ಮ ದಿನ ಕಾರ್ಯಾಕ್ರಮದಲ್ಲಿ ಚಿತ್ರದ
ನಿರ್ದೇಶಕ ಸುಧೀರ್ ಅತ್ತಾವರ್, ನಟಿ ಭವ್ಯ, ನಿರ್ಮಾಪಕ ತ್ರಿವಿಕ್ರಮ ಸಪಲ್ಯ , ಕಾರ್ಯಕಾರಿ ನಿರ್ಮಾಪಕ ಮತ್ತು ಎಡಿಟರ್
ವಿದ್ಯಾಧರ್ ಶೆಟ್ಟಿ ಮೊದಲಾದವರು ಕಾರ್ಯಾಕ್ರಮದಲ್ಲಿ ಪಾಲ್ಗೊಂಡು ನೆನಪಿನ ಕಾಣಿಕೆ ಮತ್ತು
ಹೂಗುಚ್ಚಗಳೊಂದಿಗೆ ಶುಭ ಹಾರೈಸಿದರು.
“ಕೊರಗಜ್ಜ” ಸಿನಿಮಾದ ಬಗ್ಗೆ ಇಂಡಸ್ಟ್ರಿಯ ಹಲವಾರು ನಟರು, ನಿರ್ದೇಶಕರು ನಿರ್ಮಾಪಕರು ಶ್ರುತಿ ಯವರ ಈ ಕಾರ್ಯಕ್ರಮಾದಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿ, ಕೊರಗಜ್ಜ ಸಿನಿಮಾದ ಬಗ್ಗೆ ತಮಗಿರುವ ತಮಗಿರುವ ಕುತೂಹಲ ಹೊರಹಾಕಿದರು.ಸುಮಾರು 2 ಕೋಟಿ ರೂಪಾಯಿಗಳಷ್ಟು ಖರ್ಚಾಗಿರುವ
ವಿ ಎಫ್ ಎಕ್ಸ್ ಮತ್ತು ಗ್ರಾಫಿಕ್ಸ ಕೆಲಸ ವಿಳಂಬ ಗೊಂಡಿರುವುದೇ ಚಿತ್ರ ಬಿಡುಗಡೆ ಮುಂದೂಡಲು ಕಾರಣ.
ಈಗ ಸಿನಿಮಾದ ಎಲ್ಲಾ ವಿಭಾಗದ ಕೆಲಸಗಳು ಮುಗಿದು ಬಿಡುಗಡೆಗೆ ಸಿದ್ಧವಾಗಿದೆ.
ಶ್ರುತಿ ಯವರ ಬೈರಕ್ಕೆ ಪಾತ್ರ ಅವರ ಲೈಫ್ ಟೈಮ್ ಪರ್ಫಾರ್ಮೆನ್ಸ್ ಎಂಬ ಮಾತು ಕೇಳಿಬರುತ್ತಿದೆ.
ಅವರು ಅಭಿನಯಿಸಿರುವ ಪಾತ್ರದ ಕ್ಲೈಮ್ಯಾಕ್ಸನ್ನು 4ಬಾರಿ ಚಿತ್ರೀಕರಿಸಲಾಗಿತ್ತು.
ಹಾಲಿವುಡ್ ನಟ ಕಬೀರ್ ಬೇಡಿ, ಭವ್ಯ, ಬಾಲಿವುಡ್ ಕೊರಿಯೋಗ್ರಾಫರ್ ಗಳಾದ ಸಂದೀಪ್ ಸೋಪರ್ಕಾರ್, ಗಣೇಶ್ ಆಚಾರ್ಯ, ಶುಭ ಪೂಂಜ ಮೊದಲಾದವರ ತಾರಾಗಣ ಇರುವ ಈ ಚಿತ್ರದಲ್ಲಿ ಋತಿಕ ಎನ್ನುವ ಅಚ್ಚ ಕನ್ನಡದ ಪ್ರತಿಭೆ ಚಿತ್ರರಂಗಕ್ಕೆ ಪರಿಚಯವಾಗಲಿದ್ದಾರೆ.ತ್ರಿವಿಕ್ರಮ ಸಿನಿಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿ ಮೂಡಿಬರುತ್ತಿರುವ ಈ
ಚಿತ್ರಕ್ಕೆ ಗೋಪಿ ಸುಂದರ್ ಸಂಗೀತ,ಮಲಯಳಂ ನ ಖ್ಯಾತ ಮನೋಜ್ ಪಿಳ್ಳೈ ಕ್ಯಾಮರ ಕೈ ಚಳಕ ಇದೆ.
ತನ್ನ 50 ನೆಯ ಹುಟ್ಟು ಹಬ್ಬದ ಕಾರ್ಯಕ್ರಮಾದಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರೊಂದಿಗೆ ತಾನು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿರುವ ಕೊರಗಜ್ಜ ಚಿತ್ರದ ನಿರ್ದೇಶಕರಿಗೆ ಮತ್ತು ತಂಡದ ಎಲ್ಲರಿಗೂ ಶಾಲು ಮತ್ತು ನೆನಪಿನ ಕಾಣಿಕೆಯೊಂದಿಗೆ ಶ್ರತಿ ಯವರು ಗೌರವಿಸಿದರು.