ಭೂಮಿ ಪೆಡ್ನೇಕರ್ ತನ್ನ ಚಿನಕುರುಳಿ ಮಾತುಗಳಿಂದ ಸದಾ ಎಲ್ಲರ ಗಮನ ಸೆಳೆಯುತ್ತಾಳೆ. ಇತ್ತೀಚೆಗೆ ಇವಳು ತನ್ನ ಮುಂದಿನ `ದುರ್ಗಾವತಿ' ಚಿತ್ರಕ್ಕಾಗಿ ಶೂಟಿಂಗ್‌ನಲ್ಲಿದ್ದಾಗ ಅವಳನ್ನು ರಣವೀರ್ ಸಿಂಗ್ ನಟಿಸಿದ್ದ `ರಾಮಲೀಲಾ, ಬ್ಯಾಂಡ್ ಬಾಜಾ ಬಾರಾತ್' ಚಿತ್ರಗಳಿಗೆ ಸಂಬಂಧಿಸಿದಂತೆ ಒಂದು ಪ್ರಶ್ನೆ ಕೇಳಿದಾಗ, ಅವಳು ಸಲೀಸಾಗಿ ಚಿಟಿಕೆ ಹಾರಿಸುತ್ತಾ ರಣವೀರ್ ಬಗ್ಗೆ ಹೇಳಿದಳು, ಆತ ಒಬ್ಬ ಉತ್ತಮ ಸೆಕ್ಸ್ ಡಾಕ್ಟರ್ ಆಗಬಲ್ಲ ಎಂದಳು! ಭೂಮಿ ಪ್ರಕಾರ ಆತ ನಟನೆ ಬಿಟ್ಟು ಬೇರೆ ಪ್ರೊಫೆಶನಲ್‌ನಲ್ಲಿ ತೊಡಗಿದ್ದರೆ, ಅದು ಇಂಥ ಉದ್ಯೋಗವೇ ಆಗಿರಬೇಕೆಂದಳು. ಇತ್ತೀಚೆಗೆ ರಣವೀರ್ ದೀಪಿಕಾರ ಮಧ್ಯೆ ಟೆನ್ಶನ್ ಹೆಚ್ಚುತ್ತಿರುವಾಗ ಈ ಮಹಾತಾಯಿ ಹೀಗಾ ಹೇಳುವುದು....? ಟೆನ್ಶನ್ ಏಕೆಂಬುದು ಓದುಗರ ಊಹೆಗೆ ಬಿಟ್ಟದ್ದು.
ಹಾಲಿಡೇ ಮೂಡ್‌ನಲ್ಲಿ ಇದ್ದದ್ದೂ ಹಾಳಾಗಿ ಬಿಡಬಾರದು!
ಕೃತಿ ಖರ್ಬಂದಾ ಹಾಗೂ ಪುಲಕಿತ್ ಸಾಮ್ರಾಟ್ ಇತ್ತೀಚೆಗೆ ವೇಕೇಶನ್ನಿನ ಮಜಾ ಉಡಾಯಿಸುತ್ತಿದ್ದಾರೆ. ಪರಸ್ಪರರ ಜೊತೆ ಟೈಂಪಾಸ್ ಇಬ್ಬರಿಗೂ ಪ್ರಿಯವೇ! ಇಬ್ಬರಿಗೂ ತಾವು ಪರಸ್ಪರ ಪರ್ಫೆಕ್ಟ್ ಜೋಡಿ ಎಂದೇ ಅನಿಸುತ್ತಿದೆ. ಆಹಾ, ಇಬ್ಬರ ಕೆಮಿಸ್ಟ್ರಿ ಅದೆಷ್ಟು ಚೆನ್ನಾಗಿ ಹೊಂದಿಕೊಂಡಿದೆ ಎಂದರೆ.... ಅತ್ತ ಪುಲಕಿತ್ ಬಳಿ ಚಿತ್ರಗಳಿಲ್ಲ, ಇತ್ತ ಕೃತಿ ಬಳಿ ಕೆಲಸವಿಲ್ಲ. ಇಬ್ಬರೂ ಸೇರಿ ನೆನಪಿಸಿಕೊಳ್ಳುವಂಥ ಭಾರಿ ಹಿಟ್‌ನ ಬ್ಲಾಕ್ ಬಸ್ಟರ್ ಚಿತ್ರ ನೀಡಿದ್ದಾರಾ ಎಂದರೆ ಅದೂ ಇಲ್ಲ. ಇವರಿಗೆ ಹಿತೈಷಿಗಳ ಸಲಹೆ ಎಂದರೆ, ಮೋಜು ಮಜಾ ಉಡಾಯಿಸಿದ್ದು ಸಾಕು, ಮೊದಲು ಬಾಲಿವುಡ್‌ಗೆ ಮರಳಿ ಯಾವುದಾದರೂ ಕೆಲಸ ಹುಡುಕಿಕೊಳ್ಳಿ, ಇಲ್ಲದಿದ್ದರೆ ಪ್ರೇಕ್ಷಕರು ಇವರಾರು ಎಂದು ಕೇಳಿಯಾರು..... ಎಂಬುದು. ಹಾಲಿಡೇ ಮೂಡ್‌ನಲ್ಲಿ ಇದ್ದದ್ದೂ ಹಾಳಾಗಿ ಬಿಡಬಾರದು ಎಂಬುದೇ ಹಿತೈಷಿಗಳ ಕಾಳಜಿ.
ಮತ್ತೆ ಒಂದಾದ ದಿಶಾ ಆದಿತ್ಯ ಜೋಡಿ
`ಮಲಂಗ್' ಚಿತ್ರದಿಂದ ದಿಶಾ ಆದಿತ್ಯರ ಜೋಡಿ ಅದ್ಭುತ ಕೆಮಿಸ್ಟ್ರಿ ಪ್ರದರ್ಶಿಸಿತು. ಚಿತ್ರ ಗಲ್ಲಾಪೆಟ್ಟಿಗೆಯಲ್ಲೂ ಯಶಸ್ವಿ ಎನಿಸಿತು. ಸುದ್ದಿಗಾರರ ಪ್ರಕಾರ, ಈ ಜೋಡಿ ಮತ್ತೆ ಬೆಳ್ಳಿ ತೆರೆಯಲ್ಲಿ ಗ್ಲಾಮರಸ್ ಆಗಿ ರಾರಾಜಿಸಲಿದೆ. ಇದುವರೆಗೂ ಚಿತ್ರದ ಶೀರ್ಷಿಕೆ ಫಿಕ್ಸ್ ಆಗಿಲ್ಲ. ಆದರೆ ಇವರಿಬ್ಬರೂ ಅಹ್ಮದ್ ಖಾನ್‌ರ ಹೊಸ ಚಿತ್ರದಲ್ಲಿ ಒಂದಾಗಿ ನಟಿಸಲಿದ್ದಾರೆ ಎಂಬುದಂತೂ ಖಚಿತ. ಆದಿತ್ಯ ಮೊದಲೇ ಈ ಚಿತ್ರಕ್ಕಾಗಿ ಸಹಿ ಹಾಕಿದ್ದ. ಈಗ ದಿಶಾಳ ಸಹಿ ಒಂದೇ ಬಾಕಿ ಇತ್ತು. ಹಿತೈಷಿಗಳ ಸಲಹೆ ಎಂದರೆ, ಆದಿತ್ಯ ಹುಷಾರು ಕಣಪ್ಪ..... ನಿನ್ನ ನಾಯಕಿ ಬೇರೆ ಆನ್ ಲೈನ್ ಹೀರೋ ಜೊತೆ ಆಫ್ ಲೈನ್‌ನಲ್ಲೂ ಅವನಿಗೇ ಸಂಗಾತಿ ಆದಾಳು!
ನಾನು ಚಟಕ್ಕೆ ಬಿದ್ದವನಲ್ಲ!
ಸ್ಯಾಂಡಲ್ ವುಡ್, ಬಾಲಿವುಡ್‌ನಲ್ಲಿ ಎಲ್ಲೆಲ್ಲೂ ಡ್ರಗ್ಸ್ ನದೇ ಮಾತು.... ಇದರಡಿ ಕಾನೂನಿನ ಕಪಿಮುಷ್ಟಿಗೆ ಸಿಲುಕಿದ ಹಲವು ಸ್ಟಾರ್‌ಗಳಲ್ಲಿ ಇದೀಗ ಹೊಸದಾಗಿ ಸಿಲುಕಿದವನು ಅಂದ್ರೆ ಕರಣ್ ಜೋಹರ್. ಅಗ್ನಿಪರೀಕ್ಷೆ ಇವನನ್ನೂ ಬಿಡಲಿಲ್ಲ. ಸಂಬಂಧಿಗಳಿಗೆ ಮಾತ್ರ ಮಣೆ ಹಾಕುವ ನಿರ್ದೇಶಕ ಎಂಬ ಕೆಟ್ಟ ಹೆಸರು ಮೊದಲೇ ಇತ್ತು, ಇದೀಗ ಈ ಹಣೆಪಟ್ಟಿಯೂ ಸೇರಿತು. ಸೋತು ಸೊಪ್ಪಾದ ಕರಣ್ ಸ್ಪಷ್ಟೀಕರಣ ನೀಡಲೇ ಬೇಕಾಯ್ತು. ತಾನೆಂದೂ ಅಂಥ ಡ್ರಗ್ಸ್ ಸೇವಿಸಿದವನಲ್ಲ ಅಥವಾ ಡ್ರಗ್ಸ್ ಸಪ್ಲೈಗೆ ಸಹಕರಿಸಿದವನೂ ಅಲ್ಲ ಎಂದಿದ್ದಾನೆ. ಮೀಡಿಯಾ ಕೆಣಕುತ್ತಿರುವುದೆಂದರೆ, ಅಲ್ಲಯ್ಯ ಕರಣ್.... ನಿನ್ನ ಮಾತನ್ನು ನಿನ್ನ ಫ್ಯಾನ್ಸ್ ಒಪ್ಪಬಹುದೇ ಹೊರತು, ಕಾನೂನಲ್ಲ.... ಅದಕ್ಕೆ ಸಾಕ್ಷಿ ಬೇಕು. ಈ ಪ್ರಕರಣ ಎಷ್ಟು ಗೋಜಲಾಗಿದೆ ಎಂದರೆ ಇದೀಗ ಈತ ಏರ್ಪಡಿಸಿದ್ದ ಒಂದು ಪಾರ್ಟಿಯ ವೈರಲ್ ವಿಡಿಯೋವನ್ನು ಪರೀಕ್ಷೆಗಾಗಿ ಕಳುಹಿಸಿದೆ. ಈತ ಸತ್ಯಪ್ಪನೋ ಸುಳ್ಳಪ್ಪನೋ ಆ ಕಾನೂನಿನ ತೀರ್ಪಿನ ಮೇಲೆ ನಿಂತಿದೆ.