ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲಾಪಾಲಾಗಿರುವ ನಟ ದರ್ಶನ್ ಕುರಿತು ನಟಿ ರಮ್ಯಾ ಮಾತನಾಡಿದ್ದು, ‘ನಟ ದರ್ಶನ್​ ಕಷ್ಟಪಟ್ಟು ಮೇಲೆ ಬಂದಿದ್ದರು.. ಆದರೆ ಜೀವನ ಹಾಳು ಮಾಡಿಕೊಡ್ರು’ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ, ‘ಚಿತ್ರರಂಗಕ್ಕೆ ದರ್ಶನ್‌ ಲೈಟ್‌ಬಾಯ್‌ ಆಗಿ ಬಂದ್ರೂ, ಕಷ್ಟಪಟ್ಟು ಮೇಲೆ ಬಂದಿದ್ರು. ಆದ್ರೆ ಜೀವನ ಹಾಳುಮಾಡಿಕೊಂಡ್ರು. ಹೀಗೆ ಆಗದೇ ಇದ್ದಿದ್ದರೇ ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಬಹುದಿತ್ತು ಎಂದು ಹೇಳಿದ್ದಾರೆ.

ದರ್ಶನ್ ಅಭಿಮಾನಿಗಳ ವಿವಾದ ಕುರಿತು ಮಾತನಾಡಿದ ರಮ್ಯಾ, ‘ ನಾನು ಹೇಳಬೇಕಾದ್ದನ್ನೆಲ್ಲ ಹೇಳಿದ್ದೀನಿ. ದೂರು ಕೊಟ್ಮೇಲೆ ಬ್ಯಾಡ್‌ ಕಾಮೆಂಟ್ಸ್‌ ಬರ್ತಿಲ್ಲ. ಎಷ್ಟೋ ಜನ ಪೋನ್ ಸ್ವಿಚ್ ಆಫ್‌ ಮಾಡಿ ಮನೆ ಬಿಟ್ಟಿದ್ದಾರೆ. ಇನ್ನಷ್ಟು ಮಂದಿ ಅರೆಸ್ಟ್ ಆಗಿದ್ದಾರೆ ಎಂದರು.

ಇದೇ ವೇಳೆ ನಟ ದರ್ಶನ್ ಮತ್ತು ಗ್ಯಾಂಗ್ ನ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಮಾತನಾಡಿ, ‘ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತಿಸುವುದಾಗಿ ಹೇಳಿದರು.

‘ಸುಪ್ರೀಂ ತೀರ್ಪಿನಿಂದ ರೇಣುಕಾಸ್ವಾಮಿ ಹೆಂಡತಿ, ಮಗುವಿಗೆ ನ್ಯಾಯ ಸಿಕ್ಕಿದೆ. ಈ ಬೆಳವಣಿಗೆಯಿಂದ ಹೆಣ್ಣುಮಕ್ಕಳಿಗೆ ಧೈರ್ಯ ಬಂದಿದೆ. ಎಲ್ಲ ಒಳ್ಳೆಯದಾಗಿದೆ ಅಂದುಕೊಳ್ತೀನಿ ಎಂದರು.

ಇನ್ನೂ ದರ್ಶನ್‌ ಪತ್ನಿ ವಿಜಯಲಕ್ಷ್ಮಿ, ಸೋಶಿಯಲ್ ಮೀಡಿಯಾ ಹ್ಯಾಂಡಲ್ ಜವಾಬ್ದಾರಿ ಹೊತ್ತ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ನಡೆಯನ್ನು ಸ್ವಾಗತಿಸುವೆ. ಇದು ಒಳ್ಳೆ ಬೆಳವಣಿಗೆ, ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಈ ಮೂಲಕ ಒಳ್ಳೆ ಸಂದೇಶ ಕೊಡಬಹುದು. ಅವರು ಸಹ ಹೆಣ್ಣು, ಹೀಗಾಗಿ ಇದು ಒಳ್ಳೆ ಬೆಳವಣಿಗೆ ಎಂದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ