ರಂಜನಿ ರಾಘವನ್

ಇಡೀ ಕರುನಾಡೇ ಮೆಚ್ಚಿಕೊಂಡು ಅಪ್ಪಿಕೊಂಡಿರುವ, ಅಭಿಮಾನದಿಂದ ಕನ್ನಡತಿ ಎಂಬ ಕಿರೀಟ ತೊಟ್ಟಿರುವವರು ರಂಜನಿ ರಾಘವನ್‌. ಕಿರುತೆರೆಯಲ್ಲಿ ಕನ್ನಡ ಟೀಚರ್‌ ಎಂದೇ ಖ್ಯಾತಿ ಗಳಿಸಿರುವ ರಂಜನಿ, ನಟಿಯಾಗಿ, ಬರಹಗಾರ್ತಿಯಾಗಿ ಇದೀಗ ನಿರ್ದೇಶಕಿಯಾಗಿಯೂ ಬಡ್ತಿ ಪಡೆದಿದ್ದಾರೆ. `ಪುಟ್ಟ ಗೌರಿ ಮದುವೆ, ಕನ್ನಡತಿ' ಧಾರಾವಾಹಿಗಳ ಮೂಲಕ ಮನೆಮನೆಗಳಲ್ಲಿ ಎಲ್ಲರ ಮನಮುಟ್ಟುವಂತೆ ನಟಿಸಿದ್ದ ಅವರು, ಈಗ ಚಿತ್ರವೊಂದಕ್ಕೆ ಡೈರೆಕ್ಷನ್‌ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸ್ವರ ಮಾಂತ್ರಿಕ ಇಳಯರಾಜ ಸಂಗೀತ ನಿರ್ದೇಶನ ನೀಡುತ್ತಿದ್ದಾರೆ.

ಅಪ್ಪಟ ಕನ್ನಡತಿಯಾಗಿ ತಮ್ಮ ಪಾತ್ರದಿಂದಲೇ ಎಲ್ಲರಿಗೂ ಚಿರಪರಿಚಿತರಾಗಿರುವ ರಂಜನಿ, ಕೆಲವು ಸೀರಿಯಲ್ ಗಳಿಗೆ ಕ್ರಿಯೇಟಿವ್ ‌ಡೈರೆಕ್ಟರ್‌ ಆಗಿಯೂ ಕೆಲಸ ಮಾಡಿದ್ದಾರೆ. ಕನ್ನಡವಲ್ಲದೇ ಮಲೆಯಾಳಂ ಧಾರಾವಾಹಿಯಲ್ಲೂ ನಟಿಸಿದ್ದಾರೆ. `ರಾಜಹಂಸ' ಮೂಲಕ ಬಿಗ್‌ ಸ್ಕ್ರೀನ್‌ ಗೆ ಎಂಟ್ರಿ ಕೊಟ್ಟ ಅವರು, `ಟಕ್ಕರ್‌, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ನೈಟ್‌ ಕರ್ಫ್ಯೂ, ಕಾಂಗರೂ' ಸೇರಿದಂತೆ ಕೆಲವು ತೆಲುಗು ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Soumya-rao-(6)

ಸೌಮ್ಯಾ ರಾವ್

‌ಕರ್ನಾಟಕ ಮೂಲದ ನಟಿ, ನಿರೂಪಕಿ ಸೌಮ್ಯಾ ರಾವ್‌, ಕನ್ನಡದವರಾದರೂ ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕನ್ನಡ ನ್ಯೂಸ್‌ ರೀಡರ್‌ ಆಗಿ ಲೈವ್ ‌ಶೋಗಳನ್ನು ನಡೆಸಿಕೊಡುತ್ತಿದ್ದ ಸೌಮ್ಯಾ ರಾವ್‌, ತಮಿಳು, ತೆಲುಗು ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಭಾಗಿಯಾಗುತ್ತಾರೆ. ಧಾರಾವಾಹಿ ಆರಂಭದಲ್ಲಿ ನರ್ಸ್‌ ಪಾತ್ರ ಮಾಡುತ್ತಿದ್ದ ಸೌಮ್ಯಾ, ಆಮೇಲೆ ಹೀರೋಯಿನ್‌ ತಂಗಿ ಪಾತ್ರ ಮಾಡುತ್ತಾ ಬಂದರು. ತಮಿಳು ಧಾರಾವಾಹಿಯಲ್ಲೂ ನಟಿಸಿದ ಅವರು, ತೆಲುಗು ರಿಯಾಲಿಟಿ ಶೋ `ಜಬರ್ದಸ್ತ್'ನಲ್ಲಿ ನಿರೂಪಕಿಯಾದರು.

ತಮಿಳು ಧಾರಾವಾಹಿ ರೋಜಾ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಸೌಮ್ಯಾ ರಾವ್ ‌ಗೆ ಅವರ ಸಾಕ್ಷಿ ಪಾತ್ರ ಶೀಘ್ರವೇ ಪ್ರೇಕ್ಷಕರ ಗಮನ ಸೆಳೆಯಿತು. ನಂತರ ಕಿರುತೆರೆಯಲ್ಲಿ ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರಾದರು. ತಮಿಳಿನಲ್ಲಿ `ನೆಂಜಮ್ ಮರಪ್ಪದಿಲ್ಲೈ, ಲಿಲ್ಲಿ, ಮಿನ್ನಿ, ತಿರುಮತಿ ಹಿಟ್ಲರ್‌' ತೆಲುಗಿನ `ಶ್ರೀಮಂತುಡು' ಚಿತ್ರದಲ್ಲೂ ಅಭಿನಯಿಸಿದರು. ನಿರೂಪಕಿಯಾಗಿ ಆಕೆಯ ಯಶಸ್ಸು ಮತ್ತಷ್ಟು ಅವಕಾಶಗಳಿಗೆ ಕಾರಣವಾಯಿತು. ಸ್ಟಾರ್‌ ಮಾಮ್ ದಲ್ಲಿ ಕಿಲಾಡಿ ಗರ್ಲ್ಸ್ ಮತ್ತು ಕಿರಿಕ್‌ ಬಾಯ್ಸ್ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

Neetha-ashok-(3)

ಮತ್ತೆ ಮರಳಿದ ನೀತಾ ಅಶೋಕ್

ಯಶೋದೆ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾದರು ನೀತಾ ಅಶೋಕ್‌. ದಶಕಗಳ ಹಿಂದೆ ಈ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಯಶೋದೆ' ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ನೀತಾ ಅಶೋಕ್‌, ಇದೀಗ `ನಾ ನಿನ್ನ ಬಿಡಲಾರೆ' ಧಾರಾವಾಹಿಯ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಆರು ವರ್ಷಗಳ ನಂತರ ಕಿರುತೆರೆ ನಟನೆಗೆ ಹಿಂದಿರುಗಿದ್ದಾರೆ. ಮುದ್ದು ಮುಖದ ಮುಗ್ಧ ಮನಸ್ಸಿನ ಯಶೋದೆ ಧಾರಾವಾಹಿಯುದ್ದಕ್ಕೂ ಉಡುಪಿಯ ಗಲ್ಲಿ ಗಲ್ಲಿ ಸುತ್ತಿ ಉಡುಪಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದರು. `ನಾ ನಿನ್ನ ಬಿಡಲಾರೆ' ಎಂಬ ಹಾರರ್‌ ಧಾರಾವಾಹಿಯಲ್ಲಿ ನಂದಿನಿ ಪಾತ್ರದ ಮೂಲಕ ಮತ್ತೆ ಕಾಣಿಸಿಕೊಂಡಿದ್ದರು. ಅದಾದ ಮೇಲೆ `ನೀಲಾಂಬರಿ' ಎಂಬ ಹಾರರ್‌ ಧಾರಾವಾಹಿಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದರು. ಕಿಚ್ಚ ಸುದೀಪ್‌ರ `ವಿಕ್ರಾಂತ್‌ರೋಣ' ಸಿನಿಮಾದಲ್ಲಿ ಅಪರ್ಣಾ ಬ್ಲಾಳ್‌ ಆಲಿಯಾಸ್‌ ಪನ್ನಾ ಆಗಿ ಅಭಿನಯಿಸಿದ್ದರು. ಪ್ರಸ್ತುತ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ವಿಭಿನ್ನ ಕಥೆಯನ್ನು ಹೇಳ ಹೊರಟಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ